೨೦೧೮,೧೯ನೇ ಸಾಲಿನ ರಾಷ್ಟ್ರಪತಿ ಪದಕಗಳ ಪ್ರದಾನ ಸಮಾರಂಭ : ಗಂಗಾವತಿ DSP ಉಜ್ಜನಿಕೊಪ್ಪರಿಗೆ ಪದಕ

ಬೆಂಗಳೂರು : ದಿ : 01/01/2021 ರಂದು ಬೆಳಿಗ್ಗೆ 10-00 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ 2018 ಮತ್ತು 2019 ನೇ ಸಾಲಿನ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ / ಪೊಲೀಸ್ ಶ್ಲಾಘನೀಯ ಸೇವಾ ಪದಕಗಳನ್ನು ಪ್ರದಾನ ಮಾಡಲು , ಪದಕ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ‌ . ಆದುದರಿಂದ , ಸಂಬಂಧಪಟ್ಟ ಘಟಕಾಧಿಕಾರಿಗಳು ಪದಕ ವಿಜೇತ ಮೊಲೀಸ್ ಅಧಿಕಾರಿ / ಸಿಬ್ಬಂದಿಯವರಿಗೆ ಕೆಳಕಂಡ ಸೂಚನೆಗಳನ್ನು ನೀಡಿ ತಪ್ಪದೇ ಕಳುಹಿಸಿಕೊಡುವಂತೆ ಕೋರಲಾಗಿದೆ .

1 , ಪೂರ್ವಾಭ್ಯಾಸಕ್ಕಾಗಿ ದಿನಾಂಕ : 05-1-2021 ರಂದು ಬೆಳಿಗ್ಗೆ 09-30 ಗಂಟೆಗೆ ಕಮಾಂಡೆಂಟ್ , 3 ನೇ ಪಡೆ . ಕೆಎಸ್‌ಆರ್‌ಪಿ , ಬೆಂಗಳೂರು ( ಕ್ಯಾಂಪ್ – ರಾಜಭವನ ಬೆಂಗಳೂರು ) ರವರ ಮುಂದೆ ವರದಿ ಮಾಡಿಕೊಳ್ಳುವಂತೆ ಹಾಗೂ ದಿನಾಂಕ : 07-01-2021 ರವರೆಗೆ ಬೆಂಗಳೂರಿನಲ್ಲಿಯೇ ತಂಗುವ ವ್ಯವಸ್ಥೆಯೊಂದಿಗೆ ಬರಲು ಸೂಚನೆ ನೀಡಿ ಕಳುಹಿಸಿಕೊಡುವುದು ಎಂದು ರಾಜ್ಯ ಡೈರೆಕ್ಟರ್ ಜನರಲ್ ಆಪ್ ಇನ್ಸಪೆಕ್ಟರ್ ಮಾಹಿತಿ ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಯ ಡಿಎಸ್ಪಿ ಆರ್.ಎಸ್.ಉಜ್ಜನಿಕೊಪ್ಪರಿಗೆ ೨೦೧೮ ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ದೊರೆತಿದ್ದು ಅಭಿಮಾನಿಗಳು ಸ್ನೇಹಿತರು ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ

Please follow and like us:
error