ಸಿ.ಜಿ ಲಕ್ಮೀಪತಿ – ಎಚ್ ಮಾರುತಿಯವರ ಮಾತುಗಳು

ಅಭಿವೃದ್ದಿ ಮತ್ತು ದಲಿತರು- ವಿಚಾರ ಗೋಷ್ಠಿಯಲ್ಲಿ ಚಿಂತಕರಾದ ಸಿ.ಜಿ ಲಕ್ಮೀಪತಿ ಹಾಗೂ ಎಚ್ ಮಾರುತಿಯವರ ಮಾತುಗಳು

ಮೇಲ್ಜಾತಿಗಳ ಬೌದ್ದಿಕ ದಾರಿದ್ರವನ್ನು ನಾಶಗೊಳಿಸಬೆಕಿದೆ. ಇಡೀ ಸಮಾಜದ ಅಭಿವೃದ್ದಿಗೆ ಪೂರಕವಾಗುವಂತೆ ಮಪರು ಪರಿಶೀಲನೆಗೊಳ್ಳುವ ಅಗತ್ಯವಿದೆ. ದಲಿತರ ಅಭಿವೃದ್ದಿಗೆ ಪಾಶ್ವಿಮಾತ್ಯ ಮಾದರಿಯನ್ನು , ಬಂಡವಾಳ ಶಾಹಿಯ ಅಭಿವೃದ್ದಿ ಮಾದರಿ ಅನುಸರಿಸಬೇಕೋ ಚರ್ಚೆಯ ವಿಷಯವಾಗಿದೆ. ನಾವು ಬಗಗೆಯ ಅಭಿವೃದ್ದಿ ಮಾದರಿಯನ್ನು ರೂಪಿಸಿಕೊಳ್ಳುವುದು ದಲಿತರು ತಮ್ಮದೇ ಆದ ಮಾದರಿಯನ್ನು ರೂಪಿಸಕೊಳ್ಳಬೇಕು.
ಮೀಸಲಾತಿ ಸಂಪೂರ್ಣವಾಗಿ ಜಾರಿ ತರಲು ಯಾವ ಪ್ರಯತ್ನವನ್ನೂ ಮಾಡಲಾಗಿಲ್ಲ. ಇತರೆ ಮೇಲ್ಜಾತಿಗಳು ಅನುಸರಿಸಿದ ತಂತ್ರಗಾರಿಕೆಯನ್ನು ಅನುಸರಿಸಬೇಕು. ದೇಶದಲ್ಲಿಯೇ ಅತೀ ದೊಡ್ಡ ಸಮುದಾಯವಾಗಿರುವ ದಲಿತರು ತಮ್ಮ ಜಾತಿಯನ್ನು ಬಂಡವಾಳವಾಗಿಸಿಕೊಳ್ಳಬೇಕಿದೆ. ದೊಡ್ಡ ಗ್ರಾಹಕರಾಗಿರುವ ದಲಿತರು ತಮ್ಮ ಜಾತಿ್ಯನ್ನೇ ಬಂಡವಾಳವಾಗಿಸಿಕೊಳ್ಳಬೇಕಿದೆ. ದಲಿತ ಬಂಡವಾಳಶಾಹಿ, ದಲಿತ ರಾಜಕೀಯ ಆರ್ಥಿಕಕಕ ನೀತಿಗಳು ಸ್ವಯಂ ಪರಿಪೂರ್ಣವಾಗಿ ಸಂಚಯಿಸಿಕೊಳ್ಳಬೇಕಿದೆ.
