​ಯತ್ನಾಳ್ ವಿರುದ್ಧ ಕ್ರಮ ಕೈಗೊಂಡರೆ ಬಿಜೆಪಿಗೆ ಹೊಡೆತ – ಶ್ರೀಶೈಲ ಪೀಠದ ಸ್ವಾಮೀಜಿ

ಯತ್ನಾಳ್ ಬೆಂಬಲಕ್ಕೆ ಪಂಚಪೀಠಾದೀಶರು
ವಿಜಯಪುರ. ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶೋಕಾಸ್ ನೋಟಿಸ್ ವಿಚಾರಕ್ಕೆ ಸಂಬಂದಿಸಿದಂತೆ ವೀರಶೈವ ಮಠಾದೀಶರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬೆಂಬಲಕ್ಕೆ ನಿಂತಿದ್ದಾರೆ.

ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಶ್ರೀಶೈಲ ಪೀಠದ ಪಂಡಿತ ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಯತ್ನಾಳ್ ಗೆ ಶೋಕಾಸ್ ನೋಟಿಸ್ ನೀಡಿದ್ದು ಸರಿಯಲ್ಲ.ಶಾಸಕ ಯತ್ನಾಳ್ ಜನರ ಪರವಾಗಿ ಮಾತನಾಡಿದ್ದಾರೆ. ಅವರೊಬ್ಬ ಉನ್ನತ ನಾಯಕರಾಗಿದ್ದಾರೆ.ಯತ್ನಾಳ್ ಗೆ ನೀಡಿದ್ದ ಶೋಕಾಸ್ ನೋಟಿಸ್ ನೋಡಿದ್ದ ಹಿಂಪಡೆಯದಿದ್ದರೆ ಬಿಜೆಪಿ ಹಾನಿಯಾಗುತ್ತೆ.ಅವರ ಪರವಾಗಿ ಪಂಚಪೀಠದ ಸ್ವಾಮೀಜಿಗಳ ನಿಲ್ಲಲಿದ್ದಾರೆ.ಶಾಸಕ ಯತ್ನಾಳ ಪ್ರವಾಹದ ಪರಿಹಾರದ ಬಗ್ಗೆ ಮಾತನಾಡಿದ್ದಾರೆ. ಅವರು ಮಾತನಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅವರ ಮೇಲೆ ಕ್ರಮ ಕೈಗೊಂಡರೇ ರಾಜ್ಯದ ಜನತೆಯೆ ಮೇಲೆ ಕ್ರಮ ಕೈಗೊಂಡಂತೆ ಎಂದಿರುವ ಸ್ವಾಮೀಜಿ.
ಯತ್ನಾಳ್ ವಿರುದ್ಧ ಕ್ರಮ ಕೈಗೊಂಡರೆ ಬಿಜೆಪಿಗೆ ಹೊಡೆದ ಬಿಳಲಿದೆ ಎಂದು ಶ್ರೀಶೈಲ ಪೀಠದ ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ. . ಕಳೆದವಾರ ಕೂಡಲ ಸಂಗಮದ ಪಂಚಮಸಾಲಿ ಪೀಠದ‌ ಸ್ವಾಮಿಜಿಗಳೂ ಬಿಜೆಪಿಗೆ ಎಚ್ಚರಿಕೆ ನೀಡಿದ್ದರು.ಸಿಎಂ ಯಡಿಯೂರಪ್ಪ ಅವರನ್ನು ಭೇಟಿಮಾಡಿ‌ ಯತ್ನಾಳ್ ಗೆ ನೀಡಿದ್ದ ನೋಟಿಸ್ ವಾಪಸ್ ಪಡೆಯುವಂತೆ ಒತ್ತಾಯ ಮಾಡಿದ್ದರು. ಇದೀಗ ಪಂಚಪೀಠದ ಸ್ವಾಮೀಜಿ ಯತ್ನಾಳ ಪರವಾಗಿ ಬಹಿರಂಗವಾಗಿಯೇ ಬಿಜೆಪಿ ನಾಯಕರಿಗೆ‌ ಪತ್ರ ಬರೆದಿದ್ದಾರೆ.
.

Please follow and like us:
error