​ಬಸ್- ಟಾಟಾ ಏಸ್ ನಡುವೆ ಡಿಕ್ಕಿ- ಮೂವರ ದುರ್ಮರಣ

ಅಪಘಾತ ತೀವ್ರತೆಗೆ ಟಾಟಾ ಏಸ್ ಸಂಪೂರ್ಣವಾಗಿ ನುಜ್ಜುಗುಜ್ಜು

ಬಳ್ಳಾರಿ :  ಬೆಳಗಿನ ಜಾವ ಅಪಘಾತದಲ್ಲಿ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.  ಬಸ್ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗಿನ ಜಾವ ನಡೆದಿದೆ‌. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರದ ರಾಹೆ‌.೫೦ ರಲ್ಲಿ ನಡೆದ  ರಸ್ತೆ ಅಪಘಾತದಲ್ಲಿ ಮೂವರ ದುರ್ಮರಣ ಹೊಂದಿದ್ದು, ನಾಗಮ್ಮ(೩೦) ನಾಗರಾಜ್(೬೦) ಮತ್ತು ಟಾಟಾ ಏಸ್ ಚಾಲಕ ಪ್ರಕಾಶ್ (೩೫) ಎಂದು ಮೃತಪಟ್ಟರನ್ನು ಗುರುತಿಸಲಾಗಿದೆ.  ಒಬ್ಬನ ಸ್ಥಿತಿ ಗಂಭೀರವಿದೆ. ಗಾಯಗೊಂಡ ಗುರು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ‌. ಮೃತರೆಲ್ಲರೂ ಕೂಡ್ಲಿಗಿ ತಾಲೂಕಿನ ಕ್ಯಾಸ‌ನಕೆರೆ ಗ್ರಾಮದವರಾಗಿದ್ದಾರೆ. ಟೊಮೋಟಾ ಅನ್ ಲೋಡ್ ಮಾಡಿ ಗೂಡ್ಸ್‌ ಗಾಡಿಯಲ್ಲಿ ವಾಪಾಸ್ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅಪಘಾತ ತೀವ್ರತೆಗೆ ಟಾಟಾ ಏಸ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. 
..

Please follow and like us:
error