ಸಾವರ್ಕರ್ ಗೆ ಉಗಿದರೆ ಅವರ ಮುಖಕ್ಕೆ ಅವರೇ ಉಗಿದುಕೊಂಡಂತೆ – ಸಿ.ಟಿ.ರವಿ

ಧಾರವಾಡ : ಸಿದ್ದರಾಮಯ್ಯ ನವರು ಆತ್ಮಾಹುತಿ ಪುಸ್ತಕವನ್ನು 
ಓದಲಿ, ಅಭಿನವ ಭಾರತ ಸಂಘಟನೆಯನ್ನು ಯಾಕೆ ಕಟ್ಟಿದರು ಎನ್ನುವದನ್ನು ನೋಡಲಿ ವೀರ ಸಾವರ್ಕರ್ ಬಗ್ಗೆ ಸತ್ಯಸಂಗತಿ ಗೊತ್ತಗಬೇಕಿದೆ, ನಂತರ ಭಾರತ ಮಾತೆಗೆ ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಪಾರ್ಟಿ ಮಾಡುವದಿಲ್ಲ ಇದು ಸಾವರ್ಕರ್ ಗೆ ಮಾಡುವ ಅಪಮಾನ ಅಲ್ಲ. ಸಾವರ್ಕರ್ ಗೆ ಉಗಿದರೆ ಅದು ಅವರ ಮುಖಕ್ಕೆ ಅವರೆ ಅವರೆ ಉಗಿದುಕೊಂಡಂತೆ ಆಗತ್ತೆ ಇವರು ಸಾವರ್ಕರ್ ಬಗ್ಗೆ ಮಾತನಾಡಿ ತಮಗೆ ತಾವೆ ಅಪಮಾನ ಮಾಡಿಕೊಳ್ಳುತ್ತಿದ್ದಾರೆ  ಎಂದು ಪ್ರವಾಸೋಧ್ಯಮ ಹಾಗೂ ಸಕ್ಕರೆ ಸಚಿ ವ ಸಿ ಟಿ ರವಿ ಹೇಳಿದರು.  ಧಾರವಾಡದಲ್ಲಿ ಮಾತನಾಡಿದ ಸಚಿವರು ನಾನು ಬೆಂಗಳೂರಿಗೆ ಹೋದಾಗ ಪುಸ್ತಕ ಕಳಿಸುತ್ತೆನೆ ಅಂದು ಹೇಳಿದ್ದೆ, ಈಗ ಬೆಂಗಳೂರಿಗೆ ಹೋಗಿ ಅವರ ಜೊತೆ ಮಾತನಾಡಿ ಆತ್ಮಾಹುತಿ ಪುಸ್ತಕ ನೀಡುತ್ತೆನೆ. ಗೋಡ್ಸೆ ಗಾಂದಿಜಿಯವರಿಗೆ ಗುಂಡು ಹಾಕಿದ ಗಾಂದಿಜಿಯವರನ್ನ ಜನ ಮಾನಸದಿಂದ ದೂರ ಮಾಡಿದವರು ಯಾರು ಎಂಬುದು ಚರ್ಚೆ ಆಗಬೇಕಿದೆ. ಯಾವ ಕಾಂಗ್ರೆಸ್ಸಿಗರು ಗಾಂದಿಜಿಯವರ ಹೆಸರು ಇಟ್ಕೊಂಡಿದಾರೆ, ಯಾರು ಗಾಂದಿಜಿಯವರ ತತ್ವಗಳಡಿಯಲ್ಲಿ ಬದುಕುತ್ತಿದ್ದಾರೆ ಎನ್ನುವದು ಚರ್ಚೆಯಾಗಬೇಕು ಗಾಂದಿಜಿ ಯವರ ಪಾರ್ಟಿ ನಮ್ಮದು, ಗಾಂದಿಜಿಯ ರಾಜಕಿಯ ವಾರಸುದಾರರು ಎಂದು ಹೇಳಿಕೊಳ್ತಾರೆ, ಗಾಂದಿಜಿಯ ತತ್ವದ ವಾರಸುದಾರರಾಗಿದ್ದಾರಾ ?

ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿದೆ. ಮಾನವಿಯ ನೆಲೆಯಲ್ಲಿ ನಾವು ಜನರಿಗೆ ಸ್ಪಂದಿಸಬೇಕಿದೆ ಪ್ರವಾಹಕ್ಕೆ ಒಳಗಾದವರ ನೆರವಿಗೆ ನಿಂತುಕೊಳ್ಳುತ್ತೆವೆ, ಸಮಾಜ ಸ್ಪಂದನೆ ನೀಡಿದೆ, ಸರ್ಕಾರ ಕೂಡಾ ಸ್ಪಂದನೆ ನೀಡಿದೆ ತಾತ್ಕಾಲಿಕ ಪರಿಹಾರವನ್ನು ಕೂಡಾ ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿದ್ದೆವೆ, ಹತ್ತು ಸಾವಿರ ತಾತ್ಕಾಲಿಕ ಪರಿಹಾರ ನೀಡಲಾಗುತ್ತಿದೆ. ಮಾನವಿಯ ನೆಲೆ ಇರುವ ಸರ್ಕಾರ ನಮ್ಮದು ಹಿಗಾಗಿ ಇದನ್ನೆಲ್ಲ ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದರು.

Please follow and like us:
error