ಸಾವಯುವ ರೈತನಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ. 

Bellary ಸಾವಯುವ ರೈತಷ್ಟಿ -ಅನಾವೃಷ್ಟಿ ಎಂಬ ಪೆಡಂಭೂತಗಳನ್ನ ಅನ್ನದಾತ ಸಮರ್ಥವಾಗಿ ನಿಭಾಯಿಸೋದನ್ನ‌ ಕಲೀಬೇಕು ಎನ್ನುತ್ತ, ಅದನ್ನ ಸಾಧಿಸಿ ತೋರಿದ ಮಾದರಿ ಪ್ರಗತಿಪರ ರೈತ ವಿಶ್ವೇಶ್ವರ ಸಜ್ಜನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಹುಲಿಕೆರೆ ಗ್ರಾಮದ ಇವರು ಸಾವಯವ ಕೃಷಿಯಲ್ಲಿ ಕೃಷಿ ವಿಜ್ಞಾನಿಗಳೂ ಅಚ್ಚರಿಗೊಳ್ಳುವಂತೆ ಬೇಲ ಹಣ್ಣು ಬೆಳೆದಿದ್ದಾರೆ. ರೈತ ಕೇವಲ ಬೆಳೆಗಾರನಾಗುತ್ತಿದ್ದಾನೆ. ಆದ್ರೆ ತಾನು ಬೆಳೆದ ಬೆಳೆಯನ್ನ 
ಮಾರ್ಕೆಟಿಂಗ್ ಮಾಡುವ ಕಲೆ ಆತನಿಗೆ ಗೊತಿಲ್ಲ. ರೈತ ಹಿಂದುಳಿಯಲು ಇದೂ ಒಂದು ಕಾರಣ. ಸದ್ಯದ ಯುವಜನ ಕೃಷಿಯಿಂದ ವಿಮುಖರಾಗ್ತಿದ್ದಾರೆ‌. ಒಂದಕ್ಕಿದ್ದರೆ ಇನ್ನೊಂದಕ್ಕಾಗದಷ್ಟು ಸಂಬಳ ಪಡೆಯಲು ಇನ್ನೊಬ್ಬರ ಕೈಯಲ್ಲಿ ಕೆಲಸ ಮಾಡ್ತಾರೆ. ಇನ್ನು ಶ್ರೀಮಂತರ ಮಕ್ಕಳಂತೂ ಕೃಷಿ ಎಂದರೆ ಮೂಗು ಮುರಿಯುತ್ತಾರೆ. ಇದು ಬದಲಾಗಿ ನಾವೆಲ್ಲ ಮಣ್ಣು ನಂಬಿ ದುಡಿಯುವಂತಾಗಬೇಕು. ಅದು ನಮ್ಮ‌ ಬದುಕು ಮತ್ತು ವ್ಯಕ್ತಿತ್ವವನ್ನ ಸುಸ್ಥಿರ ಮಾಡುತ್ತವೆ‌‌ ಅನ್ನೋದು ಸಜ್ಜನ್ ಅವರ ವಿಚಾರ.ಇವರ ಕೃಷಿ ಚಿಂತನೆಗಳು ನಿಬ್ಬೆರಗಾಗುವಂತೆ ಮಾಡಿವೆ. ಸಜ್ಜನರು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದರು. ಹೀಗಾಗಿ ಅಂತ ದೊಡ್ಡ ಪ್ರಶಸ್ತಿಗೆ ಭಾಜನರಾದರು. ಸಜ್ಜನ್ ಅವರಂತ ಅನ್ನದಾತ ಸಂತತಿ ಜಗದಾದ್ಯಂತ ಹಬ್ಬಲಿ ಎಂಬುದು ನಮ್ಮ ಆಶಯ. 

Please follow and like us:
error