೨ನೇ ದಿನವೂ ಮುಂದುವರೆದ ಮುಷ್ಕರ : ೩೫ ನೌಕರರ ವಿರುದ್ದ ಪ್ರಕರಣ ದಾಖಲು

ವಾಟ್ಸಾಪ್ ಮೂಲಕ ಪ್ರಚೋದನಕಾರಿ ಸಂದೇಶ ಕಳುಹಿಸಿದ ಆಧಾರದ ಮೇಲೆ ಪ್ರಕರಣ ದಾಖಲು


ಕೊಪ್ಪಳ : ಸಾರಿಗೆ ನೌಕರರ ಮುಷ್ಕರ ೨ನೆ ದಿನವೂ ಮುಂದುವರೆದಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ‌. ಕರ್ತವ್ಯಕ್ಕೆ ಗಾಜರಾಗುವಂತೆ ನೌಕರರ ಮನವೊಲಿಸುವ ಕೆಲಸವೂ ಸಾಗಿದೆ. ಹಿರಿಯ ಅಧಿಕಾರಿಗಳು ವಿವಿಧ ತಂತ್ರ ಅನುಸರಿಸುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ‌ ಸಾರಿಗೆ ಅಧಿಕಾರಿಗಳು ಸನ್ಮಾನಿಸಿ ಗೌರವಿಸುವ ಐಡಿಯಾಕ್ಕೆ ಮುಂದಾಗಿದ್ದಾರೆ. ಗುಲಾಬಿ ಹೂ ನೀಡಿ ಆಲ್ ದಿ ಬೆಸ್ಟ್ ಹೇಳುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ ಎನ್ನುತ್ತಿದ್ದಾರೆ. ಕೊಪ್ಪಳದಿಂದ ರಾಯಚೂರಗೆ ತೆರಳುವ ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಬಸವರಾಜ್ ಎನ್ನುವವರಿಗೆ ಗುಲಾಬಿ ನೀಡಿ ಅಧಿಕಾರಿಗಳು ಸನ್ಮಾನಿಸಿದ್ದಾರೆ.
ಡಿವಿಜಿನಲ್ ಕಂಟ್ರೋಲರ್ ಮುಲ್ಲಾ ಅವರು ಗುಲಾಬಿ ನೀಡಿ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ಕಳುಹಿಸುತ್ತಿದ್ದಾರೆ
ಮತ್ತೊಂದೆಡೆ ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ ಆರೋಪದ ಹಿನ್ನೆಲೆಯಲ್ಲಿ ಗಂಗಾವತಿ ಡಿಪೋದ 35 ನೌಕರರ ವಿರುದ್ಧ ‌ಪ್ರಕರಣ ದಾಖಲು ಮಾಡಲಾಗಿದೆ.ಗಂಗಾವತಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.ವಾಟ್ಸಾಪ್ ಮೂಲಕ ಪ್ರಚೋದನಕಾರಿ ಸಂದೇಶ ಕಳುಹಿಸಿದ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

35 ಸಾರಿಗೆ ನೌಕರರ ವಿರುದ್ಧ 107 ಸೆಕ್ಷನ್ ಮುಂಜಾಗ್ರತಾ ಕ್ರಮ ವರದಿಯಡಿ 35 ನೌಕರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಈ ಸೆಕ್ಷನ್ ಅಡಿಯಲ್ಲಿ
ವರದಿಯಲ್ಲಿ ಹೆಸರಿರುವ 35 ಸಿಬ್ಬಂದಿಯನ್ನು ಪೊಲೀಸರು ಗೃಹ ಬಂಧನದಲ್ಲಿಡಲು ಅವಕಾಶ ಇದೆ,ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ನೌಕರರನ್ನು ವಶಕ್ಕೆ ಪಡೆಯುವ ಅವಕಾಶವೂ ಇದೆ ಎನ್ನಲಾಗಿದೆ. ಗಂಗಾವತಿ ಡಿಪೋ ಮ್ಯಾನೇಜರ್‌ ದೂರು ಆಧರಿಸಿ ಪ್ರಕರಣ ‌ದಾಖಲು ಮಾಡಲಾಗಿದೆ.

ಎರಡನೇ ದಿನವೂ ಸಾರಿಗೆ ಬಸ್ ನೌಕರರ ಮುಷ್ಕರ ಮುಂದುವರೆದಿದೆ.. ಇದರಿಂದ ಬಸ್ ಗಳಿಲ್ಲದೇ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಬಸಗಳ ಸಂಚಾರವಿಲ್ಲದೆ ಬಸ್ ನಿಲ್ದಾಣದಲ್ಲಿ ಹೆಚ್ಚಾಗಿ ಪ್ರಯಾಣಿಕರು ಕಂಡು ಬರುತ್ತಿಲ್ಲ. ಇನ್ನು ಖಾಸಗಿ ಇನ್ನಿತರೇ ವಾಹನಗಳಲ್ಲಿ ಪ್ರಯಾಣಿಕರು ತೆರಳುತ್ತಿದ್ದು, ಸಾರಿಗೆ ಬಸಗಳ ಕಾರ್ಯಾಚರಣೆ ಆರಂಭಿಸಲು ಸಾರಿಗೆ ಅಧಿಕಾರಿಗಳ ಯತ್ನಿಸುತ್ತಿದ್ದು, ಸಿಬ್ಬಂದಿಗಳ ಮನವೋಲಿಸುತ್ತಿದ್ದಾರೆ

Please follow and like us:
error