ಹಾಸನದಲ್ಲಿ 5 ಹೊಸ ಕೋವಿದ್ ಪ್ರಕರಣ ಪತ್ತೆ


ಹಾಸನ ಜೂ : ಜಿಲ್ಲೆಯಲ್ಲಿ ಇಂದು 5 ಹೊಸ ಕೊವಿದ್ 19 ಪ್ರಕರಣಗಳು ಪತ್ತೆಯಾಗಿವೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 249 ಕ್ಕೆ ಏರಿಕೆಯಾಗಿದೆ. ಈ ವರಗೆ 192 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 56 ಸಕ್ರಿಯ ಸೋಂಕಿತರು ಕೊವಿದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರಗೆ ಒಬ್ಬರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಇಂದು ಪತ್ತೆಯಾದ ಪ್ರಕರಣದಲ್ಲಿ ಇಬ್ಬರು ಚನ್ನರಾಯಪಟ್ಟಣ ಹಾಗೂ ಇಬ್ಬರು ಹಾಸನ ತಾಲ್ಲೂಕಿಗೆ ಸೇರಿದವರಾಗಿದ್ದು.
ಒಬ್ಬರು ಅರಕಲಗೂಡು ತಾಲ್ಲೂಕಿನವರಾಗಿದ್ದಾರೆ.ಇದರಲ್ಲಿ ಹಾಸನ ತಾಲ್ಲೂಕಿನ ಒಬ್ಬರು ಚನೈಗೆ ಪ್ರಯಾಣ ಮಾಡಿ ಬಂದ ಹಿನ್ನಲೆ ಹೊಂದಿದ್ದು. ಇತರ ನಾಲ್ಕು ಪ್ರಕರಣಗಳಲ್ಲಿ ಮುಂಬೈ ಪ್ರಯಾಣದ ಹಿನ್ನಲೆ ಇದೆ

Please follow and like us:
error