ಸರಕಾರಿ ಸೇವೆಯಲ್ಲಿರುವ ದಲಿತ ನೌಕರರು ಸಮಾಜದ ಋಣ ತೀರಿಸಲು ಮುಂದಾಗಬೇಕು-

ವಿಜಯಪುರ ಸೆ. ೧- ಸರಕಾರಿ ಸೇವೆಯಲ್ಲಿರುವ ದಲಿತ ನೌಕರರು ತಮ್ಮ  ಮೇಲಿರುವ ಸಮಾಜದ ಋಣವನ್ನು ತೀರಿಸಲು ಮುಂದಾಗಬೇಕು. ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ ಮರಳಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರೊ. ರಾಜು ಆಲಗೂರ ಅವರು ಕರೆ ನೀಡಿದರು.

ಇಲ್ಲಿನ ಸಾರಿಪುತ್ರ ಬುದ್ಧವಿಹಾರದಲ್ಲಿ ಬುದ್ಧವಿಹಾರ ನಿರ್ಮಾಣ ಸಮಿತಿ ಮತ್ತು ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪದೋನ್ನತಿ ಹೊಂದಿದ ಮತ್ತು ನಿವೃತ್ತ  ದಲಿತ ನೌಕರರಿಗೆ ಸನ್ಮಾನ ಮತ್ತು ವಿದೇಶಗಳಿಗೆ ಅಧ್ಯಯನ 
ಪ್ರವಾಸ ಕೈಕೊಂಡ ಗಣ್ಯರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಾ. ಬಾಬಾಸಾಹೇಬ ಅಂಬೇಡ್ಕರರ ಅವಿರತ ಹೋರಾಟದ ಫಲವಾಗಿ ಸಿಕ್ಕ ಮೀಸಲಾತಿಯ ಆಧಾರದ ಮೇಲೆ ಉತ್ತಮ ಗುಣಮಟ್ಟದ  ಜೀವನವನ್ನು ಪಡೆದುಕೊಂಡಿರುವ ದಲಿತ ನೌಕರರು ತಮ್ಮ  ಹಿಂದಿರುವ ಬಂಧುಗಳನ್ನು ಗಮನಿಸಬೇಕು ಮತ್ತು ಸಮಾಜದ ಅಭಿವೃದ್ಧಿಗೆ ಶ್ರಮಿಸುವುದು ತಮ್ಮ ಕರ್ತವ್ಯ ಎಂದು 

ತಿಳಿಯಬೇಕು ಎಂದು ಹೇಳಿದರು.

ಸಂವಿಧಾನದ ಮೂಲಕ ಬಾಬಾಸಾಹೇಬ ಡಾ. ಅಂಬೇಡ್ಕರ್ ನೀಡಿರುವ 

ಮೀಸಲಾತಿಯು ಇಡೀ ಸಮಾಜದ ಪಾಲು ಎಂಬುದನ್ನು ದಲಿತ ನೌಕರರು 

ಅರಿಯಬೇಕು. ಡಾ. ಅಂಬೇಡ್ಕರ್ ಅವರು ಕಂಡ ಸಮೃದ್ಧ ಸಮಾಜದ 

ಕನಸನ್ನು ನನಸು ಮಾಡಬೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜದ ಹಿರಿಯ ಮುಖಂಡ 

ಚಂದ್ರಶೇಖರ ಕೊಡಬಾಗಿ ಅವರು ಮಾತನಾಡಿ, `ಸರಕಾರಿ 

ಉದ್ಯೊÃಗದಲ್ಲಿರುವ ದಲಿತರು ಡಾ. ಅಂಬೇಡ್ಕರರ ಹೋರಾಟದ 

ದಾರಿಯನ್ನು ಎಂದಿಗೂ ಮರೆಯಬಾರದು. ಮೀಸಲಾತಿಯ ನೇರ 

ಫಲಾನುಭವಿಗಳಾಗಿರುವ ದಲಿತ ನೌಕರರು ಸಮಾಜವನ್ನು 

ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಬೇಕು. ಸರಕಾರಿ ಸೇವೆಯಿಂದ 

ನಿವೃತ್ತಿಯಾದ ನೌಕರರು ತಮ್ಮ ವಿಶ್ರಾಂತ ಜೀವನನ್ನು 

ಸಮಾಜದೊಂದಿಗೆ ಕಳೆಯಬೇಕು’ ಎಂದರು.

