ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ನಾಳೆ ರಾಜ್ಯ ಮಟ್ಟದ ಆನ್ ಲೈನ್ ವೆಬಿನಾರ್

ಇಂದು SFI, AISF NSUI,VJDS, ಹಾಗೂ AISA, VBV ಸಂಘಟನೆಗಳ ನೇತೃತ್ವದಲ್ಲಿ ಹೋಸ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ರಾಜ್ಯ ಮಟ್ಟದ ಆನ್ ಲೈನ್ ವೆಬಿನಾರ್ ಕಾರ್ಯಕ್ರಮನ್ನು ದಿನಾಂಕ 16/9/2020 ರಂದು ಸಮಯ 11:00 ಘಂಟೆಗೆ ಜೂಮ್ ಆ್ಯಪ್ ಮೂಲಕ ಹಮ್ಮಿಕೊಂಡಿವೆ, ಈ ID ನಂಬರ 5992672821 ಮತ್ತು ಈ ಪಾಸ್ವರ್ಡ್AILUKARNA3 ಹಾಕಿ ಕಾರ್ಯಕ್ರಮವನ್ನು ವಿಕ್ಷಣೆ ಮಾಡಬಹುದು ಎಂದು Sfi ರಾಜ್ಯ ಅಧ್ಯಕ್ಷ ಅಮರೇಶ ಕಡಗದ ತಿಳಿಸಿದ್ದಾರೆ.

ಈ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ವೈ.ಎಸ್.ವಿ.ದತ್ತರವರು ಉದ್ಘಾಟನೆ ಮಾಡಲಿದ್ದಾರೆ NEP ಜಾರಿಯ ಹಿಂದಿರುವ ರಾಜಕೀಯ ಹುನ್ನಾರ ಕುರಿತು ಎಡ ಚಿಂತಕರು ಮತ್ತು ಸಾಹಿತಿಯಾದ ಡಾ: ಸಿದ್ದನಗೌಡ ಪಾಟೀಲ್ ಮಾತನಾಡಲಿದ್ದಾರೆ, NEP ಮತ್ತು ಹೆಣ್ಣು ಮಕ್ಕಳ ಶಿಕ್ಷಣ ಕುರಿತು ಸಾಹಿತಿ ಹಾಗೂ ಮಹಿಳಾಪರ ಹೋರಾಟಗಾರ್ತಿ ಯಾದ, ಕೆ.ನೀಲಾ ರವರು ಮಾತನಾಡಲಿದ್ದಾರೆ,
ಉನ್ನತ ಶಿಕ್ಷಣದ ಮೇಲೆ NEP ಯ ಪರಿಣಾಮಗಳು ಮತ್ತು ಪ್ರತಿರೋಧ ಕುರಿತು ವಿಶೇಷ ಅಧಿಕಾರಿ ಸ್ನಾತಕೋತ್ತರ ಕೇಂದ್ರ ರಾಮನಗರದ ಪ್ರೋ.ಡಿ.ಡೊಮಿನಿಕ್ ರವರು ವಿವರಣೆ ನೀಡಲಿದ್ದಾರೆ, NEP ಮತ್ತು ಸಾಮಾಜಿಕ ನ್ಯಾಯ ಕುರಿತು ಹೈಕೋರ್ಟ್ ವಕೀಲರಾದ ಅನಂತ ನಾಯ್ಕ ಮಾತನಾಡುವವರು, NEP ವಿರುದ್ಧ ಐಕ್ಯ ಹೋರಾಟ ಕುರಿತು ಪ್ರಗತಿಪರ ಚಿಂತಕರಾದ ಕ್ಲಿಫ್ಟಾನ್ ಡಿ ರೊಜಾರಿಯೋ ಮಾತನಾಡುತ್ತಾರೆ ಸಭೆ ಸಭೆಯ ಅಧ್ಯಕ್ಷತೆಯನ್ನು NSUI ರಾಜ್ಯ ಅಧ್ಯಕ್ಷರಾದ ಮಂಜುನಾಥ ಗೌಡ ವಹಿಸಲಿದ್ದಾರೆ ಈ ಒಂದು ಕಾರ್ಯಕ್ರಮದಲ್ಲಿ ಸಾಹಿತಿಗಳು,ಶಿಕ್ಷಕರು,ಉಪನ್ಯಾಸಕರು, ವಿದ್ಯಾರ್ಥಿಗಳು,ಪತ್ರಕರ್ತರು, ವಕೀಲರು ವಿವಿಧ ರಂಗದಲ್ಲಿ ಕೆಲಸ ಮಾಡುವವರು ಭಾಗವಹಿಸಲಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಪತ್ರಿಕೆ ಪ್ರಕಟಣೆಯ ಮೂಲಕ SFI ರಾಜ್ಯ ಅಧ್ಯಕ್ಷರಾದ ಅಮರೇಶ ಕಡಗದ ತಿಳಿಸಿದ್ದಾರೆ ಸಂಪರ್ಕಕ್ಕಾಗಿ 9902447319.

Please follow and like us:
error