ಸಿಂದನೂರ ಖಬರಸ್ತಾನ ಗೋಡೆ ನೆಲಸಮ : ಅಸೀಪ್ ಅಲಿ ಭೇಟಿ,ಪರಿಶೀಲನೆ

Kannadanet NEWS ಸಿಂಧನೂರಿನ ಖಬರಸ್ತಾನ ಕಾಂಪೌಂಡ್ ಗೋಡೆಯನ್ನು ಮುಸ್ಲಿಂ ಸಮಾಜದವರಿಗೆ ಸೂಚನೆ ನೀಡದೇ ನೆಲಸಮ ಮಾಡಿರುವ ಘಟನೆಯ ಕುರಿತು ದಿ: 03-02-2021 ರಂದು ರಾಜ್ಯ ವಕ್ಫ್ ಮಂಡಳಿ ಸದಸ್ಯ ಹಾಗೂ ಕಾನೂನು ಸಮಿತಿಯ ಅಧ್ಯಕ್ಷರಾದ ಆಸೀಫ್ ಅಲಿ ಕೊಪ್ಪಳ ರವರು ಸ್ಥಳ ಪರಿಶೀಲನೆ ಮಾಡಿ, ಸಮಾಜದ ಪ್ರಮುಖರೊಂದಿಗೆ ಚರ್ಚೆ ನಡೆಸಿದರು.

ಘಟನೆಯ ಕುರಿತು ಪೊಲೀಸ್ ಇಲಾಖೆಯವರ ಗಮನಕ್ಕೆ ತಂದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಲಾಯಿತು. ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ವಕ್ಫ ಅಧಿಕಾರಿಯಾದ ಮೊಹ್ಮದ್ ಉಮೇರ್, ಕೊಪ್ಪಳ ಜಿಲ್ಲಾ ವಕ್ಫ ಅಧಿಕಾರಿಯಾದ ಮಕ್ಬೂಲ್ ಪಾಷಾ ಹಾಗೂ
ಊರಿನ ಮುಖಂಡರಾದ ಬಾಬರ್ ಮುಲ್ಲಾ, ಹುಸೇನಬಾಷಾ ಮುಲ್ಲಾ, ಖಾಸಿಮ ಅಲಿ , ಅಮ್ಜದ್ ಹುಸೇನ್ ಮತ್ತು ಇತರರು ಹಾಜರಿದ್ದರು.

Please follow and like us:
error