ಸಾಹಿತಿಗಳ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ಕೊಪ್ಪಳ : , ತಿರುಳನ್ನಡ ಸಾಹಿತಿಗಳ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರ ಮೊದಲ ೫ ವರ್ಷಗಳ ಅವಧಿ ಪೂರ್ಣಗೊಂಡಿದ್ದು , ಹೊಸ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಚುನಾವಣೆ ಘೋಷಣೆಯಾಗಿತ್ತು . ಎರಡನೇ ಅವಧಿಯ ಐದು ವರ್ಷಗಳಿಗೆ ಚುನಾವಣೆ ನಡೆದಿದ್ದು ಆಡಳಿತ ಮಂಡಳಿಯ ಹದಿನೈದು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಚುನಾವಣೆ ಅಧಿಕಾರಿ ಪ್ರಕಟಿಸಿದ್ದಾರೆ . ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳ ವಿವರ ಇಂತಿದೆ . ಅಲ್ಲಮಪ್ರಭು ಬೆಟ್ಟದೂರು ಕೊಪ್ಪಳ , ಈಶ್ವರ ಹತ್ತಿ ಕೊಪ್ಪಳ , ಡಾ . ಕೆ.ಬಿ. ಬ್ಯಾಳಿ ಕುಕನೂರು , ಜಿ.ಎಸ್.ಗೋನಾಳ ಕೊಪ್ಪಳ , ಬಸವರಾಜ ಆಕಳವಾಡಿ ಕೊಪ್ಪಳ , ವಿರಪ್ಪ ನಿಂಗೋಜಿ ಕರಮುಡಿ , ವೈಚಿ ಜೂಡಿ ಭಾಗ್ಯನಗರ , ಡಾ . ಶರಣಬಸಪ್ಪ ಕೋಲ್ದಾರ್ ಗಂಗಾವತಿ , ಹೆಚ್.ಎಸ್.ಪಾಟೀಲ್ ಕೊಪ್ಪಳ , ಡಾ.ಸಿದ್ಧಲಿಂಗಪ್ಪ ಕೊಟ್ಟೆಕಲ್ ಕೊಪ್ಪಳ , ಹೆಚ್.ವೈ ಈಟಿಯವರ್ ಕುಷ್ಟಗಿ , ನಟರಾಜ ಸೋನಾರ್ ಕುಷ್ಟಗಿ , ಡಾ.ಜಾ ದೇವೆಂದ್ರಪ್ಪ ಗಂಗಾವತಿ . ಅನುಸೂಯ ಜಹಗೀರದಾರ್ ಕೊಪ್ಪಳ ಮತ್ತು ವಿಜಯಲಕ್ಷ್ಮಿ ಕೊಟಗಿ ಕೊಪ್ಪಳ ಸೇರಿದಂತೆ ಹದಿನೈದು ಅಭ್ಯರ್ಥಿಗಳ ಪೈಕಿ ಪ.ಜಾ , ಪ.ಪಂ ದ ಅಭ್ಯರ್ಥಿಗಳು ಹಿಂ.ವರ್ಗ ‘ ಎ ‘ ಮತ್ತು ಹಿಂ.ವರ್ಗ ‘ ಏ ‘ ಅಭ್ಯರ್ಥಿಗಳು ಹಾಗೂ ಇಬ್ಬರು ಮಹಿಳಾ ಅಭ್ಯರ್ಥಿಗಳು ಕಾಯ್ದಿಟ್ಟ ( ಮೀಸಲು ) ಕ್ಷೇತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಬಸಪ್ಪ ಗಾಳಿ ಚುನಾವಣಾ ಫಲಿತಾಂಶ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ

Please follow and like us:
error