ಸಿದ್ದರಾಮಯ್ಯನವರದ್ದು ಗರತಿ ರಾಜಕಾರಣಾನಾ? – ಸಿ‌.ಟಿ.ರವಿ

ಕೊಪ್ಪಳ : ಜೆಡಿಎಸ್‌ನಲ್ಲಿದ್ದ ಹಲವರನ್ನ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿಸಿಕೊಂಡ ಸಿದ್ದರಾಮಯ್ಯನವರದ್ದು ಗರತಿ ರಾಜಕಾರಣಾನಾ? ಕೊಪ್ಪಳದಲ್ಲಿ ಸಚಿವ ಸಿ.ಟಿ.ರವಿ ಸಿದ್ದರಾಮಯ್ಯ ವಿರುದ್ಧ ಗರಂ

ಸಿದ್ದರಾಮಯ್ಯ ಅವರ ನಾಲಾಯಕ್ ಹೇಳಿಕೆಗೆ ಸಿ.ಟಿ.ರವಿ ಕೆಂಡಾಮಂಡಲ ಅಮಿತ್ ಷಾ, ಮೋದಿ ನಾಲಾಯಕ್ ಎಂದಿದ್ದ ಸಿದ್ದರಾಮಯ್ಯ. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನ ಸೆಳೆದು ರಾಜ್ಯದಲ್ಲಿ ಸರಕಾರ ರಚಿಸಿದ್ದು ಅಮಿತ್ ಷಾ ಅವರ ನಾಲಾಯಕ್ ರಾಜಕಾರಣದಿಂದ ಎಂದಿದ್ದ ಸಿದ್ದರಾಮಯ್ಯ. ಕಾಂಗ್ರೆಸ್ ಸರಕಾರ ಇದ್ದಾಗ ಜೆಡಿಎಸ್‌ನವರನ್ನ ಸೆಳೆದಿದ್ದ ಸಿದ್ದರಾಮಯ್ಯ ಅವರದ್ದು ಎಂಥ ಆದರ್ಶ? ಯಾವ ನೈತಿಕತೆ?ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಸಿದ್ದರಾಮಯ್ಯನವರ ಮಾತು ಎಂದು ಹರಿಹಾಯ್ದ ಸಚಿವ ಇಂಥ ಕೆಲಸ ಮಾಡಿರೊ ಸಿದ್ದರಾಮಯ್ಯ ಅವರದ್ದು ಗರತಿ ರಾಜಕಾರಣಾನಾ? ಗರತಿ ರಾಹಕಾರಣ ಆಗಿದ್ದರೆ ಅಂಥ ಕೆಲಸ ಮಾಡ್ತಿದ್ರಾ?ಕಾಂಗ್ರೆಸ್ ಈ ದೇಶಕ್ಕೆ ಅಂಟಿದ ಒಂದು ಮುಳ್ಳು. ಯಾವ ಮುಳ್ಳನ್ನ ಹೇಗೆ ತೆಗಿಬೇಕು ಅಂತ ಬಿಜೆಪಿಗೆ ಚನ್ಬಾಗಿ ಗೊತ್ತಿದೆ

Please follow and like us:
error