100 ಆಕ್ಸಿಜನ್ ಬೆಡ್ ಆಸ್ಪತ್ರೆ ಸ್ಥಾಪನೆಗೆ ಸಚಿವರ ಸೂಚನೆ

ಸಂಸದ ಸಂಗಣ್ಣ ಕರಡಿ ಅವರ ಮನವಿಗೆ ಸಚಿವ ಜಗದೀಶ ಶೆಟ್ಟರ್ ಸ್ಪಂದನೆ

ಕೊಪ್ಪಳ:
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆಗಾಗಿ ಇನ್ನು 100 ಹಾಸಿಗೆಯ ಆಕ್ಸಿಜನ್ ಸಹಿತ ಕೋವಿಡ್ ಆಸ್ಪತ್ರೆಯ ಸ್ಥಾಪನೆ ಅಗತ್ಯತೆಯು ಇದ್ದು ಇದಕ್ಕೆ ತಕ್ಷಣ ಅನುಮೋದನೆಯನ್ನು ನೀಡುವುಂತೆ ಸಂಸದ ಸಂಗಣ್ಣ ಕರಡಿ ಅವರು ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್ ಗೆ ಮನವಿ ಮಾಡಿದರು.

ಬಳ್ಳಾರಿಯ ಜಿಂದಾಲ್ ಗೆ ಹೋಗುವ ಸಂದರ್ಭದಲ್ಲಿ ಶನಿವಾರದಂದು ನಗರದ ಸೌರ್ಕೀಟ್ ಹೌಸ್ ನಲ್ಲಿ ಸಂಸದ ಸಂಗಣ್ಣ ಕರಡಿ ಅವರು ಸಚಿವ ಶೆಟ್ಟರ್ ಅವರಿಗೆ ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಮಾಹಿತಿ ನೀಡಿ, ಜನರ ಆರೋಗ್ಯದ ರಕ್ಷಣೆಗಾಗಿ ಜರೂರಾಗಿ ಕೊಪ್ಪಳಕ್ಕೆ ಆಕ್ಸಿಜನ್ ಸಹಿತ 100 ಬೆಡ್ ನ ಕೋವಿಡ್ ಆಸ್ಪತ್ರೆ ಸ್ಥಾಪನೆ ಕುರಿತು ಚರ್ಚಿಸಿದರು.

ನಮ್ಮಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕು ವೈರಸ್ ಬಲವಾಗಿ ಹರಡುತ್ತಿದೆ ಮತ್ತು ಸಾರ್ವಜನಿಕರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ, ಆಮ್ಲಜನಕ ಪೂರೈಕೆಯೊಂದಿಗೆ 100 ಹಾಸಿಗೆಯ ಆಸ್ಪತ್ರೆಯನ್ನು ಸ್ಥಾಪಿಸುಂತೆ ಸಂಸದರು ಸಚಿವರಿಗೆ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಟ್ಟರು.

ಸಚಿವರ ಭರವಸೆ :
ಕೊಪ್ಪಳದಲ್ಲಿ ಆಕ್ಸಿಜನ್ ಸಹಿತ ಆಸ್ಪತ್ರೆಯ ಬೇಡಿಕೆ ಕುರಿತು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಸಚಿವರು ಕಲ್ಯಾಣಿ ಕೈಗಾರಿಕಾ ಪ್ರದೇಶದಲ್ಲಿ ಆಮ್ಲಜನಕ್ ಸಹಿತ 100 ಹಾಸಿಗೆಯ ಸಾಮರ್ಥ್ಯದ ಕೋವಿಡ್-19 ತಾತ್ಕಾಲಿಕ ಆಸ್ಪತ್ರೆಯನ್ನು ಜಿಂದಾಲ್ ಕಂಪನಿ ಮಾದರಿಯಲ್ಲಿ ಆರಂಭಿಸಲು ಸ್ಥಳದಲ್ಲಿದ್ದ ಕಲ್ಯಾಣಿ ಕಂಪನಿಯ ಹಿರಿಯ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಸೂಚಿಸಿದ್ದು, ಇದಕ್ಕೆ ಕಲ್ಯಾಣಿ ಇಂಡಸ್ಟ್ರೀಯಲ್ ನ ಸಿಇಓ ರತ್ನಪ್ರಸಾದ ಅವರು ಈ ಸಂಬಂಧವಾಗಿ ಒಪ್ಪಿಗೆಯನ್ನು ನೀಡಿದ್ದು, ಜಿಲ್ಲಾಢಳಿತದ ಸಹಕಾರದೊಂದಿಗೆ ಆಸ್ಪತ್ರೆಯ ಸ್ಥಾಪನೆ ಮಾಡಲಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿರುವರು.

ಈ ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ ಮೈನಳ್ಳಿ, ನಗರ ಬಿಜೆಪಿ ಅಧ್ಯಕ್ಷ ಸುನೀಲ್ ಹೆಸೂರು ಇತರರು ಇದ್ದರು.

Please follow and like us:
error