fbpx

ಹದಗೆಟ್ಟಿರುವ ರಸ್ತೆ ಶೀಘ್ರ ದುರಸ್ತಿಗೆ ರೈತ ಸಂಘ ಹಸಿರುಸೇನೆ ಆಗ್ರಹ : ಹೋರಾಟದ ಎಚ್ಚರಿಕೆ

ಭಾರಿಗಾತ್ರದ ವಾಹನ ಓಡಾಡಿ ರಸ್ತೆಗಳು ಕೆಟ್ಟವ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡರು

ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಹಿರೇಕಾಸನಕಂಡಿ ಗ್ರಾಮದಿಂದ ಎನ್.ಹೆಚ್ . – 50 ರಿಂದ ಹಿರೇಬಗನಾಳ , ಚಿಕ್ಕಬಗನಾಳ , ಕರ್ಕಿಹಳ್ಳಿ , ಲಾಚನಕೆರಿ , ಕುಣಿಕೇರಿ , ಕುಣಿಕೇರಿ ತಾಂಡ , ಹಾಲವರ್ತಿ , ಗವಿಮಠ ರಸ್ತೆ , ಆಲ್ಲನಗರ , ಗಿಣಿಗೇರಿ , ಕನಕಾಪುರ , ಹಾಗೂ ಹ್ಯಾಟಿ – ಮುಂಡರಗಿ ಈ ಹಳ್ಳಿಗಳ ರಸ್ತೆಗಳ ಮೇಲೆ ಭಾರಿಗಾತ್ರದ ವಾಹನಗಳು ಕಾರ್ಖಾನೆಗಳಿಗೆ 35 ರಿಂದ 45 ಟನ್‌ಗಳವರೆಗೆ ಮೈನ್ಸ್ ಮತ್ತು ಕೋಕ್ಗಳನ್ನು ಎರಿಕೊಂಡು ಹೋಗುವುದರಿಂದ ರಸ್ತೆಗಳು ಹಾಳಾಗಿದ್ದು , ಹಳ್ಳಿಗಳಿಗೆ ಬಸ್ಸುಗಳ ಸಂಚಾರವಿಲ್ಲದೆ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆ ಉರಿಟಾಗಿದೆ . ಶಾಸಕರಿಗೆ , ಸಂಸದರಿಗೆ , ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಿಗೆ , ಹಾಗೂ ಜಿಲ್ಲಾಧಿಕಾರಿಗಳಿಗೆ ಅನೇಕಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ . ಆದ ಕಾರಣ ತಾವುಗಳು ಕೂಡಲೇ ಈ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದರು. ಒಂದು ವೇಳೆ ಈ ಸಮಸ್ಯೆಯನ್ನು ಒಂದು ವಾರದಲ್ಲಿ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ರೈತಪರ ಸಂಘನೆಗಳು ಹೋರಾಟಗಳನ್ನು ಹಮ್ಮಿಕೊಳ್ಳಲಾಗುದು . ಎಂದು ಎಚ್ಚರಿಸಿದರು. ,

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯಧ್ಯಕ್ಷರು ಸಂಗನಗೌಡ ಪೋಲಿಸ್‌ಪಾಟೀಲ , ನಾಗರಾಜ ಚಳ್ಳೊಳ್ಳಿ ಎಪಿಎಂಸಿ ಆದ್ಯಕ್ಷರು, ಜಡಿಯಪ್ಪ ಬಂಗಾಳಿ ಎಪಿಎಂಸಿ ಸದಸ್ಯರು, ಭರಮಣ್ಣ ಸಿಂಗಟಾಲೂರ , ಭಾಳಪ್ಪ ಕುಂಬಾರ ಕೊಡದಾಳ, ಹನುಮಂತಪ್ಪ ಬೆಣಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error
error: Content is protected !!