ಸದಾಶಿವ ವರದಿ ಅಂಗಿಕರಿಸಿ ಇಲ್ಲವೆ ತಿರಸ್ಕರಿಸಿ

Koppal ಸದಾಶಿವ ವರದಿ ಅಂಗಿಕರಿಸಿ ಇಲ್ಲವೆ ತಿರಸ್ಕರಿಸಿ – ಮಾತು ತಪ್ಪಿದ ಸಮ್ಮಿಶ್ರ ಸರ್ಕಾರ ಕಾಂಗ್ರೆಸನಿಂದ ಹೊರಬರಲು ರಾಜ್ಯದ ಮಾದಿಗರಲ್ಲಿ ಕರ್ನಾಟಜ ರಾಜ್ಯ ಮಾದಿಗ ಸಂಘಟನೆಗಳ ಮಹಾಸಭಾ ಆಗ್ರಹಿಸಿದೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪದಾಧಿಕಾರಿಗಳು

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿದ ಆರ್ಥಿಕವಾಗಿ ರಾಜಕೀಯವಾಗಿ , ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ದಯನೀಯ ಸ್ಥಿತಿಯಲ್ಲಿರುವ ಮಾದಿಗ ಸಮುದಾಯವು ಸ್ವಾತಂತ್ರ್ಯಾ ನಂತರದ ೭೨ ವರ್ಷಗಳ ನಂತರವೂ ಸರ್ಕಾರದ ಸವಲತ್ತುಗಳನ್ನು .ಸಮರ್ಪಕವಾಗಿ ಪಡೆಯದೇ ವಂಚಿತರಾಗಿರುವುದಕ್ಕೆ ಪರಿಶಿಷ್ಟರಲ್ಲಿರುವ ಸ್ಪಶ್ಯ ಬಲಾಡ್ಯರ ರಾಜಕೀಯದ ಮೇಲಾಟವೆಂಬುದು ತಮಗೆ ತಿಳಿದ ವಿಚಾರವಾಗಿದೆಯಲ್ಲದೇ ಕಾಂಗ್ರೆಸ್ಸಿನಿಂದಲೇ ಈ ಅನ್ಯಾಯ ಮುಂದುವರಿಯಿತ್ತಿರುವುದು ಖೇದಕರ ಸಂಗತಿಯಾಗಿದೆ . ಈ ಹಿನ್ನಲೆಯಲ್ಲಿ ಕಳೆದ ಎರಡೂವರೆ ದಶಕಗಳಿಂದ ನಮ್ಮ ಸಮುದಾಯವು ನಿರಂತರವಾಗಿ ಹೋರಾಟವನ್ನು ಕೈಗೆತ್ತಿಕೊಂಡಿರುವುದಲ್ಲದೆ , ಹಿಂದುಳಿದ ವರ್ಗಗಳಲ್ಲಿ ಪ್ರವರ್ಗ 1 , 2 , 3 ವರ್ಗೀಕರಿಸಿದಂತೆ ಪರಿಶಿಷ್ಟ ಜಾತಿಯಲ್ಲೂ ಒಳ ಮೀಸಲಾತಿಯನ್ನು ವರ್ಗೀಕರಿಸದಿದ್ದರೆ , ತಳ ಸಮುದಾಯಗಳಲ್ಲೇ ಅಕ್ರಮವಾಗಿ ನುಸುಳಿರುವ ಕೆಲ ಬಲಾಡ್ಯ ಕೋಮುಗಳು ಮೀಸಲಾತಿಯ ಸಿಂಹಪಾಲು ಪಡೆದು ನೈಜ ಫಲಾನುಭವಿಗಳಾದ ಅಸ್ಪೃಶ್ಯ ಸಮುದಾಯಗಳು ಇನ್ನಷ್ಟು ಆರ್ಥಿಕ ಸಂಕಷ್ಟಕೊಳ್ಳಪಟ್ಟು ಸಮುದಾಯದ ಮುಖ್ಯ ವಾಹಿನಿಗ್ಗೆ ಬರಲು ಶತಮಾನಗಳು ಬೇಕಾಗುತ್ತದೆ ಎಂಬ ಚಾರಿತ್ರಿಕ ಸತ್ಯವನ್ನು ಹಿಂದಿನ ಘನ ಸರ್ಕಾರಗಳ ಗಮನಕ್ಕೆ ತಂದಿದ್ದರು ಯಾವುದೇ ರೀತಿ ಪರಿಣಾಮವಾಗಿಲ್ಲ . ಅದಕ್ಕಾಗಿ ಸದ್ಯ ರಾಜ್ಯ ಸರ್ಕಾರ ಈಗಿರುವ 101 ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ವಿಸರ್ಜಿಸಿ ಕೇರಳ ಮಾದರಿಯಲ್ಲಿ 1932ರ ಆಶಯದಂತೆ ರಾಜ್ಯದಲ್ಲಿರುವ ಪರಿಶಿಷ್ಟರ ಪಟ್ಟಿಯನ್ನು ಹೊಸದಾಗಿ ತಯಾರಿಸಬೇಕು . ಅದಾಗದಿದ್ದರೆ ಸದಾಶಿವ ವರದಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸನ್ನು ಲೋಕಸಭಾ ಚುನಾವಣೆ ಪೂರ್ವದಲ್ಲಿ ಮಾಡಬೇಕು ಮಾಡದಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮಾದಿಗರು ಕಾಂಗ್ರೆಸ್ಸಿನಿಂದ ಹೊರಬಂದು ಬಿ . ಎಸ್ . ಪಿ . ಜೆ . ಡಿ . ಎಸ್ ಅಥವಾ ಬಿ . ಜೆ . ಪಿ ಯಾವುದಾದರು ಪಕ್ಷಕ್ಕೆ ಮತನೀಡಿ ಕಾಂಗ್ರೆಸನ್ನು ಸೋಲಿಸುವದು ಅನಿವಾರ್ಯತೆ ಉಂಟಾಗಿದೆ . ಸಂವಿಧಾನದ ಪರಿಚ್ಛೇದ – 3 ವಿಚಾರಣಾ ಆಯೋಗ ಕಾಯ್ದೆ 1952ರ ಪ್ರಕಾರ ಅನುಚ್ಛೇದ 15e16 ಹಾಗೂ 338ರ ಪ್ರಕಾರ ಹಿಂದಿನ ಸರ್ಕಾರವು 2005ರಲ್ಲಿ ನಿವೃತ್ತ ನ್ಯಾಯಾಧೀಶರಾದ ಶ್ರೀ . ಎ . ಜಿ . ಸದಾಶಿವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವೊಂದನ್ನು ರಚಿಸಿ ಪರಿಶಿಷ್ಟ ಜಾತಿಗಳ ಸಂವಿಧಾನಿಕ ಸವಲತ್ತುಗಳಾದ ವಿದ್ಯೆ , ಉದ್ಯೋಗ , ಸೇರಿದಂತೆ ಆರ್ಥಿಕ , ಸಾಮಾಜಿಕ ತಾರತಮ್ಯಗಳ ಪರಿಶೀಲನೆಗಾಗಿ ಪ್ರಯತ್ನಿಸಿರುವುದು ಶ್ಲಾಘನೀಯ ಶ್ರೀ ಸದಾಶಿವರ ಆಯೋಗ ರಾಜ್ಯಾದಂತ್ಯ ಸಂಚರಿಸಿ ವರದಿ ಸಿದ್ಧಪಡಿಸಿ 2012ರಲ್ಲಿ ವರದಿ ಸಲ್ಲಿಸಿದೆ . ಆ ವರದಿ ಶಿಪಾರಸ್ಸಿನಂತೆ ಅನುಚ್ಛೇದ 341 ( 3 ) ರ ಪ್ರಕಾರ ಕೇಂದ್ರಕ್ಕೆ ಶಿಫಾರಸ್ಸುಮಾಡಿ ವರದಿ ಅನುಷ್ಠಾನಗೊಳಿಸಿದಲ್ಲಿ ಸರ್ವರಿಗೂ ಸಮಪಾಲು ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಹಬಾಳ್ವೆಯಿಂದ ಬದುಕುವಂತಾಗುತ್ತದೆ . ಆದ್ದರಿಂದ ಸದ್ಯ ಸಚಿವ ಸಂಪುಟದಲ್ಲಿ ವರದಿ ಅಂಗೀಕರಿಸಿ ಬಹಿರಂಗಪಡಿಸಿ ಇಲ್ಲವೇ ವರದಿ ತಿರಸ್ಕರಿಸಬೇಕು ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ , ರಾಜ್ಯದ ಕಾಂಗ್ರೆಸ್ಸಿನ ಅಧಿನಾಯಕರಾದ ಇವರಿಗೆ ಹಲವಾರು ಭಾರಿ ಮನವಿ ಕೊಟ್ಟು ಮುಖತಹ ಬೆಟ್ಟಿಯಾಗಿ ಚರ್ಚಿಸಿದರು ನಮ್ಮ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಅದಕ್ಕಾಗಿ ಇವರ ಈ ಅಹಂನ್ನು ