ಅಪ್ಪ ದನಗಳನ್ನು ಮಾರಿದ, ಮಗ ಬಜರಂಗದಳದೊಂದಿಗೆ ಸೇರಿ ಕಳ್ಳತನದ ದೂರು ದಾಖಲಿಸಿದ !

ಹಾಸನ, ಎ.2: ವ್ಯಾಪಾರಿಯೊಬ್ಬರಿಗೆ ವ್ಯಕ್ತಿಯೊಬ್ಬ ಎರಡು ದನಗಳನ್ನು ಮಾರಿದ ನಂತರ ಆತನ ಮಗ ಬಜರಂಗ ದಳದ ಕಾರ್ಯಕರ್ತರೊಂದಿಗೆ ದನಗಳನ್ನು ಕೊಂಡ ಮೂವರನ್ನು ಥಳಿಸಿ, ದನದ ಸಮೇತ ನಗದು ಲೂಟಿ ಮಾಡಿದ್ದಲ್ಲದೇ, ಪೊಲೀಸರಿಗೆ ದನಗಳ ಕಳ್ಳತನದ ದೂರು ನೀಡಿರುವ ಘಟನೆ ಆಲೂರು ತಾಲೂಕು ಕೆಂಚ್ಚಮ್ಮನ ಹೊಸಕೋಟೆ ಗ್ರಾಮದಲ್ಲಿ ರವಿವಾರ ನಡೆದಿದೆ. images

ಮೆಣಸಿನ ಹೊಟ್ಟು ಖರೀದಿಗಾಗಿ ತೆರಳಿದ್ದ ವ್ಯಾಪಾರಿಗಳಿಗೆ ದನ ಕೊಳ್ಳುವಂತೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಎರಡು ದನಗಳ ವ್ಯಾಪಾರ ಕುದರಿದ ನಂತರ ಗಣೇಶ್ ಮತ್ತು ಆತನ ಪತ್ನಿಗೆ ನಗದು ನೀಡಿದ್ದರು. ದನಗಳನ್ನು ವಾಹನಕ್ಕೆ ಏರಿಸಿಕೋಡು ಹೋಗುವ ವೇಳೆ ದನ ಮಾರಿದ್ದವನ ಮಗ ವಿವೇಕ್ ಎಂಬಾತ ಬಜರಂಗದಳದ ಕಾರ್ಯಕರ್ತರೊಂದಿಗೆ ವಾಹನ ಅಡ್ಡಗಟ್ಟಿದ್ದಲ್ಲದೇ ದನ ಕೊಂಡುಕೊಂಡಿದ್ದ ವಿಫನ್(25), ಇಸ್ಮಾಯಿಲ್ ಝಬೀವುಲ್ಲ್ಲಾ(28) ಮತ್ತು ರಿಯಾಝ್ ಎಂಬ ವ್ಯಾಪಾರಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಅವರ ಬಳಿ ಇದ್ದ 43 ಸಾವಿರ ನಗದು ದೋಚಿ ವಾಹನ ಜಖಂ ಗೊಳಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ವಿಫನ್ ಮತ್ತು ಇಸ್ಮಾಯಿಲ್ ಬಜರಂಗ ದಳದ ಕಾರ್ಯಕರ್ತರಿಂದ ತಪ್ಪಿಸಿಕೊಂಡಿದ್ದಾರೆ. ಬಳಿಕ ದನ ಮಾರಾಟ ಮಾಡಿದ್ದ ಗಣೇಶ್‌ನನ್ನ್ನು ಪೊಲೀಸ್ ಠಾಣೆಗೆ ಕರೆಯಲು ಹೊಗಿದ್ದ ಶೇರು ಎಂಬವರಿಗೂ ಬಜರಂಗದಳದ ಕಾರ್ಯಕರ್ತರು ಥಳಿಸಿ, ಗ್ರಾಮದಲ್ಲಿ ಕಟ್ಟಿಹಾಕಿದ್ದು, ಈ ವೇಳೆ ಸ್ಥಳಕ್ಕೆ ಪೊಲೀಸರು ಬಂದು ಶೇರು ಎಂಬ ವ್ಯಾಪಾರಿಯನ್ನು ಠಾಣೆಗೆ ಕರೆತಂದಿದ್ದಾರೆ ಎನ್ನಲಾಗಿದೆ. ದನ ಮಾರಟ ಮಾಡಿ ನಗದು 14 ಸಾವಿರ ರೂ. ಪಡೆದಿರುವ ವ್ಯಕ್ತಿ ಗಣೇಶ್ ಮತ್ತು ಆತನ ಪತ್ನಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.

ಈ ಘಟನೆ ಬಳಿಕ ದಂಪತಿ ಮಗ ವಿವೇಕ್ ಹಾಗೂ ಬಜರಂಗ ದಳದ ಕಾರ್ಯಕರ್ತರು ದನ ಕಳ್ಳತನ ವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣವನ್ನು ಪೊಲೀಸರು ದಾಖಲು ಮಾಡಿಕೊಂಡು ಶೇರು ಎಂಬತನನ್ನು ಬಂದಿಸಿದ್ದಾರೆಂದು ತಿಳಿದು ಬಂದಿದೆ. ಬಜರಂಗ ದಳದ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿರುವ ವಿಫನ್ ಮತ್ತು ಇಸ್ಮಾಯಿಲ್ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related posts

Leave a Comment