ಸೋಮವಾರ ಕರ್ನಾಟಕ ಬಂದ್ : ಸಾರ್ವಜನಿಕರ ಸಹಕಾರಕ್ಕೆ ಕರೆ

ಕನ್ನಡನೆಟ್ ಜಿಲ್ಲಾ ರೈತ ಸಂಘಟನೆಗಳ ಸಮನ್ವಯ ಸಮಿತಿ , ಕೊಪ್ಪಳ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ಧೋರಣೆಯನ್ನು ಖಂಡಿಸಿ , ರೈತ , ದಲಿತ ಮತ್ತು ಕಾರ್ಮಿಕರಿಗೆ ಮರಣ ಶಾಸನವಾಗಲಿರುವ ಸುಗ್ರೀವಾಜ್ಞೆಯ ಕಾಯ್ದೆಗಳನ್ನು ವಾಪಾಸ್ AM ಪಡೆಯಲು ಒತ್ತಾಯಿಸಿ ದಿನಾಂಕ : 28-9-2020 ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾಹಿತಿ ನೀಡಿದರು.

ಅಂದು ಸಂಪೂರ್ಣ ಬಂದ್ ನಡೆಯಲಿದ್ದು ಸಾರ್ವಜನಿಕರು ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕರಿಸಬೇಕು ಎಂದು ಹೇಳಿದರು.

:: ಹಕ್ಕೊತ್ತಾಯಗಳು ” * ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಕಲ್ಪಿಸುವ ಸುಗ್ರೀವಾಜ್ಞೆಯ ಹೊಸ ಭೂ ಸುಧಾರಣೆ ಕಾಯ್ದೆಗಳನ್ನು ಹಿಂಪಡೆಯಬೇಕು . ರೈತರನ್ನು ಗುಲಾಮಗಿರಿಗೆ ತಳ್ಳುವ ಮತ್ತು ಕಾರ್ಪೋರೇಟ್ ಕಂಪನಿಗಳು ಆಹಾರ ಕ್ಷೇತ್ರದ ಮೇಲೆ ಏಕಸ್ವಾಮ್ಯ ಸಾಧಿಸಲು ಅನುಕೂಲ ಕಲ್ಪಿಸುವ ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡಬೇಕು . * ವಿದ್ಯುತ್ ನಿಗಮವನ್ನು ಖಾಸಗೀಕರಣಕ್ಕೊಳಪಡೆಸಿ ಗ್ರಾಹಕರ ಸುಲಿಗೆಗೆ ಅವಕಾಶಮಾಡುವ ಮತ್ತು ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ತಿದ್ದುಪಡಿ ಕಾಯ್ದೆಯನ್ನು ವಾಪಾಸ್ ಪಡೆಯಬೇಕು . • ಕಾರ್ಮಿಕರ ಕಡಲಾಣ 44 ಕಾಯ್ದೆಗಳಿಗೆ ತಿದ್ದುಪಡಿ ತಂದು 4 ಕೋಡಗಳನ್ನಾಗಿ ಮಾಡಿರುವ ಕಾಯ್ದೆಗಳನ್ನು ಕೈ ಬಿಡಬೇಕು . * ಬಡವರನ್ನು ಸುಲಿಗೆ ಮಾಡುವ ಅಗತ್ಯವಸ್ತುಗಳ ತಿದ್ದುಪಡಿಕಾಯ್ದೆ ಮತ್ತು ಕೃಷಿ ಕಾಂಟ್ಯಾಕ್ಟ್ ಕಾಯ್ದೆಗಳನ್ನು ಕೈಬಿಡಬೇಕು . ಮೇಲಿನ ಕಾಯ್ದೆಗಳೆಲ್ಲ ಪ್ರಜಾಪ್ರಭುತ್ವ ವಿರೋಧಿಯಾಗಿರುವುದರಿಂದ ಇದನ್ನು ಪ್ರತಿಭಟಿಸಬೇಕಾದದ್ದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಆದ್ದರಿಂದ ಎಲ್ಲರೂ ಬೆಂಬಲಿಸಿ ಭಾಗವಹಿಸಬೇಕಾಗಿ ವಿನಂತಿಸಿಕೊಂಡರು.

ಬೆಳಿಗ್ಗೆ 10-00 ಗಂಟೆಗೆ ಕೊಪ್ಪಳ ನಗರದ ಕ್ರೀಡಾಂಗಣದಿಂದ ಮೆರವಣಿಗೆ ಅಶೋಕ ಸರ್ಕಲ್ ಗಡಿಯಾರ ಕಂಬ , ಸಾಲಾರಾಜಂಗ್ ರಸ್ತೆ ಮೂಲಕ ಸಾಗಿ ಬಸವೇಶ್ವರ ಸರ್ಕಲ್‌ನಲ್ಲಿ ಬಹಿರಂಗ ಸಭೆ ನಡೆಸಲಾಗುವುದು . ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಜೀರ ಮೂಲಿಮನಿ, ಶರಣಪ್ಪ, ತಿಪ್ಪಯ್ಯಸ್ವಾಮಿ, ಗಾಳೆಪ್ಪ ಉಪಸ್ಥಿತರಿದ್ದರು.

Please follow and like us:
error