Koppal 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಂತರ್ ರಾಜ್ಯ ಸುಲಿಗೆಕೋರ ಹಾಗೂ ಕಳ್ಳನ ಬಂಧಿಸುವಲ್ಲಿ ಗಂಗಾವತಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಸನ್ 2008 ಮತ್ತು 2009 ನೇ ಸಾಲಿನಲ್ಲಿ ದಾಖಲಾದ 1 ) ಗುನ್ನ ನಂ : 220/2008 , ಕಲಂ : 379 ಐಪಿಸಿ , 2 ) ಗುನ್ನೆ ನಂ : 56/2009 , ಕಲಂ : 392 ಐಪಿಸಿ 3 ) ಗುನ್ನೆ ನಂ : 70/2009 , ಕಲಂ : 379 ಐಪಿಸಿ , 4 ) ಗುನ್ನೆ ನಂ : 135/2009 , ಕಲಂ : 379 ಐಪಿಸಿ 5 ) ಗುನ್ನೆ ನಂ : 158/2009 , ಕಲಂ : 379 ಐಪಿಸಿ ಪ್ರಕರಣಗಳಲ್ಲಿ ಸುಮಾರು 4,05,000-00 ರೂ . ಮೌಲ್ಯದಷ್ಟು ಕಳ್ಳತನ ಮತ್ತು ಸುಲಿಗೆ ಮಾಡಿದ ಆರೋಪಿ ಸಿ.ಹೆಚ್ . ಬಾಬು ತಂದ ಶಂಕ್ರಯ್ಯ ಚಲ್ಲಾ , ವಯಾ : 37 ವರ್ಷ , ಜಾ : ವಡ್ಡರ ( ಯರಕುಲ ) , ಸಾ : ಕಪ್ರಾಲತಿಪ್ಪಾ , ತಾ : ಕಾವಲಿ , ಜಿ : ನೆಲ್ಲೂರ ( ಆಂಧ್ರಪ್ರದೇಶ ) ಈತನಿಗೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ದಸ್ತಗಿರಿ ಮಾಡಿ , ಐದು ಪ್ರಕರಣಗಳನ್ನು ಭೇಧಿಸಿ , ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ., ಆರೋಪಿತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ತಲೆಮರೆಸಿಕೊಂಡಿದ್ದರಿಂದ ಪ್ರಕರಣಗಳು ಎಲ್.ಪಿ.ಸಿ. ಯಾಗಿದ್ದವು . ಸದರಿ ಎಲ್.ಪಿ.ಸಿ , ಪ್ರಕರಣಗಳ ಪತ್ತೆ ಕುರಿತು ಶ್ರೀಧರ ಟಿ . , ಎಸ್.ಪಿ ಕೊಪ್ಪಳ , ರವರ ಮಾರ್ಗದರ್ಶದನಲ್ಲಿ ಆರ್.ಎಸ್ . ಉಜ್ಜನಕೊಪ್ಪ , ಡಿ.ಎಸ್.ಪಿ. ಗಂಗಾವತಿರವರ ನೇತೃತ್ವದಲ್ಲಿ ಎಲ್.ಪಿ.ಸಿ. ಪ್ರಕರಣಗಳ ಪತ್ತೆ ಕುರಿತು ಗಂಗಾವತಿ ನಗರ ಠಾಣೆಯ ವೆಂಕಟಸ್ವಾಮಿ ಟಿ . , ಪಿ.ಐ .. ಸಿಬ್ಬಂದಿಯವರಾಧ ನರಸಪ್ಪ ಸಿಪಿಸಿ -399 , ವಿಜಯಕುಮಾರ ಸಿಪಿಸಿ -32 , ಪ್ರಕಾಶ ಬೆಂಕಿ ಸಿಪಿಸಿ -87 ಇವರನ್ನೊಳಗೊಂಡ ತಂಡವನ್ನು ರಚನೆ ಮಾಡಿ , ಪ್ರಕರಣಗಳ ಕಡತವನ್ನು ಪರಿಶೀಲಿಸಿ , ಸುಮಾರು ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತ ಸಿ.ಹೆಚ್ . ಬಾಬು ತಂದೆ ಶಂಕ್ರಯ್ಯ ಚಲ್ಲಾ , ಸಾ : ಕಾಲತಿಪ್ಪಾ , ಈತನ ಇರುವಿಕೆಯ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ , ಪತ್ತೆ ಕಾರ್ಯವನ್ನು ಚುರುಕಿನಿಂದ ಆರಂಭಿಸಿ , ಆಂದ್ರಪ್ರದೇಶದ ಬಿಗುಂಟಾ ಪೊಲೀಸ್ ಠಾಣಾ ವ್ಯಾಪ್ತಿಯ ಕಪ್ಪಾಲತಿಪ್ಪಾ ಗ್ರಾಮದಲ್ಲಿ ಆರೋಪಿತನನ್ನು ಪತ್ತೆ ಮಾಡಿ , ದಸ್ತಗಿರಿ ಮಾಡಿಕೊಂಡು ಬಂದು ಮಾನ್ಯ ನ್ಯಾಯಾಲಯದ ಮುಂದೆ ಹಾಜರಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
