ಸಿದ್ದರಾಮಯ್ಯ ಮೊದಲು ತಮ್ಮ ಪಕ್ಷದ ಭಿನ್ನಾಭಿಪ್ರಾಯ ಸರಿಮಾಡಿಕೊಳ್ಳಲಿ: ಬಿ.ಸಿ.ಪಾಟೀಲ್

ಸಿದ್ದರಾಮಯ್ಯ ಮೊದಲು ತಮ್ಮದನ್ನು ತಾವು ತೊಳೆದುಕೊಳ್ಳಲಿ

ಕನ್ನಡನೆಟ್ : ,‌ ಮಾಜಿ ಸಿಎಂ ಸಿದ್ದರಾಮಯ್ಯ ಮೊದಲು ತಮ್ಮದನ್ನು ತಾವು ತೊಳೆದುಕೊಳ್ಳಲಿ. ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ, ಮತ್ತೊಬ್ಬರ ತಾಟಿನ ನೊಣ ತೆಗೆಯೋದು ಬೇಡ ಎಂದು ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ‌ ಭಾನುವಾರ ಮಾತನಾಡಿದರು.
ಸಿದ್ದರಾಮಯ್ಯ ಅವರಿಗೆ ಬಿಜೆಪಿ ಪಕ್ಷದ‌ ಬಗ್ಗೆ‌‌ ಅದ್ಯಾಕೆ‌ ಅಷ್ಟು ಆಸಕ್ತಿಯೋ ಗೊತ್ತಿಲ್ಲ. ಅವರು ಮೊದಲು ತಮ್ಮ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಸರಿ ಮಾಡಿಕೊಳ್ಳಲಿ. ಡಿಕೆ ಶಿವಕುಮಾರ ಮತ್ತು ನಿಮ್ಮ ನಡುವಿನ ಕಚ್ಚಾಟ ಮುಗಿಸಿಕೊಳ್ಳಲಿ. ಡಿಕೆಶಿ ಮತ್ತು ಸಿದ್ದರಾಮಯ್ಯ ಒಬ್ಬರನ್ನೊಬ್ಬರು ಮುಗಿಸಲು ಪ್ರತಿ ದಿನ ಸಂಚು ಮಾಡುತ್ತಿದ್ದಾರೆ. ಜನರಿಗೆ ನಾವು ಒಂದೇ ಅಂತಾರೆ ಅಷ್ಟೇ ಎಂದರು. ನಮ್ಮನ್ನು ಅನರ್ಹ ಮಾಡಲು ಮುಂದಾಗಿದ್ದ ನಿಮಗೆ ನಮ್ಮ ಬಗ್ಗೆ ಕಾಳಜಿ ಏಕೆ ಎಂದು ಪ್ರಶ್ನಿಸಿದ ಬಿ.ಸಿ.ಪಾಟೀಲ ಅವರು, ಬಿಜೆಪಿ ಬಗ್ಗೆ ಸಿದ್ದರಾಮಯ್ಯನವರಿಗೆ ಅಷ್ಟು ಚಿಂತೆ ಏಕೆ?‌ ಅಷ್ಟು ಆಸಕ್ತಿ ‌ಇದ್ದು, ಸಿದ್ದರಾಮಯ್ಯ ಬಿಜೆಪಿಗೆ ಬಂದ್ರೆ ಸ್ವಾಗತ ಮಾಡ್ತಿವಿ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತಿಗೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಇನ್ನೂ ಎರಡೂವರೆ ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.

Please follow and like us:
error