ಸಿದ್ದರಾಮಯ್ಯನವರಿಗೆ ನನ್ನ ಮೇಲೆ ‌ಪ್ರೀತಿ ಹೆಚ್ಚಾಗಿದೆ- ಶ್ರೀರಾಮುಲು

ಮುನಿರಾಬಾದ್:  ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ‌ಪ್ರೀತಿ ಹೆಚ್ಚಾಗಿದೆ.. ಒಮ್ಮೆ ರಾಜೀನಾಮೆ ನೀಡಿ ಅಂತಾರೆ..ಒಮ್ಮೆ ನನ್ನ ವಿರುದ್ಧ ಸ್ಪರ್ಧೆ ಮಾಡಲ್ಲ ಅಂತಾರೆ..ಮತ್ತೊಮ್ಮೆ ನಾನು ಉಪಮುಖ್ಯಮಂತ್ರಿ ಆಗಬೇಕಿತ್ತು ಅಂತಾರೆ.. ತಮ್ಮ ಪ್ರಶ್ನೆಗೆ ತಾವೇ ಉತ್ತರ ಕೊಟ್ಟು ಕೊಳ್ತಾರೆ..  ಮೊನ್ನೆ ಅವರೊಂದು ಹೇಳಿಕೆ ಕೊಟ್ಟಿದ್ರು ಅದಕ್ಕೆ ಉತ್ತರ ನೀಡಿದೆ..ಅವರ ಬಗ್ಗೆ ಮತ್ತಿನ್ನೇನು ಹೇಳೋದಿದೆ.. ಈ  ಪ್ರೀತಿ ಸದಾ ನನ್ನ ಮೇಲೆ ಹೀಗೆ ಇರಲಿ  ಎಂದು ಪ್ರತಿಕ್ರಿಯೆ ನೀಡಿದ   ಶ್ರೀರಾಮುಲು.

ಭಾಷೆಮೇಲಿನ ಹಿಡಿತದ ವಿಚಾರ.. ರಾಜ್ಯದಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಕನ್ನಡವಿದೆ.. ಪ್ರತಿ 20 ಕಿ.ಮೀ ಭಾಷೆ ಬದಲಾಗುತ್ತದೆ..

ಬಂಡಾಯ ಅಭ್ಯರ್ಥಿ ಕವಿರಾಜ ಅರಸ್, ಶರತ್ ಬಚ್ಚೆಗೌಡ ಉಚ್ಚಾಟನೆ ಮಾಡಲಾಗಿದೆ.. ಮಾದುಸ್ವಾಮಿ ಶ್ರೀಗಳ ಹತ್ತಿರ ಹೋಗಿ ಮಾತನಾಡಿದ್ದಾರೆ..  ಮಾದುಸ್ವಾಮಿ ಪ್ರಕರಣ ಮುಗಿದಿದೆ.. ರಾಜ್ಯದ ಎಲ್ಲ ಕಡೆ ಶ್ರೀರಾಮುಲು ಬರಬೇಕೆಂದು ಒತ್ತಾಯವಿದೆ.. ಸದ್ಯ ಹೊಸಪೇಟೆ, ಹುಣಸೂರು ಉಸ್ತುವಾರಿ ಇದೆ.. ಮುಂದೆ ರಾಜ್ಯದ ವಿವಿಧ ಭಾಗದಲ್ಲಿ ಪ್ರಚಾರ ಮಾಡ್ತೇನೆ.. ಇಂಟಲಿಜೆನ್ಸ್ ವರದಿ ಪ್ರಕಾರ ಹದಿನೈದು ಕ್ಷೇತ್ರದಲ್ಲಿ ಗೆಲ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Please follow and like us:
error