ಸಮಾಜದಲ್ಲಿ ಅನೇಕ ಪ್ರತಿಭಾವಂತ ಮಕ್ಕಳಿದ್ದಾರೆ. 

ಅನೇಕರಿಗೆ ಉನ್ನತ ವ್ಯಾಸಂಗ ಮಾಡುವ ಅವಕಾಶಗಳು ಇಲ್ಲ. 

ಆರ್ಥಿಕ ತೊಂದರೆಯಿಂದಾಗಿ ತಮ್ಮ ಶಿಕ್ಷಣವನ್ನು 

ಮೊಟಕುಗೊಳಿಸುತ್ತಿದ್ದಾರೆ. ಅಂಥ ಮಕ್ಕಳಿಗೆ ಶೈಕ್ಷಣಿಕವಾಗಿ 

ಸಹಾಯ ಮಾಡುವ ಅಗತ್ಯವಿದ್ದು, ನೌಕರ ಬಂಧುಗಳು ತಮ್ಮ 

ಮಕ್ಕಳಂತೆಯೇ ಇತರ ಮಕ್ಕಳಿಗೂ ಉತ್ತಮ ಶಿಕ್ಷಣ 

ದೊರೆಯುವಂತೆ ನೋಡಿಕೊಳ್ಳಲು ಮುಂದಾಗಬೇಕು ಎಂದು 

ಹೇಳಿದರು.

ಸನ್ಮಾನಿತರ ಪರವಾಗಿ ಮಾತನಾಡಿದ ನಿವೃತ್ತ ವಲಯ 

ಅರಣ್ಯಾಧಿಕಾರಿ ಮಹೇಶ್ ಕ್ಯಾತನ್, ತಮ್ಮ ಅನುಭವಗಳನ್ನು 

ಹೇಳಿಕೊಂಡರಲ್ಲದೆ ತಮ್ಮ ಮುಂದಿನ ಜೀವನದ ಪ್ರತಿ 

ಕ್ಷಣಗಳನ್ನೂ ಸಮಾಜದ ಅಭಿವೃದ್ಧಿಗಾಗಿ ಮುಡುಪಾಗಿಡುವುದಾಗಿ 

ಹೇಳಿದರು. ಎಲ್ಲ ನಿವೃತ್ತ ನೌಕರರು ಕೂಡ ಸಮಾಜಕ್ಕಾಗಿ 

ಶ್ರಮಿಸುವರು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರ ಉಪವಿಭಾಗಾಧಿಕಾರಿ 

ಸೋಮಲಿಂಗ ಗೆಣ್ಣೂರ ಮಾತನಾಡಿ, ದಲಿತ ನೌಕರರು ತಮ್ಮ 

ಅಧಿಕಾರ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದರ 

ಜೊತೆಗೆ ಸಮಾಜಮುಖಿಯೂ ಆಗಿರಬೇಕು ಎಂದು ಹೇಳಿದರು.

ನಿವೃತ್ತ ಎಸ್.ಪಿ. ಉದಯ ಬೇವಿನಗಿಡದ, ನಿವೃತ್ತ 

ಕಾರ್ಯನಿವಾರ್ಹಕ ಇಂಜಿನಿಯರ ಮನೋಹರ ಇನಾಮದಾರ, ನಿವೃತ್ತ 

ಡಿ.ಡಿ.ಪಿ.ಐ. ತಮ್ಮಣ್ಣ ಮೇಲಿನಕೇರಿ, ನಿವೃತ್ತ ವಲಯ ಅರಣ್ಯಾಧಿಕಾರಿ 

ಮಹೇಶ್ ಕ್ಯಾತನ್, ಹೆಸ್ಕಾಂನ ನಿವೃತ್ತ ಹೆಡ್ ಲೈನ್‌ಮನ್ ವಿಠ್ಠಲ ಚಲವಾದಿ, 

ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಕೈಕೊಂಡಿದ್ದ ಡಾ. ರಾಜಕುಮಾರ 

ಜೊಳ್ಳಿ, ಉಪತಹಶೀಲದಾರ ಆಗಿ ಪದೋನ್ನತಿ ಹೊಂದಿದ ಪ್ರಕಾಶ 

ಕಟ್ಟಿಮನಿ, ಯೋಗಶಿಕ್ಷಕ ಮಡಿವಾಳಪ್ಪ ದೊಡಮನಿ, ನಾಗರಾಜ 

ಲಂಬು, ಸಂತೋಷ ಸುತಗುಂಡಿ, ಪ್ರತಿಭಾವಂತ ವಿದ್ಯಾರ್ಥಿಗಳಾದ 

ಕಾವೇರಿ ಶಹಾಪುರ, ಲೋಹಿತ ಚಲವಾದಿ ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಹಿರಿಯರಾದ ಪೀರಪ್ಪ ನಡುವಿನಮನಿ, ಮಾಜಿ ಜಿಲ್ಲಾ 

