ಸರಕಾರದ ಆದೇಶ ಧಿಕ್ಕರಿಸಿ ಪರೀಕ್ಷೆ ನಡೆಸಿದ ಗಂಗಾವತಿ ಶಾಲೆ : ಪೋಷಕರ ಆಕ್ರೋಶ

ಗಂಗಾವತಿ : ರಾಜ್ಯ,ಕೇಂದ್ರ ಸರಕಾರದ ಆದೇಶವನ್ನು ಗಾಳಿಗೆ ತೂರಿ ಗಂಗಾವತಿ ಯ ಖಾಸಗಿ ಶಾಲೆಯೊಂದು ಪರೀಕ್ಷೆ ನಡೆಸಿದೆ.  ರಾಜ್ಯ, ಕೇಂದ್ರ ಸರಕಾರದ ಆದೇಶಕ್ಕೆ  ಕಿಮ್ಮತ್ತು ನೀಡದೇ  8 ಹಾಗೂ 9 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸಿದೆ. ಕೊಪ್ಪಳದ ಗಂಗಾವತಿಯ ಸೆಂಟ್ ಪಾಲ್ ಸಿಬಿಎಸ್ ಸಿ ಶಾಲೆಯಲ್ಲಿ ನಿಯಮಮೀರಿ ಪರೀಕ್ಷೆ ನಡೆಸಲಾಗಿದೆ. ಕರೋನಾ ಕಾರಣಕ್ಕೆ ಶಾಲೆ ಆರಂಭಿಸಬಾರದು ಎಂದು ಅಧಿಕೃತವಾಗಿ ಸರ್ಕಾರ ಆದೇಶವಿದ್ದರೂ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ನಡೆಸಲಾಗಿದೆ.

ಸರ್ಕಾರದ ಮುಂದಿನ‌ ಆದೇಶದವರೆಗೂ ಶಾಲೆಯನ್ನು ಆರಂಭಿಸಬಾರದು ಅಂತಾ ಸೂಚನೆ ಇದ್ರೂ ಪರೀಕ್ಷೆ ನಡೆಸಿದ ಖಾಸಗಿ ಶಾಲೆ ನಡೆಸಿರುವ ಆಡಳಿತ ಮಂಡಳಿಯ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

Please follow and like us:
error