ಕೊಪ್ಪಳ : ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ
ಪ್ರಾಣವನ್ನೆ ಮುಡಿಪಾಗಿಟ್ಟವರು, ಸಾವರ್ಕರ್ಗೆ ಭಾರತರತ್ನ ಕೊಟ್ರೆ ಸ್ವಾತಂತ್ರ ಯೋಧರಿಗೆ ಗೌರವ ಕೊಟ್ಟಂತೆ ಆಗುತ್ತೆ.. ಸಾವರ್ಕರನ್ನು ಹೀಯಾಳಿಸಿದ್ರೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಿಗೆ ಅವಮಾನ ಮಾಡಿದಂತೆ ಆಗುತ್ತೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೇಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಕೊಪ್ಪಳದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಸಾವರ್ಕರ್ ಗೆ ಭಾರತ್ನಕೊಡುವುದರಲ್ಲಿ ತಪ್ಪಿಲ್ಲ. ಅದರಂತೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡಲು ನಾವು ಸಿದ್ದರಿದ್ದೇವೆ. ಇವತ್ತಲ್ಲ ನಾಳೆ ಸಿದ್ದಗಂಗಶ್ರೀಗಳಿಗೆ ಭಾರತ ರತ್ನ ಬಂದೇ ಬರುತ್ತೆ. ನಾವು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಕೂಡ ಸಲ್ಲಿಸುತ್ತೇವೆ ಎಂದ್ರು. ಇನ್ನೂ ಅನರ್ಹ ಶಾಸಕರು ಇನ್ನೂ ಪಕ್ಷ ಸೇರ್ಪಡೆ ಆಗಿಲ್ಲ. ಅವರು ಪಕ್ಷ ಸೇರ್ಪಡೆ ಬಳಿಕ ಟಿಕೆಟ್ ನೀಡೋದು ಬಿಡೋದು ತೀರ್ಮಾನವಾಗುತ್ತೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ಕಳೇದ ಚುನಾವಣೆಗಿಂತ ಅಧಿಕ ಸ್ಥಾನ ಬಿಜೆಪಿ ಪಡೆಯಲಿದೆ. ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡೋ ಭವಿಷ್ಯ ನನಗೆ ಗೊತ್ತಿಲ್ಲ, ಮುಂದೆ ಏನು ಆಗುತ್ತೆ ಕಾದು ನೋಡ್ತೀನಿ ಅಂದ್ರು.