112 ತುರ್ತು ಕರೆ ಸಂಖ್ಯೆ ಲೋಕಾರ್ಪಣೆ : ಸದುಪಯೋಗಪಡಿಸಿಕೊಳ್ಳಲು ಎಸ್ಪಿ ಟಿ.ಶ್ರೀಧರ್ ಕರೆ

ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ ಲೋಕಾರ್ಪಣೆ


ಕೊಪ್ಪಳ.: ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ “ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112” ಯನ್ನು ಲೋಕಾರ್ಪಣೆ ಮಾಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅಶೋಕ ಸರ್ಕಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪಂದನೆಯ ವಾಹನಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿಯಷ್ಟೇ ಅಲ್ಲದೆ ಇಡೀ ಭಾರತದಾದ್ಯಂತ ಒಂದೇ ತುರ್ತು ಕರೆ ಸಂಖ್ಯೆ 112 ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು, ಮಹಿಳೆಯರು, ನೊಂದವರು, ಹಿರಿಯ ನಾಗರಿಕರು ತಮ್ಮ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ ಸಾರ್ವಜನಿಕರು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ತುರ್ತು ಕರೆ ಬಳಕೆ ವಿಧಾನ;
ತುರ್ತು ಕರೆ ಸಂಖ್ಯೆ 112 ನ್ನು ಬಳಕೆ ಮಾಡುವ ವಿಧಾನ ಇಂತಿದೆ. ಯಾವುದೇ ಮೊಬೈಲ್ ಫೋನ್ ಅಥವಾ ಸ್ಥಿರ ದೂರವಾಣಿಯಿಂದ 112 ಸಂಖ್ಯೆಗೆ ಕರೆ ಮಡುವುದರ ಮೂಲಕ, 112 ಸಂಖ್ಯೆಗೆ ಸಂದೇಶ (ಎಸ್.ಎಮ್.ಎಸ್) ರವಾನಿಸುವುದು, 112 ವೆಬ್ ಪೋರ್ಟ್ ಲ್ ( www.ka.ners.in ) ಮೂಲಕ ಸಹಾಯ ಕೋರಬಹುದು, ಮೊಬೈಲ್ ಫೋನ್‌ನಲ್ಲಿ 112 ಇಂಡಿಯಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಎಸ್.ಓ.ಎಸ್ ( SOS) ಸೇವೆ ಬಳಕೆ ಮಾಡುವುದರ ಮೂಲಕ ಹಾಗೂ ಇ-ಮೇಲ್ ಐಡಿ erss112ktk@ksp.gov.in ಗೆ ಸಂದೇಶ ಕಳುಹಿಸುವುದರ ಮೂಲಕ ಸಹಾಯ ಪಡೆಯಬಹುದಾಗಿದೆ.

Emergency Response Support System (ERSS-112) ಕರ್ತವ್ಯಕ್ಕೆ ಒಟ್ಟ್ಟು 7 ತುರ್ತು ಸ್ಪಂದನಾ ವಾಹನಗಳನ್ನು ನಿಯೋಜಿಸಲಾಗಿದ್ದು, ಪ್ರತಿ ವಾಹನದಲ್ಲಿ 3 ಜನ ಅಧಿಕಾರಿ/ ಸಿಬ್ಬಂದಿಯವರು (24*7) ಕರ್ತವ್ಯ ನಿರ್ವಹಿಸುವರು. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು.

ಈ ಸಂದರ್ಭದಲ್ಲಿ ಡಿಅರ್ ಡಿಎಸ್ಪಿ ಶಶಿಧರ, ಮಲ್ಲನಗೌಡ ವೈರಲೆಸ್ ಪಿಐ, ಸಿಪಿಐ ಮಾರುತಿ ಗುಳ್ಳಾರಿ, ಡಿಎಸ್ ಬಿ ರವಿ ಉಕ್ಕುಂದ , ಮೌನೇಶ್ವರ ಪಾಟೀಲ್, ಚಂದ್ರಪ್ಪ , ಅಮರೇಶ ಹುಬ್ಬಳ್ಳಿ, ವೆಂಕಟೇಶ್ , ಕರೆಮ್ಮ, ಭೀಮಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕೆ.ಎಚ್.ಕಲಕಬಂಡಿ ನೆರವೇರಿಸಿದರು.

Please follow and like us:
error