ಹೋರಾಟಗಾರ ಕೊಟ್ಟೂರು ಶ್ರೀನಿವಾಸ್ ಇನ್ನಿಲ್ಲ…

ದಲಿತ ಸಂಘಟನೆ, ರೈತ ಸಂಘಟನೆಗಾಗಿ ಅವಿರತ ದುಡಿದ ಸಮಾಜಮುಖಿ ಚಿಂತನೆಯ ಹೋರಾಟಗಾರ, ಸಾಕ್ಷರತಾ ಆಂದೋಲನದ ಕಟ್ಟಾಳು ಕೊಟ್ಟೂರು ಶ್ರೀನಿವಾಸ್ (60) ಇನ್ನಿಲ್ಲ.

ಮಂಗಳೂರು ಖಾಸಗಿ
ಆಸ್ಪತ್ರೆಯಲ್ಲಿ (ಫಾದರ್ ಮುಲ್ಲರ್) ಕೊನೆಯುಸಿರೆಳೆದರು. ಕಿಡ್ನಿ ವೈಫಲ್ಯ ಕಾರಣಕ್ಕಾಗಿ ಹಾಸನ ಮತ್ತು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗಲಿಲ್ಲ. ಡಯಲಿಸಿಸ್ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು ಅವರ ಸ್ಥಿತಿ ಗಂಭೀರವಾಗಲು ಕಾರಣವಾಯಿತು.

ಮೃತರು ಪತ್ನಿ ಪ್ರಮಿಳಾ ಮಗಳು ರುಚಿರ, ಮೊಮ್ಮಗ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಹಾಸನ ನಗರದಲ್ಲಿ (ಬಿಟ್ಟಗೋಡನಹಳ್ಳಿ ಸ್ಮಶಾನ) ಬುಧವಾರ ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ:
ಹೋರಾಟಗಾರ ಕೊಟ್ಟೂರು ಶ್ರೀನಿವಾಸ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಳವಳಿಗಾರ ಕೊಟ್ಟೂರು ಶ್ರೀನಿವಾಸ್ ನಿಧನಕ್ಕೆ ರೈತ, ದಲಿತ ಸಂಘಟನೆಗಳು ಶೋಕಿಸಿವೆ

Please follow and like us:
error