ಕೊಪ್ಪಳ : 2014ಕ್ಕೆ ಹೋಲಿಕೆ ಮಾಡಿದರೆ ಈಗ ಒಳ್ಳೆಯ ವಾತಾವರಣವಿದೆ. ಸುಮಲತಾ ಗೆಲ್ಲುವುದು ಖಚಿತವಾದ ನಂತರ ಮನಬಂದಂತೆ ಮಾತಾಡ್ತಿದ್ದಾರೆ ಕುಮಾರಸ್ವಾಮಿ ವರ್ತನೆ ಸರಿಯಾಗಿಲ್ಲ ಹಗುರವಾದ ಮಾತನಾಡುವ ಮೂಲಕ ವಾತಾವರಣ ನಮ್ಮ ಪರ ಇಲ್ಲ ಅಂತಾ ಅವರೇ ತೋರಿಸಿಕೊಳ್ಳುತ್ತಿದ್ದಾರೆ ಎಂದು ಕೊಪ್ಪಳದ ಖಾಸಗಿ ಎರ್ ಪೋರ್ಟ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕೇಂದ್ರ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯ, ಹಿಂದಿನ ಬಿಜೆಪಿ ಸರ್ಕಾರದ ಸಾಧನೆ ನಮಗೆ ಗೆಲುವಿಗೆ ಸಾಧನೆಯಾಗಲಿದೆ. ಡಿಕೆಶಿ – ಎಂ.ಬಿ.ಪಾಟೀಲ್ ರ ಲಿಂಗಾಯತರ ಪ್ರತ್ಯೇಕ ಧರ್ಮದ ಪರ ವಿರೋಧ ಮಾತು ಅವರಿಗೆ ಬಿಟ್ಟಿದ್ದು
ಸೈನ್ಯವನ್ನು ಯಾರೂ ರಾಜಕಾರಣಕ್ಕೆ ಉಪಯೋಗಿಸಿಕೊಳ್ಳಬಾರದು. ಯಾವುದರಲ್ಲೂ ಸತ್ಯಾಂಶವಿಲ್ಲ ಸೈನಿಕರು ಜೀವದ ಹಂಗು ತೊರೆದು ಹೋರಾಟ ಮಾಡ್ತಾ ಇದ್ದಾರೆ. ಅವರನ್ನು ಯಾರೂ ರಾಜಕಾರಣಕ್ಕೆ ಉಪಯೋಗ ಮಾಡಿಕೊಳ್ಳಬಾರದು
ಸುಮಲತಾ ಮಾಯಾಂಗನೆ ಎಂಬ ಸಂಸದ ಶಿವರಾಮೇಗೌಡ ಹೇಳಿಕೆ ವಿಚಾರ. ಸೋಲುವ ಭೀತಿಯಿಂದ ಹೀಗೆಲ್ಲ ಮಾತಾಡ್ತಿದ್ದಾರೆ ಸಂಸದ ಶಿವರಾಮೇಗೌಡ ಹಗುರವಾಗಿ ಮಾತಾಡೊಕ್ಕೆ ಹೆಸರಾಗಿದ್ದಾರೆ ಮಂಡ್ಯದಲ್ಲಿ ಸುಮಲತಾ ಗೆಲುವು ಖಚಿತವಾಗಿದೆ