ಹಾವೇರಿ : 18 ಜನರಿಗೆ ಜನರಿಗೆ ಕೋವಿಡ್ ಸೋಂಕು – 50 ಜನರ ಬಿಡುಗಡೆ-112 ಪ್ರಕರಣ ಸಕ್ರಿಯ


ಹಾವೇರಿ: : ಸರ್ಕಾರಿ ವೈದ್ಯರು, ಶುಶ್ರೂಷಕಿಯರು, ಕಾನ್‍ಸ್ಟೇಬಲ್ ಮೆಡಿಕಲ್ ರೆಪ್ರೆಸೆಂಟಿಟಿವ್ ಸೇರಿ ಗುರುವಾರ ಜಿಲ್ಲೆಯ 18 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 50 ಸೋಂಕಿತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 130 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. 116 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ. ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ. 112 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.
ಹಾವೇರಿ ತಾಲೂಕಿನ ಕನವಳ್ಳಿಯ 55 ವರ್ಷದ ಪುರುಷ (hvಡಿ -213), 45 ವರ್ಷದ ಮಹಿಳೆ (hvಡಿ -214), 27 ವರ್ಷದ ಪುರುಷ (hvಡಿ -215), 23 ವರ್ಷದ ಯುವತಿ (hvಡಿ -216), ರಾಣೇಬೆನ್ನೂರು ನಗರದ 22 ವರ್ಷದ ಯುವತಿ (hvಡಿ -217), ಬ್ಯಾಡಗಿ ತಾಲೂಕಿನ ಕದರಮಂಡಲಗಿಯ 32 ವರ್ಷದ ಪುರುಷ (hvಡಿ -218), ರಾಣೇಬೆನ್ನೂರಿನ 31 ವರ್ಷದ ಮಹಿಳೆ (hvಡಿ -219), ರಾಣೇಬೆನ್ನೂರು ಸಿದ್ದೇಶ್ವರ ನಗರದ42 ವರ್ಷದ ಪುರುಷ (hvಡಿ -220), ಶಿಗ್ಗಾಂವ ತಾಲೂಕಿನ ಹೊಸೂರಯತ್ನಳ್ಳಿ ಗ್ರಾಮದ 70 ವರ್ಷದ ಪುರುಷ (hvಡಿ -221), ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ 35 ವರ್ಷದ ಮಹಿಳೆ (hvಡಿ -222), ರಾಣೇಬೆನ್ನೂರಿನ 40 ವರ್ಷದ ಮಹಿಳೆ (hvಡಿ -223), ಮೈಸೂರಿನಿಂದ ಆಗಮಿಸಿದ ಬಂಕಾಪುರದ ಚೌಡನಕೇರಿಯ 40 ವರ್ಷದ ಪುರುಷ (hvಡಿ -224), 27 ವರ್ಷದ ಹಾವೇರಿ ಜಿಲ್ಲಾ ಆಸ್ಪತ್ರೆ ಶುಶ್ರೂಷಕಿ(hvಡಿ -225), ಭೂ ವೀರಾಪುರದ ಕಂಟೈನಮೆಂಟ್ ಜೋನ್‍ನ 27 ವರ್ಷದ ಮಹಿಳೆ(hvಡಿ -226), ಹಾನಗಲ್ ತಾಲೂಕು ಹೋತನಹಳ್ಳಿಯ ಕಂಟೈನಮೆಂಟ್ ಜೋನ್‍ನ 26 ವರ್ಷದ ಪುರುಷ (hvಡಿ -227), ರಾಣೇಬೆನ್ನೂರಿನ ಬಸವೇಶ್ವನಗರ 46 ವರ್ಷದ ಪುರುಷ (hvಡಿ -228), ಹಾವೇರಿಯ 20 ವರ್ಷದ ಯುವತಿ (hvಡಿ -229), ಹಾಗೂ 32 ವರ್ಷದ ಪುರುಷ (hvಡಿ -230)ನಿಗೆ ಇಂದು ಸೋಂಕು ದೃಢಪಟ್ಟಿದೆ.
ಪ್ರವಾಸ ಹಿನ್ನೆಲೆ: ಹಾವೇರಿ ತಾಲೂಕು ಕನವಳ್ಳಿ ಗ್ರಾಮದ hvಡಿ -213ರ ಸೋಂಕಿತ P-16598ರ ಸಂಪರ್ಕಿತ, hvಡಿ -214 ಮಹಿಳೆ P-16599ರ ಸಂಪರ್ಕಿತೆ, hvಡಿ-215ರ ಸೋಂಕಿತ P-16600ರ ಸಂಪರ್ಕ ಹಾಗೂ hvಡಿ -216 ಸೋಂಕಿತಳು P-16601ರ ಸಂಪರ್ಕಿತೆ. ಇಂದಿನ ಸಂಪರ್ಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆ.