ದಲಿತರ ವಿರುದ್ದ ಮಾತುಗಳು ಪುನರಾವರ್ತೆಗೊಳ್ಳುತ್ತಿವೆ. ಕೇವಲ ಸರಕಾರದ ಸವಲತ್ತುಗಳು, ಹಕ್ಕುಗಳಲ್ಲದೇ ಕೇವಲ ಸರಕಾರದ ಅಂಕಿಅಂಶಗಳನ್ನು ನಂಬಿಕೊಳ್ಳಬಾರದು. ಆದರೆ ನಮ್ಮ ಹಕ್ಕುಗಳನ್ನು ನಾವು ಪಡೆದುಕೊಳ್ಳಬೆಕು. ಪ್ರಜಾಪ್ರಭುತ್ವದ ಮೇಲಿನ ಅವಲಂಭನೆ ಇನ್ನೂ ಹೆಚ್ಚಿನ ಜವಾಬ್ದಾರಿಗಳನಬ್ಬಯ ತೆಗೆದುಕೊಳ್ಳದ ಹೊರತು ಬೇರೆ ದಾರಿಯಿಲ್ಲ. ಇದು ಬಂಡವಾಳಶಾಹಿ ಮಾರ್ಗವೇ ಆಗಿರಬವಹುದು. ಎಲ್ಲ ರೀತಿಯ ವಿನ್ಯಾಸ ರೂಪಿಸಿಕೊಂಡು ಪರ್ಯಾಯ ಮಾರ್ಗ ರೂಪಿಸಬೇಕಿದೆ. ಸರಕಾರ ಕೊಡದ ಶಿಕ್ಷಣಕ್ಕಷ್ಟೇ ಮಿತಿಗೊಳ್ಳದೇ ಗುರಿಯಿಟ್ಟು ಪ್ರಗತಿತ್ತ ಉದ್ಯೋಗದತ್ತ ಸಾಗಬೇಕಿದೆ. ಈಗಿರುವ ಸಾಂಪ್ರದಾಯಿಕ ಅಭಿವೃದ್ದಿ ಮಾದರಿಗಳನ್ನು ತೊರೆದು ಹೊಸ ಮಾರ್ಗ ರೂಪಿಸಬೇಕಿದೆ

ಮಾರುತಿ ಎಚ್ : ಆರು ಏಳು ದಶಕಗಳಿಂದ ಹಲವಾರು ಪ್ರಣಾಳಿಕೆಗಳು ಬಂದಿವೆ. ಆದರೂ ಕೂಡ ಎಸ್ ಎಸ್ಟಿ ಸಮನ್ವಯ ಸಮಿತಿ ಉಲ್ಲೇಖಿಸಿರುವ ಅಂಕಿ ಅಂಶಗಳು ಆಘಾತಕಾರಿಯಾಗಿವೆ. ಅಭಿವೃದ್ದ ಎನ್ನುವುದು ಮರಿಚಿಕಿಯಾಗಿದೆ. ದೇಶದ್ಯಾಂತ ಚಿಂತಕರಿದ್ದಾರೆ ಅವರ ಪ್ರಕಾರ ಜಾತಿಗೂ ದಲಿತರ ಅಭಿವೃದ್ದಿಗೂ ಸಂಬಂಧವಿದೆ ಎನ್ನುವ ಮಾತುಗಳು ಹೇಳುತ್ತಿದ್ದಾರೆ. ಆದರೆ ದಲಿತರು ತಾವು ಬೇರೆ ಬೇರೆ ಉದ್ಯೋಗಗಳಲ್ಲಿ ವ್ಯಾಪಾರಗಳಲ್ಲಿ ಹಾಕಿರುವ ಬಂಡವಾಳಗನ್ನು ವಾಪಸ್ ಪಡೆಯಲಾಗುತ್ತಿಲ್ಲ. ದಲಿತರಿಗೂ ಭೂಮಿಗೆ ಸಂಬಂಧವಿದೆ. ಭೂ ಒಡೆತನದ ಬಹಳ ಕಡಿಮೆ ಇದೆ. ಭೂಸುಧಾರಣೆ ಹೊಸ ಆಯಾಮಗಳು, ಅಧಿಕಾರಿಗಳು ಹಾಗೂ ಮೇಲ್ಜ್ಆತಿಯ ಜನರ ಮನಸ್ಥಿತಿಗಳಿಂದ ಸರಿಯಾಗಿ ಹಂಚಿಕೆಯಾಗಿಲ್ಲ. ಮೀಸಲಾತಿಯಿಂದ ದಲಿತರು ಎಲ್ಲ ಕಡೆ ಕೆಲಸ ಪಡೆದುಕೊಳ್ಳುತ್ತಾರೆ ಎನ್ನುವ ಮಾತುಗಳು ಕಾಲೇಜ್ ಗಳಲ್ಲಿ ಇತರೆಡೆ ಕೇಳಿಬರುತ್ತಿವೆ. ಆದರೆ ಸರಕಾರದ ಐದು ಲಕ್ಷ 30 ಸಾವಿರ ಉದ್ಯೋಗಗಳಲ್ಲಿ ದಲಿತರು ಪಡೆದುಕೊಂಡಿದ್ದು ಕೇವಲ 94 ಸಾವಿರ ಉದ್ಯೋಗಗಳು ಮಾತ್ರ. ಅಂದರೆ ಜನಸಂಖ್ಯೆಯ 1% ಸಹ ಇಲ್ಲ. ಮೀಸಲಾತಿಯ ಬಗ್ಗೆ ಆರುಂದತಿ ರಾಯ್ ಹೇಳಿರುವ ವ್ಯಂಗ್ಯದ ಮಾತೊಂದಿದೆ. ದಲಿತರಿಗೆ ಮೀಸಲಾತಿಯ ಲಾಭ ದೊರೆತಿದೆ. ಅವರಿಗೆ ಭಾರತೀಯ ರೈಲ್ವೆಯ 1 ಲಕ್ಷ 75 ಸಾವಿ ಭೋಗಿಗಳಲ್ಲಿಯ ಕಕ್ಕಸ್ಸುಗಳನ್ನು ತೊಳೆಯುವ ಕೆಲಸ ಎನ್ನುತ್ತಾರೆ.
ನವ ಉದಾರೀಕರಣದಿಂದ ಜಾತಿ ಅಳೆಯುತ್ತೆ ಎನ್ನುವ ಮಾತುಗಳು ಸವಕಲುಗಳಾವಿವೆ. ಅಧುನಿಕ ಶಿಕ್ಷಣ, ತಂತ್ರಜ್ಞಾನ, ಸವಲತ್ತುಗಳಿಂದ ಇಡೀ ದಲಿತ ಸಮುದಾಯ ವಂಚಿತವಾಗಿದೆ. ಅಭಿವೃದ್ದಿ ಎನ್ನುವುದು ಮೇಲ್ಗಡೆಯಿಂದ ಬರುವಂತಹದ್ದಲ್ಲ. ಕೆಳ ಹಂತದಿಂದ ಮೇಲಕ್ಕೆ ಸಾಗುವಂತಹದ್ದು. ಗದಗ ಜಿಲ್ಲೆಯಲ್ಲಿಯೇ 89 ಸ್ಲಂಗಳಿವೆ. 54 ಸಾವಿರ ದಲಿತರಿದ್ದಾರೆ. ಅಂದರೆ ಅವರ ಸಾಮಾಜಿಕ ಸ್ಥಿತಿ ಗತಿ ಹೇಗಿದೆ ಎನ್ನುವುದು ತಿಳಿಯಬಹುದು. ದಲಿತರ ಅಭಿವೃದ್ದಿ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಮಾಧ್ಯಮಗಳಲ್ಲಿರುವ ಆಂಕರ್ ಗಳು ಬ್ರಾಹ್ಮಣರು ಇಲ್ಲವೇ ಮೇಲ್ಜಾತಿಯವರು . ಜಾತಿ ವ್ಯವಸ್ಥೆ ಹೋಗಬೇಕೋ ರಾಜಕಾರಣ ಮಾಡಬೇಕು ಎನ್ನುವ ಪ್ರಶ್ನೆಗಳಿವೆ. 398 ಮೆಡಿಕಲ್ ಕಾಲೇಜುಗಳಲ್ಲಿ 215 ಖಾಸಗಿಯವರ ಕೈಯಲ್ಲಿವೆ. ಅಂದರೆ ಅಲ್ಲಿ ದಲಿತರಿಗೆ ಅವಕಾಶಗಳಿವೆಯೆ ? ಇದೊಂದು ಸಕಾಲ. ದೀರ್ಘವಾಗಿ ಯೋಚಿಸಿ ಪರ್ಯಾಯಗಳನ್ನು ಕಂಡುಕೊಳ್ಳಬೇಕಿದೆ.

Please follow and like us:
error