ಸಿಎಂ BSY ಬದಲಾವಣೆ ಪಕ್ಕಾ – ಸಿದ್ದರಾಮಯ್ಯ

ಹುಬ್ಬಳ್ಳಿ : ಮೀಸಲಾತಿ ಕೇಳೋದು ತಪ್ಪಲ್ಲ. ನಾನು ಸಿಎಂ ಆಗಿದ್ದಾಗ ನಾಲ್ಕು ಸಮುದಾಯವನ್ನ ಸಿಫಾರಸ್ಸು ಮಾಡಿದ್ದೆ‌. ಈಶ್ವರಪ್ಪ ಸಧ್ಯ ಕೇಂದ್ರ ಸರ್ಕಾರವನ್ನ ಕೇಳಲಿ, ಈಶ್ವರಪ್ಪ ಕುರುಬ ಸಮೂದಾಯವನ್ನ  ಒಡೆಯುವ ಕೆಲಸ ಮಾಡುತ್ತಿದ್ದಾರೆ, ಇದು ಆರ್ ಎಸ್ ಎಸ್ ಹಾಗೂ ಈಶ್ವರಪ್ಪ ಕುತಂತ್ರ

ರಾಜ್ಯ ಮತ್ತು ಕೇಂದ್ರದಲ್ಲಿ  ಬಿಜೆಪಿಯ ಸರ್ಕಾರವಿದೆ ಈಶ್ವರಪ್ಪ ಹೋರಾಟ ಮಾಡೋದು ಬಿಟ್ಟು ಮೀಸಲಾತಿ ಕೊಡಿಸಲಿ ಎಂದು ಸಚಿವ ಈಶ್ವರಪ್ಪ ವಿರುದ್ಧ  ಸಿದ್ಧರಾಮಯ್ಯ ಹರಿಹಾಯ್ದರು. ಹುಬ್ಬಳ್ಳಿಯ ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ

ಸಿಎಂ ಬದಲಾವಣೆ ಆಗುತ್ತೆ,ಆದ್ರೆ ಅದು ಯಾವಾಗ ಅಗುತ್ತೆ ಗೊತ್ತಿಲ್ಲ
ತೆಗೆಯುವುದಿಲ್ಲ ಎನ್ನುವ ಬಿಜೆಪಿ ನಾಯಕರ ಮಾತಿಗೆ ಪ್ರತಿಕ್ರಿಯಿಸಿದ ಅವರು ಮತ್ತೆ ಅವರು ತೆಗೆದುಹಾಕ್ತಿವಿ ಅಂತ ಹೇಳೋಕೆ ಆಗುತ್ತಾ..? ಎಂದು ಪ್ರಶ್ನೆ ಮಾಡಿದರು. ಬಿಎಸ್ ವೈ ಸಿಎಂ ಸ್ಥಾನದಿಂದ ಕೇಳಗಿಳಿಯೋದು ಪಕ್ಕಾ ಬಿಜೆಪಿ ಅವಧಿ ಪೂರ್ಣಗೊಳಿಸುತ್ತೆ‌ ಆದ್ರೆ ಸಿಎಂ ಸ್ಥಾನ ಬದಲಾವಣೆಯಾಗುತ್ತೆ, ಮಧ್ಯಂತರ ಚುನಾವಣೆ ಆಗೋಲ್ಲ ಎಂದು ಹೇಳಿದರು.

Please follow and like us:
error