ಸರಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗದ ಚರ್ಚೆ ಇಂದು ನಡೆಯಲಿದೆ- ಶಿವರಾಮೆಗೌಡ

ಕೊಪ್ಪಳ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಕುರಿತ ನಮ್ಮ ಪೈಲ್ ನ್ನು ಪರಿಶೀಲಿಸುತ್ತಿದ್ದು. ಯಾವ ಕಾರಣಕ್ಕೆ ಪ್ರಕ್ರಿಯೆ ನಿಂತಿತು , ಯಾವ ಕಾರಣಕ್ಕೆ ತಡೆಹಿಡಿಯಲಾಗಿತ್ತು ಎನ್ನುವುದರ ಕುರಿತು ಚರ್ಚೆ ಮಾಡುತ್ತಿದ್ಧಾರೆ ಎಂದು ಮಾಜಿ ಸಂಸದ ಶಿವರಾಮೆಗೌಡ ಹೇಳಿದರು. ಪಾದಯಾತ್ರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದು ಬೆಳಿಗ್ಗೆ ಫೋನ್ ಮೂಲಕ ಮಾಹಿತಿ ನೀಡಿರುವ ಜಯಪ್ರಕಾಶ ಹೆಗಡೆ ಇಂದು ಸಂಜೆಯೊಳಗೆ ಸರಕಾರ ಪುನಃ ಪರಿಗಣನೆ ಮಾಡಬೇಕೋ ಅಥವಾ ಆಯೋಗ ಪರಿಗಣಿಸಬೇಕೋ ಎನ್ನುವ ಕುರಿತು ಇಂದು ಚರ್ಚೆ ನಡೆಸಲಿದೆ ಎಂದು ಹೇಳಿದರು.

Please follow and like us:
error