ಸಮಾನತೆಯ ವಿರೋಧಿಗಳು ಗೌರಿ ಹತ್ಯೆ ಮಾಡಿದ್ದಾರೆ

ಗೌರಿ ಲಂಕೇಶ್ ಗ್ಯಾಂಗ್ ಸ್ಟರ್ ಆಗಿರ್ಲಿಲ್

ಮನುಷ್ಯತ್ವದ ವಿರುದ್ದವಾಗಿ ಇರೋರು,ಬಹುತ್ವ ವಿರುದ್ಧ ಇರೋರು, ಜನಸಾಮಾನ್ಯರ ಶಾಂತಿ ಮತ್ತು ಸಮಾನತೆಯ ವಿರುದ್ದವಾಗಿ ಇರೋರು #ಗೌರಿ #ಲಂಕೇಶ್ ಹತ್ಯೆಯನ್ನ ಮಾಡಿದ್ದಾರೆ.

ವಿಚಾರವನ್ನ ವಿಚಾರದಿಂದ ಎದುರಿಸುವುದಕ್ಕೆ ಆಗದವರು, ಸತ್ಯವನ್ನು ಸತ್ಯದಿಂದ ಎದುರಿಸುವುದಕ್ಕೆ ಆಗದವರು ಹತ್ಯೆ ಮಾಡಿರುತ್ತಾರೆ.
ಯಾಕೆಂದರೆ ಅವ್ರು ಅಸತ್ಯವನ್ನ ಅಪ್ಪಿಕೊಂಡಿದ್ದಾರೆ.

ಒಬ್ಬ ಪತ್ರಕರ್ತೆ ಆಕೆ ಗ್ಯಾಂಗ್ ಸ್ಟರ್ ಆಗಿರ್ಲಿಲ್ಲ ,ಯಾರನ್ನೂ ಕೊಲೆ ಮಾಡಿಸಿರಲಿಲ್ಲ ಅಥವಾ ಕೊಲೆಮಾಡಿಸುವುದಕ್ಕೆ ಸಂಚನ್ನು ರೂಪಿಸಿರಲಿಲ್ಲ.
ತನಗೆ ಅನಿಸಿದ ವಿಚಾರಗಳನ್ನ ಲೇಖನಿಯ ಮುಖಾಂತರ ಮಾತಿನ ಮೂಲಕ ಸಮಾಜದ ಮುಂದೆ ಇಡ್ತಿದ್ದಂತಹ ಒಬ್ಬ ವಿಚಾರವಂತೆಯನ್ನ, ಆ ದಿಟ್ಟತವನ್ನ ಕೊಲೆಯ ಮೂಲಕ ಅಡಗಿಸಬೇಕು ಅಂತ ಆಲೋಚನೆ ಮಾಡಿರುವುದು #ನಾಗರಿಕ #ಸಮಾಜಕ್ಕೆ ಮಾಡಿರುವ #ಅವಮಾನ ಆಗಿದೆ.ನಮ್ಮೆಲ್ಲರಿಗು ಅವರು ಕೊಟ್ಟಿರುವ ಸಂದೇಶ ‘ನಾವು ಮಾತನಾಡಬಾರದು, ನಾವು ಆಲೋಚನೆ ಮಾಡಬಾರದು, ನಮಗೆ ಬಾಯಿ ಇರಬಾರದು, ಇದ್ದರು ಅದು ನಮ್ಮದಾಗಿರಬಾರದು, ಗೌರಿ ಲಂಕೇಶ್ ಹತ್ಯೆಯ ಬಗ್ಗೆ ನಾವು ಹೇಳಬಹುದಾಗಿರುವ ಅತ್ಯುತ್ತಮ ಮಾತು ಯಾವುದೆಂದರೆ “ಇಷ್ಟೇಲ್ಲಾ ಯಾತಕ್ಕೆಂದರೆ ಅವರ #ಪಲ್ಲಕ್ಕಿಗೆ #ಬೊವಿಯಾಗಲಾರದಕ್ಕೆ , ಅವರ #ಹಾಡಿಗೆ #ಪಲ್ಲವಿಯಾಗಲಾರದಕ್ಕೆ “.

ಯಾರು ಈ ಭಾರತಿಯ ಸಮಾಜದ ಬಹುಮುಖಿಯತೆಯನ್ನ ಇದರ ಜನಪರತೆಯನ್ನ, ವೈಶಿಷ್ಟ್ಯತೆಯನ್ನ ಹತ್ತಿಕ್ಕಬೇಕು ಅಂತ ಬಯಸ್ತಾ ಇದ್ದಾರೆ.ಅವರು ಈ ರೀತಿಯಾದ ಕರಾಳ ಕೃತ್ಯವನ್ನ ಮಾಡ್ತಾ ಇದ್ದಾರೆ.

ನಾವಿಲ್ಲಿ ಸೇರಿರೋದು ಬಣ್ಣನೆಯ ಮಾತುಗಳಿಂದ ಗೌರಿಯನ್ನ ಹೊಗಳೋಕೆ ಅಲ್ಲ. ಆಕೆ ಏನಕ್ಕೋಸ್ಕರವಾಗಿ ಬದುಕಿದ್ದಳು? ಯಾವ ಆಶಯಗಳನ್ನ ಪ್ರತಿಪಾದನೆ ಮಾಡಿದ್ದಳು? ಅದನ್ನ ಮುಂದುವರೆಸುವುದಕ್ಕಾಗಿ ವಾಗ್ದಾನವನ್ನ ನಾವು ನೀಡುವುದಕ್ಕಾಗಿ,ನಮ್ಮ ಐಕ್ಯತೆಯನ್ನು ಪ್ರದರ್ಶಿಸುವುದಕ್ಕಾಗಿ ನಾವು ಇಲ್ಲಿ ಸೇರಿದ್ದೇವೆ.
ನಾವಿದರಿಂದ ಹೆದರುವುದಾಗಲಿ, ಹಿಂಜರಿಯುವುದಾಗಲಿ, ಇಲ್ಲಿಗೆ ನಿಲ್ಲುವುದಾಗಲಿ ಇಲ್ಲಾ ನಾವು #ಭಾರತವನ್ನು #ಕಾಪಾಡುತ್ತೇವೆ, ನಾವು #ಭಾರತದ #ನಿಜವಾದ #ಭಕ್ತರಾಗಿದ್ದೇವೆ .”


ಡಾ.ಬಂಜಗೆರೆ ಜಯಪ್ರಕಾಶ್ ,
ಸಂಶೋಧಕರು,ಲೇಖಕರು.
(ನಿನ್ನೆಶಿವಮೊಗ್ಗದಲ್ಲಿ ನಡೆದ #ನಾನುಗೌರಿ ರ್ಯಾಲಿಯಲ್ಲಿ )

Please follow and like us:
error