ಹಡಗಲಿ ತಾಲೂಕಿನ ಹಳ್ಳಿಗಳನ್ನು ಹಾವೇರಿ ಜಿಲ್ಲೆಗೆ ಸೇರಿಸಿದರೆ 371ಜೆ ಸೌಲಭ್ಯಕ್ಕೆ ಕಂಟಕ : ಪತ್ರೇಶ್ ಹಿರೇಮಠ್

ಹಗರಿಬೊಮ್ಮನಹಳ್ಳಿ : ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿ ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನರೆಡ್ಡಿ ಹಡಗಲಿ ಹರಪನಹಳ್ಳಿ ತಾಲೂಕಿನ ಮೂಲೆಕಟ್ಟಿನ ಹಳ್ಳಿಗಳನ್ನು ಹಾವೇರಿ ಜಿಲ್ಲೆಗೆ ಸೇರಿಸಿ ಎಂದು ಹೇಳುವ ಮೂಲಕ ಪಶ್ಚಿಮ ತಾಲೂಕಿನ ಹಳ್ಳಿಗಳ 371ಜೆ ಸೌಲಭ್ಯ ಕಸಿಯುವ ಹುನ್ನಾರ ನಡೆಸಿದ್ದು ಇದು ಖಂಡನೀಯ ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಕ್ರೋಶ ವ್ಯಕ್ತಪಡಿಸಿದರು

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಳ್ಳಾರಿ ನಗರದ ಜನತೆ ಜಿಲ್ಲೆ ರಚನೆಯಾದಾಗಿನಿಂದ ಪಶ್ಚಿಮ ತಾಲೂಕುಗಳ ಸಾರ್ವಜನಿಕರ ಗೋಳನ್ನು ಆಲಿಸದೇ ಈಗ ಜಿಲ್ಲೆ ವಿಭಜನೆಯಿಂದ ವ್ಯಾಪಾರ ವಹಿವಾಟು ಕುಸಿದು ಹೋಗುವ ಭಯದಿಂದ ತೊಳಲಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಪತ್ರೇಶ್ ಲೇವಡಿ ಮಾಡಿದರು

ಬಳ್ಳಾರಿ ಜಿಲ್ಲೆಯ ಅಖಂಡತೆ ಬಯಸುವ ವಿಭಜನೆ ವಿರೋಧಿ ಹೋರಾಟಗಾರರು ಹಡಗಲಿ ಹರಪನಹಳ್ಳಿ ತಾಲೂಕಿನ ಹಳ್ಳಿಗಳನ್ನು ಹಾವೇರಿ ಜಿಲ್ಲೆಗೆ ಸೇರಿಸಿ ಎನ್ನುವುದು ಅವರ ಸ್ವಾರ್ಥವನ್ನು ಬಹಿರಂಗಗೊಳಿಸಿದಂತಾಗಿದೆ ಎಂದು ಕಿಡಿಕಾರಿದ ಪತ್ರೇಶ್ ಯಾವುದೇ ಕಾರಣಕ್ಕೂ ಪಶ್ಚಿಮ ತಾಲೂಕುಗಳ ಹಳ್ಳಿಗಳನ್ನು ಹಾವೇರಿ ಜಿಲ್ಲೆಗೆ ಸೇರಿಸಬಾರದು ಇದರಿಂದ 371ಜ ಸೌಲಭ್ಯ ನಿಂತು ಹೋಗಿ ಹಳ್ಳಿಗಳ ಯುವಕರ ಭವಿಷ್ಯ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು

Please follow and like us:
error