fbpx

ಹೊಸಪೇಟೆ : ಒಳಾಂಗಣ ಕ್ರೀಡಾಂಗಣದಲ್ಲಿ 1000 ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನು ನಿರ್ಮಿಸಿ

ಹೊಸಪೇಟೆ : ಬಳ್ಳಾರಿ ಜಿಲ್ಲೆಯಲ್ಲಿ ಕೋರೋನ ಸೋಂಕಿತರು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆಯ ಕೊರತೆ ಎದ್ದು ಕಾಣುತ್ತಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ಮಧ್ಯವಿರುವ ಹೊಸಪೇಟೆ ಮುನ್ಸಿಪಲ್ ಮೈದಾನದ ಒಳ ಕ್ರೀಡಾಂಗಣದಲ್ಲಿ ತಕ್ಷಣವೇ 1000 ಹಾಸಿಗೆಯ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ತಪಾಸಣಾ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಮಾಧ್ಯಮ ವಕ್ತಾರರಾದ ಪತ್ರೇಶ್ ಹಿರೇಮಠ ಮತ್ತು ನಿಂಬಗಲ್ ರಾಮಕೃಷ್ಣ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಹೊಸಪೇಟೆ ತಹಶಿಲ್ದಾರರ ಮುಖಾಂತರ ಮನವಿ ಸಲ್ಲಿಸಿದ್ದಾರೆ

ಜೊತೆಗೆ ಕೊರೋನಾ ಸೋಂಕು ಮುಂದಿನ ತಿಂಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದು ಬಳ್ಳಾರಿ ಜಿಲ್ಲೆಯಲ್ಲಿಯೇ 20 ಸಾವಿರಕ್ಕೂ ಹೆಚ್ಚು ಸೋಂಕಿತರ ಪ್ರಮಾಣ ತಲುಪುವ ಸಾಧ್ಯತೆಯನ್ನು ತಜ್ಞರು ಅಂದಾಜಿಸಿದ್ದು ಜಿಲ್ಲಾಡಳಿತ ಎಚ್ಚರಿಕೆ ವಹಿಸಲು ಕಾಂಗ್ರೆಸ್ ಒತ್ತಾಯಿಸಿದೆ

ಒಂದುವೇಳೆ ಅನುದಾನದ ಕೊರತೆ ಕಂಡುಬಂದಲ್ಲಿ ಜಿಲ್ಲಾ ಖನಿಜ ನಿಧಿಯಲ್ಲಿ 3 ಸಾವಿರ ಕೋಟಿಗು ಅಧಿಕ ಹಣವಿದ್ದು ತಕ್ಷಣವೇ ಅದನ್ನು ಬಳಸಿ ಇಂತಹ ದೊಡ್ಡ ಸ್ಥಳಗಳಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ಮುಂದಾಗಬೇಕೆಂದು ಮನವಿ ಮೂಲಕ ಒತ್ತಾಯಿಸುತ್ತಿದ್ದಾರೆ

ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡುವಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ತಿಂಗಳು ಸೋಂಕು ವಿಪರೀತವಾಗಿ ಹರಡಿ ಚಿಕಿತ್ಸೆಗೆ ಸ್ಥಳವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗುವ ಸಂಭವವಿದ್ದು ತಕ್ಷಣವೇ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಲು ಕಾಂಗ್ರೆಸ್ ವಕ್ತಾರರಾದ ಪತ್ರೇಶ್ ಹಿರೇಮಠ ಮತ್ತು ನಿಂಬಗಲ್ ರಾಮಕೃಷ್ಣ ಒತ್ತಾಯಿಸಿದ್ದಾರೆ

Please follow and like us:
error
error: Content is protected !!