ರಾಣೇಬೆನ್ನೂರಿನ ಬೆನಕೊಂಡದ hvಡಿ -217 ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಹಾಗೂ hvಡಿ -218 ಮೂಲತಃ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದವನಾಗಿದ್ದು, ರಾಣೇಬೆನ್ನೂರ ಸರ್ಕಾರಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಕರ್ತವ್ಯ ನಿರತ ವೈದ್ಯನಾಗಿದ್ದು, ಜುಲೈ 1 ರಿಂದ ಜು.4ರವರೆಗೆ ಕದರಮಂಡಲಗಿ ಗ್ರಾಮದ ಸ್ವಂತ ಮನೆಯಲ್ಲಿ ಉಳಿದಿದ್ದು, ಐ.ಎಲ್.ಐ. ಲಕ್ಷಣದ ಕಾರಣ ಜುಲೈ 4 ರಂದು ರಾಣೇಬೆನ್ನೂರು ತಾಲೂಕಾ ಆಸ್ಪತ್ರೆಯಲ್ಲಿ ಗಂಟಲು ಮಾದರಿ ತಪಾಸಣೆ ಮಾಡಿಕೊಂಡಿರುವ ಇವರು ಜುಲೈ 6 ರಿಂದ 8ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ರಾಣೇಬೆನ್ನೂರ ತಾಲೂಕಾ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಜುಲೈ 8 ರಂದು ರಾತ್ರಿ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಇವರನ್ನು ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಐದು ಜನರನ್ನು ಪ್ರಾಥಮಿಕ ಸಂಪರ್ಕಿತರೆಂದು ಗುರುತಿಸಿ ಕ್ರಮವಹಿಸಲಾಗಿದೆ. ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದೆ.
hvಡಿ -219 ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. hvಡಿ -220 ಹಾಗೂ hvಡಿ -229 ಸೋಂಕಿತರು P -19946ರ ಸಂಪರ್ಕಿತರು. hvಡಿ -221 ಐ.ಎಲ್.ಐ. ಲಕ್ಷಣ ಹೊಂದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಐ.ಎಲ್.ಐ. ಕಾರಣ ಪರೀಕ್ಷೆಗೆ ಒಳಪಡಿಸಲಾಗಿದ್ದು, ಜುಲೈ 8 ರಂದು ಪಾಸಿಟಿವ್ ವರದಿ ಬಂದಿರುತ್ತದೆ. ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
hvಡಿ -222 ಬೊಮ್ಮನಹಳ್ಳಿ ಕಂಟೈನಮೆಂಟ್ ಜೋನಿನ ವ್ಯಕ್ತಿಯಾಗಿದ್ದು, P -19927ರ ಸಂಪರ್ಕಿತರು. hvಡಿ -223 ಸೋಂಕಿತರು P -19946ರ ಸಂಪರ್ಕಿತರು. hvಡಿ -224 ಸೋಂಕಿತನು ಕಳೆದ 10 ದಿನಗಳ ಹಿಂದೆ ಮೈಸೂರು ಪ್ರವಾಸ ಹಿನ್ನೆಲೆ ಹೊಂದಿದ್ದು ಐ.ಎಲ್.ಐ. ಕಾರಣ ಜುಲೈ 4 ರಂದು ದ್ರವ ಪರೀಕ್ಷೆಗೆ ಒಳಗಾಗಿದ್ದಾರೆ. ಜುಲೈ 8 ರಂದು ಪಾಸಿಟಿವ್ ಬಂದಿದೆ.
hvಡಿ -225 ಸೋಂಕಿತೆ ಐ.ಎಲ್.ಐ. ಲಕ್ಷಣ ಕಾರಣ ಸ್ವಾಬ್ ಪರೀಕ್ಷೆಗೆ ಒಳಪಡಿಸಲಾಗಿತ್ತು. hvಡಿ -226 ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. hvಡಿ -227 ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. hvಡಿ -228 ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. hvಡಿ -230 ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಸದರಿಯವರ
ನಿಯಮಾನುಸಾರ ಸೋಂಕಿತರ ನಿವಾಸ ಇರುವ ಪ್ರದೇಶದ 100 ಮೀಟರ್ ಪ್ರದೇಶವನ್ನು ಕಂಟೈನಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಹಾಗೂ ನಗರ ಪ್ರದೇಶದ 200 ಪ್ರದೇಶವನ್ನು ಹಾಗೂ ಸೋಂಕಿತರ ಸಂಪೂರ್ಣ ಗ್ರಾಮಗಳನ್ನು ಬಫರ್ ಜೋನ್ ಆಗಿ ಘೋಷಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲೂಕಾ ತಹಶೀಲ್ದಾರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಎಂಟು ಜನರು ಗುಣಮುಖ: ಇಂದು 50 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. P-8292, P-6832, P-10326, P-10328, P-10329, P-10330, P-10331, P-10334, P-10335, P-10333, P-10599, P-12109, P-12116, P-12118, P-12120, P-16601, P-19931, P-19940, P-19936, P-19932, P-19933, P-19929, P-19937, P-19930, P-19934, P-19938, P-19939, P-14581, P-14582, P-14583, P-14584, P-14585, P-14586, P-14591, P-14592, P-15593, P-15594, P-14596, P-14597, P-14598, P-14599, P-14600, P-14601, P-14621, P-14622, P-14623, P-14624, P-14625, P-14626, P-14627 ಸೋಂಕಿತ ವ್ಯಕ್ತಿಗಳು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.

Please follow and like us:
error