ಸಿಎಂ ಯಡಿಯೂರಪ್ಪ ಆಡಿಯೋ ಹಗರಣ ಮುಗಿದ ಅದ್ಯಾಯ- ಕೋಟಾ ಶ್ರೀನಿವಾಸ

ಬಳ್ಳಾರಿ-  ಸಿಎಂ ಯಡಿಯೂರಪ್ಪ ಅವರ ಆಡಿಯೋ ವಿಚಾರ ಈಗ ನ್ಯಾಯಾಲಯ ತಲುಪಿದ್ದು, ನಾನು ಹೇಳುವಂಥದ್ದು ಏನೂ ಇಲ್ಲ,ಅದು ಮುಗಿದ ಅಧ್ಯಾಯ-  ನಾವೆಲ್ಲ ಒಗ್ಗಟ್ಟಾಗಿ ಇದ್ದೇವೆ, ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಳ್ಳಾರಿಯಲ್ಲಿ ಹೇಳಿದರು.
ದೇವೇಗೌಡರು ಹಿರಿಯ ನಾಯಕರು ಸಿಎಂ ಜೊತೆ ಔಪಚಾರಿಕವಾಗಿ ಮಾತಾಡಿರಬಹುದು- ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಅವರು ಹಿರಿಯರು ನಮ್ಮ ಸರ್ಕಾರಕ್ಕೆ ಸಲಹೆ ನೀಡಬಹುದು-ರಾಜ್ಯದ 90 ಮುಜರಾಯಿ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ, ಒಂದು ಮದುವೆಗೆ ಕನಿಷ್ಠ 45 ಸಾವಿರ ರೂಪಾಯಿ ವೆಚ್ಚದಲ್ಲಿ ಮದುವೆ ಆಯೋಜಿಸುತ್ತೇವೆ- ಒಂದು ಸಾವಿರಕ್ಕೂ ಹೆಚ್ಚು ಮದುವೆಗಳು ನಮ್ಮ ಇಲಾಖೆ ಮೂಲಕ ಜರುಗಲಿವೆ- ಜನರ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿ ಕೆಲಸ ಮಾಡುವುದು ನಮ್ಮ ಇಲಾಖೆ ಕೆಲಸವಾಗಿದೆ. ಎಂದರು.

Please follow and like us:
error