ಸಾವರ್ಕರ್ ಬ್ರಿಟಿಷರಿಗೆ ಶರಣಾಗತರಾಗಿದ್ದರು- ವಿ.ಎಸ್.ಉಗ್ರಪ್ಪ

ಬಳ್ಳಾರಿ :  ಹಂಪಿ ಉತ್ಸವ ಮಾಡದೇ, ಮಾತೇತ್ತಿದ್ದರೇ, 

ಸ್ವಾಭಿಮಾನ ಎನ್ನುವ ಶ್ರೀ ರಾಮುಲು, ಹಂಪಿ ಉತ್ಸವಕ್ಕಾಗಿ ಕಳೆದ ಬಾರಿ ಭಿಕ್ಷೆ ಎತ್ತುತ್ತಿನ ಎಂದಿದ್ದ ಸೋಮಶೇಖರ್ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ವಿರುದ್ಧ ವಿಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.  ಬಳ್ಳಾರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ವಿಶ್ವ ವಿಖ್ಯಾತ ಹಂಪಿ ಉತ್ಸವ ಮಾಡಬೇಕು, ನಾನು ಸಂಸದನಾಗಿದ್ದಾಗ ರಾಜ್ಯ ಸರಕಾರದ ಒತ್ತಡ ಮೇಲೆ ಒತ್ತಡ ತಂದು ಮಾಡಿಸಿದ್ದೆ.  ದಸರಾ ಹಬ್ಬಕ್ಕೆ ಪ್ರೇರಣೆ ಹಂಪಿ, ಇದು ಪ್ರತಿ ವರ್ಷ ಜನರ ಉತ್ಸವ ಆಗಬೇಕು.  ಯಾವುದೇ ಕಾರಣಕ್ಕೂ ಹಂಪಿ ಉತ್ಸವ ನಿಲ್ಲಬಾರದು, ಈ ಭಾಗದ ಸೋಗಡು,‌ ಸಂಸ್ಕೃತಿ, ಕಲೆ, ಪ್ರತಿಭೆಯನ್ನು ಗುರುತಿಸಲು ಪ್ರತಿಬಾರಿ ೧೦ ಕೋಟಿ ಮೀಸಲು ಇಡಬೇಕೆಂದು ನಾವು ಒತ್ತಾಯ ಮಾಡಿದ್ವಿ.  ಪ್ರತಿ ವರ್ಷವೂ ನವೆಂಬರ್ ನಲ್ಲಿ ನಡೆಯುತ್ತದೆ, ಆದರೆ ಇನ್ನೂ ಎರಡು ವಾರಗಳಿವೆ. ಯಾವುದೇ  ಸಿದ್ಧತೆ ಇಲ್ಲ,  ಇದು ನೋವಿನ ವಿಚಾರ, ಖಂಡನೀಯ ಎಂದು ಹೇಳುತ್ತಾ,  

