ಹಾವೇರಿ ಜಿಲ್ಲೆಯಲ್ಲಿ 12 ಜನರಿಗೆ ಕೋವಿಡ್ ಸೋಂಕು ದೃಢ


ಹಾವೇರಿ: ಜಿಲ್ಲೆಯಲ್ಲಿ ಶನಿವಾರ 12 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 38 ವ್ಯಕ್ತಿಗಳಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 21 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 17 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ಶಿಗ್ಗಾಂವ ನಗರದ ವ್ಯಕ್ತಿಗಳಾದ 44 ವರ್ಷದ P-8291 ಮಹಿಳೆ, 48 ವರ್ಷದ P-8292 ಪುರುಷ, 23 ವರ್ಷದ P- 8293 ಪುರುಷ, 16 ವರ್ಷದ P- 8294 ಹುಡುಗಿ, 75 ವರ್ಷದ P-8295 ವೃದ್ಧೆ, 85 ವರ್ಷದ P- 8296 ವೃದ್ಧೆ, 45 ವರ್ಷದ P- 8642 ಮಹಿಳೆ, 20 ವರ್ಷದ P- 8643 ಮಹಿಳೆ, 15 ವರ್ಷದ P- 8644 ಹುಡುಗಿ, 04 ವರ್ಷದ P-8645 ಮಗು, 60 ವರ್ಷದ P-8646 ಪುರುಷ, 40 ವರ್ಷದ P- 8647 ಪುರುಷನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
P- 6832ರ ಸೋಂಕಿತನ ಪ್ರಾಥಮಿಕ ಸಂಪರ್ಕದಿಂದ 11 ಜನರಿಗೆ ಹಾಗೂ P- 6252 ಸೋಂಕಿತೆಯ ಪ್ರಾಥಮಿಕ ಸಂಪರ್ಕದಿಂದ 85 ವರ್ಷದ P- 8296 ವೃದ್ಧೆ ಸೋಂಕು ದೃಢಪಟ್ಟಿದೆ. ಎಲ್ಲ ಸೋಂಕಿತರ ಗಂಟಲು ದ್ರವವನ್ನು ಜೂನ್ 17 ರಂದು ಸ್ವಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್ 19ರ ರಾತ್ರಿ ಕೋವಿಡ್ ಸೋಂಕಿತರೆಂದು ಲ್ಯಾಬ್ ವರದಿ ಬಂದಕೂಡಲೇ ಎಲ್ಲ ಸೋಂಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪ್ರವಾಸ ಹಿನ್ನೆಲೆ: ಶಿಗ್ಗಾಂವ ನಗರದ ದೇಸಾಯಿಗಲ್ಲಿಯಲ್ಲಿ ವಾಸವಾಗಿದ್ದ P- 8291, (44 ವರ್ಷದ ಮಹಿಳೆ ತಮ್ಮ ಪತಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದರು), P- 8292 (48 ವರ್ಷದ ಪುರುಷ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದರು). P- 8293 (23 ವರ್ಷದ ಪುರುಷ ವಾಸವಾಗಿದ್ದರು). P- 8294 (16 ವರ್ಷದ ಹುಡುಗಿ ವಾಸವಾಗಿದ್ದರು). P- 8295 (75 ವರ್ಷದ ವೃದ್ಧೆ ವಾಸವಾಗಿದ್ದರು), P- 8643 (20 ವರ್ಷ ಮಹಿಳೆ ತನ್ನ ತಂದೆ-ತಾಯಿಯೊಂದಿಗೆ),P- 8647(40 ವರ್ಷದ ಪುರುಷ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ) ವಾಸವಾಗಿದ್ದರು.
ಶಿಗ್ಗಾಂವಿಯ ಗೌಡರ ಓಣಿಯಲ್ಲಿ P- 8296 (85 ವರ್ಷದ ವೃದ್ಧೆ ತನ್ನ ಮಕ್ಕಳೊಂದಿಗೆ), P-8642( 45 ವರ್ಷ ಮಹಿಳೆ ತನ್ನ ಗಂಡ ಹಾಗೂ ಮಕ್ಕಳೊಂದಿಗೆ), P-8644 (15 ವರ್ಷದ ಹುಡುಗಿ ತನ್ನ ತಂದೆತಾಯಿಯೊಂದಿಗೆ), P-8645 ( ನಾಲ್ಕು ವರ್ಷದ ಮಗು ತನ್ನ ತಂದೆ-ತಾಯಿಯೊಂದಿಗೆ) ಹಾಗೂ P-8646 ( 60 ವರ್ಷದ ಪುರುಷ ತನ್ನ ಪತ್ನಿ ಮಕ್ಕಳೊಂದಿಗೆ) ವಾಸವಾಗಿದ್ದರು.

P-33 (45 ವರ್ಷದ ಮಹಿಳೆ) P-34(20 ವರ್ಷದ ಮಹಿಳೆ ತನ್ನ ತಂದೆ ತಾಯಿಯೊಂದಿಗೆ ವಾಸವಾಗಿದ್ದರು) ಹಾಗೂ
ಶಿಗ್ಗಾಂವಿ ನಗರದ ಗೌಡರ ಓಣಿಯ ಹಾಗೂ ದೇಸಾಯಿಗಲ್ಲಿ ರಸ್ತೆಯೊಳಗೊಂಡಿರುವ 100 ಪ್ರದೇಶವನ್ನು ಕಂಟೇನ್ಮೆಂಟ್ ವಲಯವಾಗಿ ಪರಿವರ್ತಿಸಲಾಗಿದೆ. ಸುತ್ತಲಿನ 200 ಮೀ.ಪ್ರದೇಶವನ್ನು ಬಫರ್ ಜೋನ್ ಆಗಿ ಪರಿವರ್ತಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಶಿಗ್ಗಾಂವ ತಹಶೀಲ್ದಾರ ಅವರನ್ನು ನೇಮಕಮಾಡಿ ಆದೇಶ ಹೊರಡಿಸಲಾಗಿದೆ.

Please follow and like us:
error