೨೦೦ ಬೆಡ್ ಸೌಲಭ್ಯವುಳ್ಳ ಶ್ರೀ ಗವಿಮಠ ಉಚಿತ ಕೋವಿಡ್ ಕೇರ್ ಸೆಂಟರ್ ಆರಂಭ

ಕನ್ನಡನೆಟ್ ನ್ಯೂಸ್ : ಕೋವಿಡ್ ಸಂಕಷ್ಟ ದ ಹಿನ್ನಲೆಯಲ್ಲಿ ಬೆಡ್‌ಗಳ ಆಭಾವ ನಿಗಿಸಲು ಶ್ರೀ ಗವಿಮಠದ ವೃದ್ಧಾಶ್ರಮವನ್ನು ಈಗಾಗಲೇ ಆಕ್ಸಿಜನ್ ವೆಂಟಿಲೇಟರ್ ೧೦೦ ಬೆಡ್‌ನ ಒಳಗೊಂಡ ಶ್ರೀ ಗವಿಮಠ ಕೋವಿಡ್ ಆಸ್ಪತ್ರೆ ಸ್ಥಾಪಿಸಲಾಗಿದೆ. ಈಗ ತಿವ್ರತೆ ಇನ್ನೂ ಹೆಚ್ಚುತ್ತಿರುವುದರಿಂದ ಕೋವಿಡ್ ರೋಗಿಗಳ ಪ್ರಾಥಮಿಕ ಆರೈಕೆಗಾಗಿ ೨೦೦ ಬೆಡ್ ಸೌಲಭ್ಯವುಳ್ಳ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಕೋವಿಡ್ ಕೇರ್ ಸೆಂಟರ್‌ನ್ನು ದಿನಾಂಕ ೧೮.೦೫.೨೦೨೧ ರಂದು ಶ್ರೀ ಗವಿಮಠದ ಆಶ್ರಯದಲ್ಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿನಿಯರ ವಸತಿನಿಲಯದಲ್ಲಿ ಸಂಜೆ ೬:೦೦ ಗಂಟೆಗೆ ಪ್ರಾರಂಭಿಸಲಾಗಿದೆ.. ಜಿಲ್ಲಾಡಳಿತ ಮತ್ತು ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಶ್ರೀ ಗವಿಸಿದ್ಧೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಕೊಪ್ಪಳ, ಶ್ರೀ ಗವಿಮಠ ಸಧ್ಬಕ್ತರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸರ್ವೊದಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರ ಸಹಯೊಗದಲ್ಲಿ ಶ್ರೀ ಗವಿಸಿದ್ಧೇಶ್ವರ ಕೋವಿಡ್ ಕೇರ್ ಸೆಂಟರ್‌ ನಡೆಸಲಾಗುತ್ತದೆ. ಕೋವಿಡ್ ಸೊಂಕಿಗೆ ಒಳಗಾದ ಸೋಂಕಿತರು ಮನೆಯಲ್ಲಿ ಪ್ರತ್ಯೆಕವಾಗಿರುವುದಕ್ಕೆ ಅನಾನುಕೂಲ ಇರುವವರು ಕೋವಿಡ್ ಕೇರ್ ಸೆಂಟರ್‌ಗೆ ಪ್ರವೇಶ ಪಡೆಯಬಹುದು. ಇದರಿಂದ ಇತರರಿಗೂ ಹರಡದಂತೆ ತಡೆಯಬಹುದಾಗಿದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ವಿನಂತಿಸಿಕೊಳ್ಳಲಾಗಿದೆ.

ಇದು ಕೋವಿಡ್ ಸೊಂಕಿತರ ಆರೈಕೆ ಕೇಂದ್ರವಾಗಿದ್ದು, ದಾಖಲಾಗಲು ಅವಕಾಶ ಇರುತ್ತದೆ. ಕಾರಣ ಇದರ ಸದುಪುಯೋಗ ಪಡೆದುಕೊಂಡು ಗುಣಮುಖರಾಗಲು ತಿಳಿಸಲಾಗಿದೆ.

ಇದರ ಮೇಲುಸ್ತುವಾರಿಯನ್ನು ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂಧಿ ನಿರ್ವಹಿಸಲಿದ್ದಾರೆ.

ಸೂಚನೆಗಳು:-

ದಿನಾಂಕ:೧೯.೦೫.೨೦೨೧ ಬೆಳಿಗ್ಗೆ: ೯.೦೦ ಗಂಟೆಯಿಂದ ಪ್ರಾರಂಭÀವಾಗುತ್ತದೆ.
ಕೋವಿಡ್ ಸೆಂಟರ್ ಪೆಷಂಟ್ ಬರುವ ಸಮಯ ಬೆಳಿಗ್ಗೆ ೯.೦೦ ಸಾಯಂಕಾಲ ೫.೦೦ವರೆಗೆ
ಕಡ್ಡಾಯವಾಗಿ ಎಸ್‌ಆರ್‌ಎಫ್ ಆಯ್‌ಡಿ ಹೊಂದಿರಬೇಕು.
ಆಂಟೀಜನ್, ಪಾಸಿಟಿವ್ ಮತ್ತು ಆರ್‌ಟಿಪಿಸಿಆರ್ ರೀಪೋರ್ಟ ಹೊಂದಿರಬೇಕು.
ಸಂಪರ್ಕಿಸುವ ಮೋಬೈಲ್ ಸಂಖ್ಯೆ:೭೨೦೪೪೨೪೨೨೭
ಇಲ್ಲಿ ಏನಿರುತ್ತದೆ:-

ಇದು ಸಂಪೂರ್ಣ ಉಚಿತವಾಗಿರುತ್ತದೆ. ಯಾರಾದರೂ ಸೋಂಕಿತರು ಪ್ರವೇಶ ಪಡೆಯಬಹುದು.
ಆಕ್ಸಿಜನ್ ರಹಿತವಾಗಿರುತ್ತದೆ.
ಉಪಹಾರ, ಊಟ, ಕಷಾಯ, ವಸತಿ ಹಾಗೂ ಔಷದ ಸೌಲಭ್ಯ ಇರುತ್ತದೆ.
ಅಂಬುಲೇನ್ಸ್ ವ್ಯವಸ್ಥೆ ಇರುತ್ತದೆ.
ತುರ್ತು ಸಂದರ್ಭದಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ ಕಲ್ಪಿಸಲಾಗುವುದು.

ಈ ಸಂದರ್ಭದಲ್ಲಿ ಕಿರ್ಲೋಸ್ಕರ ಕಂಪನಿಯವತಿಯಿಂದ ಎಕ್ಸರೇ ಮಷಿನ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ನೀಡುವುದಾಗಿ ಗುಮಾಸ್ತೆಯವರು ತಿಳಿಸಿದ್ದಾರೆ

Please follow and like us:
error