​ಹೊಸಪೇಟೆ. ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಟೋಟ

ಹೊಸಪೇಟೆ. : ಹೊಸಪೇಟೆ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಟೋಟಗೊಂಡಿದ್ದು ಬಣಗಳ ತಿಕ್ಕಾಟ ಮುಂದುವರೆದಿದೆ‌. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ಸುದ್ದಿಗೋಷ್ಟಿ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಬಂದಿದ್ದ ಪತ್ರಕರ್ತರನ್ನು ಒಂದು ಬಣದ ಕಾರ್ಯಕರ್ತ ಕಚೇರಿಯೊಳಗೆ ಕೂಡಿ  ಹಾಕಿ ಸುದ್ದಿಗೋಷ್ಟಿ ಇಲ್ಲ ಎನಿಲ್ಲ ಹೊರಗೆ ಹೋಗ್ತಿರಾ ಇಲ್ಲ ಎಂದು ಬೆದರಿಸಿದ್ದಾನೆ. ನಂತರ ಕೊಠಡಿಗಡ ಬೀಗ ಹಾಕಿ ಹೊರಟುಹೋಗಿದ್ದಾನೆ.ಸುದ್ದಿಗಾರರು ಗಲಾಟೆ ಮಾಡುತ್ತಿದ್ದಂತೆ ಎಚ್ಚತ್ತ ನಾಯಕರು ಕೊಠಡಿಯ ಬೀಗ  ತೆರೆದಿದ್ದಾರೆ. 

ನಂತರ ನಡೆದ ಸುದ್ದಿಗೋಷ್ಠಿಯಲ್ಲು  ಹೊಸಪೇಟೆ ಕಾಂಗ್ರೆಸ್ ಉಸ್ತುವಾರಿ ಬಸವರಾಜ ರಾಯರೆಡ್ಡಿ  ಮಾತನಾಡಿ ಪತ್ರಕರ್ತರನ್ನು ಕೂಡಿ ಹಾಕಿರೋದಕ್ಕೆ ವಿಷಾದ ವ್ಯಕ್ತಪಡಿಸಿ ಕಾಂಗ್ರೆಸ್ ಹೆಸರಲ್ಲಿ ಕೆಲವರು ದುಷ್ಕೃತ್ಯ ಮಾಡಿದ್ದಾರೆ.ಇದಕ್ಕೆ ಪಕ್ಷದ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ.ಕಾಂಗ್ರೆಸ್ ಹೆಸರಿನ ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅನರ್ಹರು ಅಂದ್ರೇ ಆಯೋಗ್ಯರು ಎಂದರ್ಥ. ಇವರು ಅನರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಇಂತವರನ್ನು ಜನರೇ ಆಯ್ಕೆ ಮಾಡಲ್ಲ.ಹಣದ ಹೊಳೆ ತೋಳ್ಬಲ ಹೊಸಪೇಟೆಯಲ್ಲಿ ಹೆಚ್ಚಾಗಿದೆ ಎಂದು ಹೇಳಿದ ರಾಯರಡ್ಡಿ ಮೋದಿ ಷಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಆನಂದ ಸಿಂಗ್ ಗಣಿ ಲೂಟಿ ಮಾಡಿದವರು. ಘೋರ್ಪಡೆ ಅವರು ಗಣಿ ವಾಪಸ್ ಮಾಡಿದವರು..  ಜೆಡಿಎಸ್ ನೆಪಮಾತ್ರಕ್ಕೆ ಎನ್ನುವಂತೆ ಸ್ಪರ್ದೀಸಿದೆ ಎಂದರು.

Please follow and like us:
error