ಸಿನಿಮಾ ಸಾಹಿತಿ ಕೆ.ಕಲ್ಯಾಣ ಕೌಟುಂಬಿಕ ಕಲಹ ಪ್ರಕರಣದ ಗಂಗಾ ಕುಷ್ಟಗಿಯಲ್ಲಿ ಆತ್ಮಹತ್ಯೆ

ಕುಷ್ಟಗಿ : ಸಿನಿಮಾ ಸಾಹಿತಿ ಕೆ.ಕಲ್ಯಾಣ ಕೌಟುಂಬಿಕ ಕಲಹ ಪ್ರಕರಣದಲ್ಲಿ ಭಾಗಿಯಾಗಿದ್ದ ಗಂಗಾ ಅಲಿಯಾಸ್ ಜ್ಯೋತಿ ಕುಲಕರ್ಣಿ ಕುಷ್ಟಗಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೆ.ಕಲ್ಯಾಣ ಪ್ರಕರಣದ ನಂತರ ಪೊಲಿಸರಿಗೂ ಸಿಗದೇ ಕಾಣೆಯಾಗಿದ್ದ ಗಂಗಾ ಇಂದು ಇಂದು ಕೊಪ್ಪಳ ಜಿಲ್ಲೆ ಕುಷ್ಟಗಿ ನ್ಯಾಯಾಲಯಕ್ಕೆ ಹಾಜರಾಗಿದ್ದಳು. ಹಿಂದಿನ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಟ್ ಜಾರಿ ಯಾಗಿತ್ತು.ಕಳೆದ ಕೆಲ ದಿನಗಳಿಂದ ಸತತವಾಗಿ ಕೋರ್ಟ್‌ಗೆ ಗೈರಾಗಿದ್ದ ಜ್ಯೋತಿ ಅಲಿಯಾಸ್ ಗಂಗಾ ವಿರುದ್ದ ನ್ಯಾಯಾಲಯ ಅರೆಸ್ಟ್ ವಾರಂಟ್ ಹೊರಡಿಸಿದ್ದರಿಂದ ಇಂದು ಹಾಜರಾಗಿದ್ದ ಗಂಗಾ ಇಂದು ಕೋರ್ಟ್‌ಗೆ ಹಾಜರಾಗಲು ಹೋಗುವಾಗ ವಿಷ ಸೇವಿಸಿ ಕೋರ್ಟ್ ಪ್ರವೇಶಿಸಿದ್ದಳು.ಕೋರ್ಟ್ ಸಭಾಂಗಣ ಪ್ರವೇಶಿಸಿದ ಕೆಲ ನಿಮಿಷಗಳಲ್ಲೇ ಕೆಳಗೆ ಬಿದ್ದ ಜ್ಯೋತಿ ಅಲಿಯಾಸ್ ಗಂಗಾರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.ಬಾಗಲಕೋಟೆ ಜಿಲ್ಲೆ ಮೂಲದ ಜ್ಯೋತಿ ಅಲಿಯಾಸ್ ಗಂಗಾ ಕುಷ್ಟಗಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ದೂರು ದಾಖಲಾಗಿತ್ತು

Please follow and like us:
error