ಮಾತೇತ್ತಿದರೇ, ಸ್ವಾಭಿಮಾನಿ ಎನ್ನುವ ಜನ ನಾಯಕ ಸ್ವಾಭಿಮಾನಿ, ಢ್ಯಾಶ್, ಢ್ಯಾಶ್ ಎಂದು ಶ್ರೀ ರಾಮುಲು ಮೇಲೆ ವಾಗ್ದಾಳಿ ನಡೆಸಿದ ಉಗ್ರಪ್ಪ ಈ ಭಾಗದ ಜನರ ಸ್ವಾಭಿಮಾನದ ಪ್ರತೀಕ ಹಂಪಿ ಉತ್ಸವ ಯಾಕೆ ಮಾಡಲಿಲ್ಲ, ನಾನು ಈ ವಿಚಾರದಲ್ಲಿ ರಾಜಕೀಯ ಮಾಡೋಲ್ಲ. ಇದು ನಮ್ಮ ಪಕ್ಷದ ಒತ್ತಾಯವೂ ಕೂಡ ಆಗಿದೆ, ನಾನು ಜಿಲ್ಲಾಡಳಿತದ ಜತೆ ಮಾತನಾಡಿದ್ದೇನೆ.ತಕ್ಷಣ ೧೦ ಕೋಟಿ ಹಣ ಬಿಡುಗಡೆ ಮಾಡಿ, ಹಂಪಿ ಉತ್ಸವ ಮಾಡಲು ಒತ್ತಾಯಿಸಿದರು.   ಹಂಪಿ ಉತ್ಸವ ಮಾಡಲು ಕಳೆದ ಬಾರಿ ಜೋಳಿಗೆ ಹಾಕಿ ಭಿಕ್ಷೆ ಬೇಡುತ್ತೇವೆ ಎಂದಿದ್ದ ಶಾಸಕರು ಈಗ ಎಲ್ಲಿದ್ದಾರೆ- ಈ ಬಾರಿ ಯಾಕೆ ಬೀದಿಗೆ ಹೋಗಿಲ್ಲ ಎಂದು ಶಾಸಕ ಸೋಮಶೇಖರ್ ರೆಡ್ಡಿಗೆ ಪ್ರಶ್ನೆ ಮಾಡಿದ ವಿಎಸ್. ಉಗ್ರಪ್ಪ, ಒಂದು ವೇಳೆ ರಾಜ್ಯ ಸರಕಾರ ಹಂಪಿ ಉತ್ಸವ ಮಾಡದೇ ಇದ್ದಲ್ಲಿ ಈ ಭಾಗದ ಜನಪ್ರತಿನಿಧಿಗಳು, ಕಲಾವಿದರ ನಿಯೋಗ ಕೊಂಡೋಯ್ಯುತ್ತೇವೆ.  ನವೆಂಬರ್ ತಿಂಗಳಲ್ಲಿ ಆಗಬೇಕೆಂಬುದಿದೆ, ಈ ಚುನಾವಣಾ ಆಯೋಗ ಒಂದು ಅಡ್ಡಿ ಇದೆ.  ಚುನಾವಣೆ ಆಯೋಗ ಕೇಂದ್ರ ಸರಕಾರದ ಕೈಗೊಂಬೆಯಾಗಿದೆ, ತ್ರಿಪುರ ದಲ್ಲಿ ಶಿಕ್ಷೆಯಾದ ವ್ಯಕ್ತಿಯ ಶಿಕ್ಷೆ ಪ್ರಮಾಣ ಕಡಿಮೆ ಮಾಡಿದ ನಂತರ ಅವರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ಮಾಡಿಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಹೊಸಪೇಟೆ ಬೈ ಎಲೆಕ್ಷನ್ ಟಿಕೇಟ್  ಗಾಗಿ, ಒಂದು ಡಜನ್ ಗೂ ಹೆಚ್ಚು ಜನರು ಸ್ಪರ್ಧೆಗೆ ಆಕಾಂಕ್ಷಿಗಳಿದ್ದಾರೆ.  ಹೊಸಪೇಟೆಯಂತಹ ಪ್ರದೇಶದಲ್ಲಿ ಗೂಡೂಸಾಬ್, ಗುಜ್ಜಲ ಜಯಲಕ್ಷ್ಮಿ ಜನ ಸಾಮಾನ್ಯರ ನಡುವೆ ಇದ್ದು ಗೆದ್ದು ಬಂದಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡೋರು ಇದ್ದಾರೆ. ೨೨ ರಂದು ಸುಪ್ರೀಂಕೋರ್ಟ್ ನ ತೀರ್ಪು ಅನರ್ಹರ ಸಂಬಂಧ ಬರುತ್ತದೆ. ಆ ತೀರ್ಪಿನ ಮೇಲೆ ಮತ್ತೆ ಚುನಾವಣೆ ನಿರ್ಣಯ ಆಗುತ್ತದೆ.ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ.  ಲಿಂಗಾಯುತರನ್ನು ಕಚೇರಿಯಿಂದ ಹೊರ ಹಾಕಿದ್ದಾರೆ. ಮೂರ್ನಾಲ್ಕು ಗುಂಪುಗಳಿವೆ.ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅಂದಂಗೆ ಆಯ್ತು ಸದ್ಯದ ಸ್ಥಿತಿ ಇದೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಸರಕಾರ ನಿರ್ಜಿವವಾಗಿದೆ. ಭಾರತ ಹಸಿವಿನ ಸ್ಥಾನದಲ್ಲಿ 103 ನೇ ಸ್ಥಾನದಲ್ಲಿ ಇದೆ,  ಇದು ನಾಚಿಕೆಯ ಸಂಗತಿಯಾಗಿದೆ, ಕೇಂದ್ರ , ರಾಜ್ಯ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.  
ಸಾವರ್ಕರ್ ಗೆ ಭಾರತ ರತ್ನ ಪ್ರಶಸ್ತಿ ವಿಚಾರವಾಗಿ ಮಾತನಾಡಿದ ಉಗ್ರಪ್ಪ, ವೀರ ಸಾವರ್ಕರ್ ಹೋರಾಟ ಮಾಡಿದ್ದಾರೆ, ಅದು ಅವರ ಸಿದ್ದಾಂತದ ನಿಟ್ಟಿನಲ್ಲಿ.ಅನೇಕ ಜನ ಕ್ರಾಂತಿಕಾರಿಗಳು ಹೋರಾಟ ಮಾಡಿದ್ದಾರೆ. ಸಾವರ್ಕರ್ ಅವರು, ಬ್ರಿಟಿಷರಿಗೆ ಶರಣಾಗತಾರಾಗಿದ್ದು‌ ಸತ್ಯ.  ಹಿಂದೂ ಮಹಾ ಸಭಾ ಕಟ್ಟಿದ್ದ ಸಾವರ್ಕರ್.  ಗಾಂಧಿ ಹತ್ಯೆ ಕೇಸ್ ನಲ್ಲಿ ಎ-07 ಆಗಿದ್ದಾರೆ.ಗೂಡ್ಸೆ ಹಿಂದೂ ಮಹಾಸಭಾದ ಸದಸ್ಯರಾಗಿದ್ದರು. 

ನಾನು ಬಿಜೆಪಿಯ ನಾಯಕರಿಗೆ ಕೇಳ್ತೆನೆ,  ಕೇಂದ್ರದಲ್ಲಿ ೧೧ ವರ್ಷ ಅವಧಿ ಆಡಳಿತ ನಡೆಸಿದ್ದಿರಿ,  ಕಳೆದ ೫ ವರ್ಷದಲ್ಲಿ ಸಾವರ್ಕರ್ ನಿಮಗೆ ನೆನಪಾಗಲಿಲ್ವಾ, ಎಂದು ಪ್ರಶ್ನೆ ಮಾಡಿದ ಉಗ್ರಪ್ಪ,  ಮಹಾರಾಷ್ಟ್ರ ಚುನಾವಣೆ ಸಂಬಂಧ ಮಾತ್ರ ಸಾವರ್ಕರ್ ನೆನಪಾದ್ರಾ-?,  ಸಿದ್ದರಾಮಯ್ಯ ಈ ನೆಲದ ಮೇಲೆ ಇರಬಾರದು ಅಂತ ಶ್ರೀ ರಾಮುಲು ಹೇಳ್ತಾರೆ, ಮಿಸ್ಟರ್ ಸ್ವಾಭಿಮಾನಿ ಎಂದು ಎಂದು ವಾಗ್ದಾಳಿ ಮಾಡಿದ ಉಗ್ರಪ್ಪ.

Related posts