ಹೆಬ್ಬಾಳಕರ ವಿರುದ್ದ ಡ್ಯಾಷ್.. ಡ್ಯಾಷ್ ಲೇವಡಿ ಮಾಡಿದ ಯತ್ನಾಳ

ಅಥಣಿ-  ನಿಮಗ ಯಾಕ ರೂ‌.1200 ಕೊಟ್ಟಾರ ನಮಗೂ ಗೊತ್ತೈತ್ರಿ ಬಾಯವ್ರ..ಡ್ಯಾಷ್…ಡ್ಯಾಷ್… ಎಂದು ಬಸನಗೌಡ ಯತ್ನಾಳ ತಮ್ಮದೇ ಶೈಲಿಯಲ್ಲಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಲೇವಡಿ ಮಾಡಿದರು.ಬೆಳಗಾವಿ ಜಿಲ್ಲೆಯ ಅರಣಿ ಮತಕ್ಷೇತ್ರದ ತೆಲಸಂಗದಲ್ಲಿ ಲಕ್ಷ್ಮಿ ಹೆಬ್ಬಾಳಕರ ಸ್ಟೈಲಿನಲ್ಲೆ ಟಾಂಗ್ ನೀಡಿದ ಯತ್ನಾಳ ಲಕ್ಷ್ಮೀ ಹೆಬ್ಬಾಳಕರ ವಿರುದ್ದ ಹೇಳಿದ್ದು ಇದು..

ಮೊದಲು ರಮೇಶ ಸರ್, ರಮೇಶ ಸರ್ ಅಂತಿದ್ರಿ, ಈಗ ಡಿಕೆ ಸರ್, ಡಿಕೆ ಸರ್ ಅಂತೀರಿ.ನಾಳೆ ರಾಹುಲ್ ಸರ್… ರಾಹುಲ್ ಸರ್ ಅಂತೀರಿ.ನಾವೇನು ಮಾಡೋಣ? ಎಲ್ಲಿಂದಲೋ ಬಂದು ಇಲ್ಲಿ ಗಂಡಸತನ ಯಾಕೆ ಪ್ರಶ್ನಿಸ್ತೀರಿ? ನಾನು ಇಲ್ಲಿ ಕೇಳಿದೆ ಕುಮಟಳ್ಳಿ ಅವರಿಗೆ ಎಷ್ಟು ಜನ ಮಕ್ಕಳು ಅಂತ ಇಬ್ಬರು ಅಂದ್ರು, ಐತಿ ಗಂಡಸತನ ಅಂದೆ ಇಂಥ ವಿಷಯಗಳನ್ನು ಬಿಟ್ಟು ಏನು ಕೇಳಬೇಕು, ಏನು ಮಾತಾಡಬೇಕು ಎಂಬುದು ಇವರಿಗೆ ಗೊತ್ತಿಲ್ಲ ಕುಮಟಳ್ಳಿ ಮೋಸ ಮಾಡ್ತಾರ, ಗೋಮುಖ ವ್ಯಾಘ್ರ ನ್ನುವ ನೀವೇನು ಸಾಚಾನಾ? ಯವ್ವಾ ನನ್ನ ಎದೆ ಝಲ್ ಅಂತಂತೆ, ಯಾಕೆ ಝಲ್ ಅಂತು ಎಂತೆಂಥ ದೊಡ್ಡವರದೇ ಎದೆ ಝಲ್ ಅಂತಿದೆ ನಮ್ಮ ಮಂತ್ರಿಗಳಿಗೆ ಹೇಳಿದೆ ನೋಡಿ ಅವರು ಬಂದ್ರೆ ನಿಮ್ಮ ಎದೆಯೂ ಝಲ್ ಎಂದೀತು ಅಂದೆ ಮೊನ್ನೆ ರಾತ್ರಿ ಹಾವೇರಿಯಲ್ಲಿ ಸಚಿವರೊಂದಿಗೆ ಕುಳಿತಾಗ ಅಥಣಿಯಲ್ಲಿ ಎದೆ ಝಲ್ ಅಂತಿದೆ, ನಾಳೆ ನಿಮಗೂ ಅಥಣಿಗೆ ಹೋದರೆ ಝಲ್ ಎಂದೀತು ಎಂದು ತಮಾಷೆ ಮಾಡಿದೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ವಾಗ್ದಾಳಿ ಮಾಡಿದ  ಯತ್ನಾಳ 

Please follow and like us:
error