ಪಂಚಾಯತ ಸದಸ್ಯ ಸುಭಾಸ ತಳಕೇರಿ, ನಿವೃತ್ತ ಎಸ್.ಪಿ. ಸುಭಾಸ 

ಗುಡಿಮನಿ, ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯ 

ಗೌರವಾಧ್ಯಕ್ಷ ಬಸವಂತ ಗುಣದಾಳ, ತಾಲೂಕಾ ಅಧ್ಯಕ್ಷರಾದ 

ಸುರೇಶ ಮ್ಯಾಗೇರಿ, ಆರ್.ಎಚ್. ಬನಸೋಡೆ, ಪ್ರಭು ಢವಳಗಿ, 

ಕೆ.ಎಂ. ಇಬ್ರಾಹಿಂಪುರ, ಎ.ಪಿ.ಎಂ.ಸಿ ನಿರ್ದೇಶಕ ವೈ.ಎಚ್. ವಿಜಯಕರ, 

ಪ್ರಭು ಢವಳಗಿ, ಮುಖಂಡರಾದ ಸುರೇಶ ಮಣ್ಣೂರ, ಪ್ರಶಾಂತ 

ಕಾಳೆ ವೇದಿಕೆ ಮೇಲಿದ್ದು ಮಾತನಾಡಿದರು.

ಬೌದ್ಧ ಅನುಯಾಯಿಗಳಾದ ಅಡಿವೆಪ್ಪ ಸಾಲಗಲ್ಲ, ಬಸವರಾಜ ಬ್ಯಾಳಿ, 

ಶಿವಪ್ಪ ರತ್ನಾಕರ, ದಶವಂತ ಗುನ್ನಾಪುರ, ಸಾಬು ಚಲವಾದಿ, ಸುನೀಲ 

ಉಕ್ಕಲಿ, ವೆಂಕಟೇಶ ವಗ್ಯಾನವರ, ರಮೇಶ ಹಳ್ಳಿ, ಕೆ.ಎಂ. ಶಿವಶರಣ, 

ಎಂ.ಬಿ. ಹಳ್ಳದಮನಿ, ಭೀಮಶಿ ಹಿಪ್ಪರಗಿ, ರಾಮಚಂದ್ರ ಬರಡ್ಡಿ, 

ಹೊನ್ನಪ್ಪ ನಡುವಿನಮನಿ, ಶಿವು ಮ್ಯಾಗೇರಿ, ವಿಲಾಸ ವ್ಯಾಸ, ಸಂಘರ್ಷ 

ಹೊಸಮನಿ, ದೇವೇಂದ್ರ ಬಡಿಗೇರ, ಯಮನಪ್ಪ ಸಿದರೆಡ್ಡಿ, 

ರಾಜಶೇಖರ ಕುದರಿ, ಸುಜಯ ಹಳ್ಳದಕೇರಿ, ಉಪಾಸಕಿಯರಾದ  ರೇಣುಕಾ ಶಹಾಪುರ, ಭಾರತಿ ಹೊಸಮನಿ, ಸಿದ್ದಮ್ಮ ಚಲವಾದಿ,  ಸುಲೋಚನಾ ಚಲವಾದಿ, ಶಾರದಾ ಹೊಸಮನಿ, ಭಾಗ್ಯಶ್ರಿÃ ವಗ್ಯಾನವರ, ಸವಿತಾ ದೊಡಮನಿ, ಲಕ್ಷಿö್ಮ ಯಂಭತ್ನಾಳ,  ರಮಾದೇವಿ ಕ್ಯಾತನ್, ಮಹಾನಂದಾ ಖರ್ಗೆ, ಮುಕ್ತಾಬಾಯಿ ಟಕ್ಕೆ  ಸೇರಿದಂತೆ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ನೂರಾರು ಬೌದ್ಧ  ಅನುಯಾಯಿಗಳು ಉಪಸ್ಥಿತರಿದ್ದರು. ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಸಂತೋಷ  ಶಹಾಪುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ  ಅನಿಲ ಹೊಸಮನಿ ವಂದಿಸಿದರು. *

Please follow and like us:
error

Related posts