ಉತ್ತರ ಪ್ರದೇಶದ ಹತ್ರಸ್ ನಲ್ಲಿ ನಡೆದ 19 ವರ್ಷದ ಯುವತಿಯ ಹಿಂಸಾತ್ಮಕ ಸಾಮೂಹಿಕ ಅತ್ಯಾಚಾರ ಖಂಡಿಸಿ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಎಸ್ಎಫ್ಐ ನಿಂದ ಪ್ರತಿಭಟನೆ ಮನವಿ
ಗಂಗಾವತಿ:- ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಆರೋಪಗಳಿಗೆ ಸೂಕ್ತ ಶಿಕ್ಷೆಗೆ ಆಗ್ರಹಿಸಿ ಉಪಾತಹಶಿಲ್ದಾರ ಮಂಜುನಾಥ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ Sfi ರಾಜ್ಯ ಅಧ್ಯಕ್ಷರ ಅಮರೇಶ ಕಡಗದ ದೇಶದಾದ್ಯಂತ ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಹಾಗೂ ಕ್ರೌರ್ಯದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದನ್ನು ನಿಯಂತ್ರ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಂಬಂಧಿಸಿದ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ.

ದೆಹಲಿ ನಿರ್ಭಯಾ ಪ್ರಕರಣ, ಆಶೀಫಾಳ ಕಥುವಾ ಪ್ರಕರಣ, ಉತ್ತರ ಪ್ರದೇಶದ ಉನ್ನಾವೋ ಮತ್ತು ಹೈದ್ರಾಬಾದಿನ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮಾಸುವ ಮುನ್ನೆವೇ ಇಡೀ ನಾಗರಿಕ ಸಮಾಜವೆ ತಲೆ ತಗ್ಗಿಸುವಂತ ಅಮಾನವೀಯ ಮತ್ತು ಕ್ರೂರ ವಾದ ಅತ್ಯಾಚಾರ ಮಾಡಿ ಕೊಲೆ ಪ್ರಕರಣವು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ ದಲಿತ ಸಮುದಾಯಕ್ಕೆ ಸೇರಿದ ಮನೀಶಾ ಎಂಬ 19 ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿ, ಚಿತ್ರ ಹಿಂಸೆ ನೀಡಿ ಸಾಕ್ಷಿ ನಾಶಕ್ಕಾಗಿ ನಾಲಿಗೆಯನ್ನು ಕತ್ತರಿಸಿ ಕೊಲೆಗೆ ಯತ್ನವನ್ನು ಮಾಡಿದ್ದಾರೆ.
ವಾರದ ಬಳಿಕ ನಿನ್ನೆ ಮನೀಶಾ ದೆಹಲಿಯ ಆಸ್ಪತ್ರೆ ಯಲ್ಲಿ ಸಾವನ್ನು ಅಪ್ಪಿದ್ದಾರೆ. ಇದು ಅತ್ಯಂತ ದುರಂತ ಮತ್ತು ಖಂಡನೀಯ. ಕೂಡಲೇ ಪ್ರಕರಣವನ್ನು ಕುರಿತಂತೆ ಸಮಗ್ರವಾದ ತನಿಖೆ ಯನ್ನು ನಡೆಸಿ ಆರೋಪಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಿಬೇಕು. ಹಾಗೂ ಜಸ್ಟಿಸ್ ವರ್ಮಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಬೇಕು. ರಾಜ್ಯದಲ್ಲಿ ವಿ.ಎಸ್ ಉಗ್ರಪ್ಪ ಸಮಿತಿ ಶಿಪಾರಸ್ಸುಗಳನ್ನ ಜಾರಿಗೊಳಿಸಬೇಕು, ಶಾಲಾ ಕಾಲೇಜುಗಳಲ್ಲಿ ಮತ್ತು ದುಡಿಯುವ ಸ್ಥಳದಲ್ಲಿ ಲೈಂಗೀಕ ವಿರೋಧಿ ಸಮಿತಿ ರಚಿಸಬೇಕು,& ಇಡೀ ದೇಶ ವ್ಯಾಪಿ ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ರಕ್ಷಣೆಯನ್ನು ಒದಗಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ SFI ತಾಲೂಕ ಅಧ್ಯಕ್ಷ ಗ್ಯಾನೇಶ ಕಡಗದ ಕಾರ್ಯದರ್ಶಿ ಶಿವಕುಮಾರ ಪ್ರಮುಖರಾದ ಬಾಳಪ್ಪ ಹುಲಿಹೈದರ, ಮಂಜುನಾಥ ಡಗ್ಗಿ,ಹನುಮೇಶ ಆಗೋಲಿ, ಸೋಮುನಾಥ, ಶರೀಪ್,ಬಸಯ್ಯ ಹಿರೇಮಠ, ಮೋಹಿನ್ ಪಾಷ್ ಟಿಪ್ಪುಸುಲ್ತಾನ, ಅನೇಕರು ಉಪಸ್ಥಿತರಿದ್ದರು.