ಹುಬ್ಬಳ್ಳಿ ಬೀಕರ ಅಪಘಾತ : ನಾಲ್ವರ ಸಾವು

ಬೆಳ್ಳಂ ಬೆಳಿಗ್ಗೆ ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಬಲಿಯಾದ ಘಟನೆ ಧಾರವಾಡದ ಅಣ್ಣಿಗೇರಿ ಬಳಿ ನಡೆದಿದೆ. ಕಾರು ಮತ್ತು ಕ್ರೂಜರ್ ನಡುವೆ ಡಿಕ್ಕಿಯಾಗಿದ್ದು ಘಟನೆಯಲ್ಲಿ ನಾಲ್ಕು ಸಾವಿಗೀಡಾಗಿದ್ದಾರೆ.

ಗದಗ ಹುಬ್ಬಳ್ಳಿ ರಸ್ತೆಯ ಕೊಂಡಿಕೊಪ್ಪ ಕ್ರಾಸ್ ಬಳಿ ಈ ಒಂದು ಘಟನೆ ನಡೆದಿದೆ. ಅಣ್ಣಿಗೇರಿ ಪಟ್ಟಣದ ಬಳಿಯ ಹೊರವಲಯದ ಕೊಂಡಿಕೊಪ್ಪ ಕ್ರಾಸ್ ನಲ್ಲಿ ದುರ್ಘಟನೆ ನಡೆದಿದೆ‌.

ಇನ್ನೂ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದು ಸಣ್ಣಗಂಗಣ್ಣ ,ನಾಗಮ್ಮ ,ಹನುಮಂತು ಈರಣ್ಣಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇವರೆಲ್ಲರುಇ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು ಇನ್ನೂ ಸಣ್ಣೀರಣ್ಣ ಮತ್ತು ಲಕ್ಷ್ಮೀ ಗಾಯಗೊಂಡಿದ್ದಾರೆ.

ಕ್ರೂಜರ್ ನ ಚಾಲಕ ಮಲ್ಲಪ್ಪ ಗಿಡ್ಡನ್ನವರ ತೀವ್ರ ಗಾಯ ಕಿಮ್ಸ್ ಆಸ್ಪತ್ರೆಗೆ ದಾಖಲು ಕ್ರೂಜರ್ ಚಾಲಕನ ನಿರ್ಲಕ್ಷ್ಯ ದಿಂದಲೇ ಈ ಒಂದು ಅಪಘಾತ ನಡೆದಿದ್ದು ಮೃತರು ರಾಯಚೂರು ಜಿಲ್ಲೆಯ ಮಾನ್ವಿಯ ವಿಠ್ಠಲ ನಗರದ ನಿವಾಸಿಗಳಾಗಿದ್ದಾರೆ.

ಮಾನ್ವಿಯಿಂದ ಕಾರವಾರದ ಹಲಗಾ ಗೆ ಪಾರ್ಶ್ವವಾಯು ಚಿಕಿತ್ಸೆಗೆ ಹೊರಟಿದ್ದರು .ಆಸ್ಪತ್ರೆಗೆ ಚಿಕಿತ್ಸೆ ಗೆಂದು ಹೊರಟವರು ದಾರಿಯಲ್ಲಿಯೇ ಆಸ್ಪತ್ರೆ ಸೇರಿದ್ದಾರೆ. ಇನ್ನೂ ವಿಷಯ ತಿಳಿದ ಅಣ್ಣಿಗೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು.

ನವಲಗುಂದ ಠಾಣೆ ಇನ್ಸ್ಪೆಕ್ಟರ್ ಸಿ ಜಿ ಮಠಪತಿ, Psi N K ಜೂಲಿಕಟ್ಟಿ ,Asi ಹೊಳೆಯಣ್ಣನವರ ,ಅಣ್ಣಿಗೇರಿ ಪೊಲೀಸ್ ಠಾಣಾ ಸಿಬ್ಬಂದಿ ಸಂತೋಷ್ ದೇಸೂರ ,112 ವಾಹನದ ಸಿಬ್ಬಂದಿಗಳು ಉಪಸ್ಥಿತರಿದ್ದರು.ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ ಪೊಲೀಸರು.

Please follow and like us:
error