ಹಿರಿಯ ದಲಿತ ಮುಖಂಡ, ಹೋರಾಟಗಾರ ಆರತಿ ತಿಪ್ಪಣ್ಣ ಇನ್ನಿಲ್ಲ

ಗಂಗಾವತಿ: ಹಿರಿಯ ದಲಿತ ಮುಖಂಡ ಹಾಗೂ ಹೋರಾಟಗಾರ ಆರತಿ ತಿಪ್ಪಣ್ಣ (56) ಇಂದು ಬೆಳಿಗ್ಗೆ 4 ಗಂಟೆಗೆ ನಿಧನರಾದರು.,

ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದ ಹಿನ್ನೆಲೆ ಹುಬ್ಬಳ್ಳಿಯ ಕೆ,ಎಲ್,ಇ, ಸುಚಿರಾಯ್ ಆಸ್ಪತ್ರೆಗೆ ದಾಖಲಾಗಿದ್ದರು,

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯರಾಗಿದ್ದ ಇವರು, ದಲಿತಪರ, ಪ್ರಗತಿಪರ ಹೋರಾಟಗಾರರಾಗಿದ್ದಷ್ಟೇ ಅಲ್ಲದೇ, ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಒಡನಾಟ ಹೊಂದಿದ್ದರು.
ಕೊಪ್ಪಳ ಜಿಲ್ಲೆ ಮಾತ್ರವಲ್ಲ ರಾಜ್ಯ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಪ್ರತಿಯೊಂದು ಹೋರಾಟಗಳನ್ನು ರೂಪಿಸುವುಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಆರತಿ ತಿಪ್ಪಣ್ಣ ಎಲ್ಲರ ನೆಚ್ಚಿನ ಅಣ್ಣನಾಗಿದ್ದರು.

Please follow and like us:
error