ಸಮಸ್ತ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲು ಸಿಗಬೇಕು-ನಿರಾಣಿ

ವಿಜಯಾನಂದ ಕಾಶಪ್ಪನವರಷ್ಟು ದೊಡ್ಡ ಲೀಡರ್ ನಾನಲ್ಲ.ಅವರು ಬಹಳ ದೊಡ್ಡವರು ರಾಷ್ಟ್ರೀಯ ಅಧ್ಯಕ್ಷರು


ಕೊಪ್ಪಳ: ಕೇವಲ ಪಂಚಮಸಾಲಿ ಅಷ್ಟೇ ಅಲ್ಲದೆ ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ 2 ಎ ಮೀಸಲಾತಿ ಸಿಗಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೊಸ ಬಾಂಬ್ ಸಿಡಿಸಿದರು.

ನಗರದ ಗವಿಮಠಕ್ಕೆ ಶನಿವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಂಚಾಮಸಾಲಿ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ. ವಿಜಯಾನಂದ ಕಾಶಪ್ಪನವರಷ್ಟು ದೊಡ್ಡ ಲೀಡರ್ ನಾನಲ್ಲ.
ಅವರು ಬಹಳ ದೊಡ್ಡವರು ರಾಷ್ಟ್ರೀಯ ಅಧ್ಯಕ್ಷರು. ಅವರ ಲೀಡರ್ ಶಿಪ್ ನಲ್ಲಿ ಹೋರಾಟ ಮಾಡಲಿ. ಅವರು ತಿಳಿದಂತೆ ಮಾಡಲಿ. ನಾವು ಸರ್ಕಾರ ಮಟ್ಟದಲ್ಲಿ ಏನು ಮಾಡಬೇಕು ಅದನ್ನ ಮಾಡುತ್ತೇವೆ. ಕೇವಲ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯವಷ್ಟೆ ಅಲ್ಲ ಒಟ್ಟಾರೆ ವೀರಶೈವ ಲಿಂಗಾಯತ ಸಮುದಾಯದಕ್ಕೆ 2 ಎ ಮೀಸಲು ಸಿಗಬೇಕು ಎಂಬುದು ನಮ್ಮ ಅಭಿಪ್ರಾಯ. ಲಿಂಗಾಯತದಲ್ಲೇ ಕುಂಬಾರ, ಹಡಪದದವರು ಸೇರಿ ಇತರರು ಬರುತ್ತಾರೆ. ಅವರ್ಯಾರು ಹೋರಾಟ ಮಾಡಿ‌ ಶಕ್ತಿ ಪ್ರದರ್ಶನ ಮಾಡುವ ಶಕ್ತಿ ಹೊಂದಿಲ್ಲ. ಅವರಲ್ಲಿ ಯಾರೊಬ್ಬರೂ ಎಂಎಲ್ಎ, ಎಂಪಿಯಾಗಿಲ್ಲ. ಅಂಥವರಿಗೂ ಸೌಲಭ್ಯ ಸಿಗಬೇಕು. ಸಮುದಾಯಕ್ಕೆ ಸಹಕಾರ ಮಾಡಬೇಕು ನಾನು ಮಾಡುತ್ತೇನೆ.
ಯತ್ನಾಳ ಅವರು ಯಾಕೆ ಸೈಲೆಂಟ್ ಆಗಿದ್ದಾರೆ ಅವರನ್ನು ಕೇಳಿ. ಅವರಿಗೂ ಸಮುದಾಯದ ಬಗ್ಗೆ ಕಳಕಳಿ ಇದೆ. ನಮಗೂ ಕಳಕಳಿ ಇದೆ. ಪದೇ ಪದೇ ಅದನ್ನೇ ಕೇಳೋದು ಬೇಡ ಎಂದರು.

ರಾಜ್ಯದಲ್ಲಿ ಸದ್ಯ ಪಂಚಮಸಾಲಿ ಮೀಸಲಾತಿ ಅಷ್ಟೆ ಅಲ್ಲ. ಕುರುಬರು, ನಾಯಕರು ಸೇರಿ ಇತರ ಸಮುದಾಯದವರು ಮೀಸಲಾತಿಗೆ ಹೋರಾಟ ಆರಂಭಿಸಿದ್ದಾರೆ. ಅವೆಲ್ಲ ಬೇರೆ ಬೇರೆ ರೀತಿ ಬೇಡಿಕೆಗಳು. ಎಲ್ಲರೂ ಸಿಎಂಗೆ ಮನವಿ ಕೊಡಲಿ. ಈಬಗ್ಗೆ ಸಮಾಜ ಕಲ್ಯಾಣ ಇಲಾಖೆ ಹಾಗು ಹಿಂದುಳಿದ ವರ್ಗಗಳ ಇಲಾಖೆ ಪರಶೀಲಿಸಿ ವರದಿ ನೀಡಲಿವೆ. ಬಳಿಕ ಕ್ಯಾಬಿನೆಟ್ ನಲ್ಲಿ ಆಯಾ ಸಮುದಾಯದ ಸಚಿವರಿದ್ದು, ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವರು ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ, ಮುಖಂಡರಾದ ಅಮರೇಶ ಕರಡಿ, ಚಂದ್ರಶೇಖರ್ , ಪ್ರದೀಪ್ ಹಿಟ್ನಾಳ , ಕಳಕಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು

Please follow and like us:
error