ಹಿರಿಯ ಸಾಹಿತಿ , ರಂಗಚೇತನ , ಗವೀಶ ಹಿರೇಮಠರು ಇನ್ನಿಲ್ಲ

ಕನ್ನಡನೆಟ್ ನ್ಯೂಸ್ : ಲೇಖಕ , ಪ್ರಖ್ಯಾತ ಸಾಹಿತಿ , ಅಂಕಣ ಬರಹಗಾದ ಗವೀಶ ಹಿರೇಮಠರು ದಿನಾಂಕ : 13/08/2020 ರಂದು ಗುರುವಾರ ಮಧ್ಯಾಹ್ನ 2:30 ಘಂಟೆಗೆ ನಿಧನರಾದರು.

ದಿನಾಂಕ : 08/09/1946 ರಲ್ಲಿ ಜನಿಸಿದ ಗವೀಶ ರವರು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ ಗ್ರಾಮದು ಜನಿಸಿದ್ದರು . 74 ರ ವಯಸ್ಸಿನಲ್ಲಿ ಇತ್ತೀಚಿಗೆ ಮೂತ್ರಾಶಯ ಅರ್ಬುದ ರೋಗದಿಂದ ಬಳಲಿ ಬೆಂಗಳೂರಿನ ಕರುಣಾಶ್ರಯ ಆಸ್ಪತ್ರೆಯಲ್ಲಿ ನಿಧನರಾದರು . ಅವರಿಗೆ ಪತ್ನಿ , ಏಕಮೇವ ಪುತ್ರ , ಒಬ್ಬ ಅಣ್ಣ , ಐದಾರು ತಮ್ಮಂದಿರು , ತಂಗಿಯರನ್ನು ಹಾಗೂ ತಾಯಿಯವರನ್ನು ಅಗಲಿದ್ದಾರೆ . ಕಾವ್ಯ , ಕಾದಂಬರಿ , ನಾಟಕ , ಚರಿತ್ರೆ ಅಭಿನಂದನಾ ಗ್ರಂಥ , ಸಂಪಾದನಾ ಗ್ರಂಥ ಹೀಗೆ 50 ಕೃತಿಗಳನ್ನು ರಚಿಸಿ , ಡಾ . ಜವರೇಗೌಡರಿಂದ ಕನ್ನಡ ಸರಸ್ವತಿಯ ಕಂಠಾಭರಣಾ , ಪದ್ಮಶ್ರೀ ವಿ . ಕೃ . ಗೋಕಾಕ , ಡಾ . ಹಾ.ಮಾ. ನಾಯಕ , ಕೆ.ಎಸ್ . ನರಸಿಂಹಸ್ವಾಮಿ , ಬರಗೂರ ರಾಮಚಂದ್ರಪ್ಪ , ಜಿ.ಎಮ್ ಶಿರಹಟ್ಟಿಯವರಿಂದ ಪ್ರಶಂಸೆಗೊಳಲ್ಪಟ್ಟು , ಕರ್ನಾಟಕ ಲಲಿತಕಲಾ ಅಕಾಡೆಮಿ , ನಾಟಕ ಅಕಾಡೆಮಿ ಪುಸ್ತಕ ಪ್ರಶಸ್ತಿ , ಗುಲ್ಬರ್ಗಾ ವಿ.ವಿ , ರಾಜ್ಯೋತ್ಸವ ಪ್ರಶಸ್ತಿ , ಅತ್ತಿಮಬ್ಬೆ ಟ್ರಸ್ಟ್ ಪ್ರಶಸ್ತಿ , ಕನ್ನಡಜ್ಯೋತಿ ಪ್ರಶಸ್ತಿ ಗಳಿಸಿದ್ದಲ್ಲದೆ ಕನ್ನಡ ವೃತ್ತಿ ರಂಗಭೂಮಿಗಾಗಿ 6 ದಶಕಗಳ ಕಾಲ ಅವಿರತವಾಗಿ ದುಡಿದು ರಂಗನಟರ ಬಾಳಿಗೆ ದೀವಟಿಗೆಯ ಹಾಗೆ ಬೆಳಕುಕೊಟ್ಟವರು . ಖ್ಯಾತ ಸಾಹಿತಿ , ಡಾ . ಪಂಚಾಕ್ಷರಿ ಹಿರೇಮಠರ , ಅಣ್ಣನವರಾದ ಶ್ರೀ ವೀರಭದ್ರಯ್ಯ ಶಾಸ್ತ್ರಿಗಳು ಪಾರ್ವತಿಯವರ ಎರಡನೇ ಚಿರಂಜೀವಿ ಶ್ರೀಯುತರ ಅಂತ್ಯಕ್ರಿಯೆಯನ್ನು ಅವರ ಊರಾದ ಬಿಸರಹಳ್ಳಿಯಲ್ಲಿ ದಿನಾಂಕ : 14/08/2020 ಶುಕ್ರವಾರದಂದು ಬೆಳಿಗ್ಗೆ 10 ಘಂಟೆಗೆ ನೆರವೇರಿಸಲಾಗುವುದು ,

Please follow and like us:
error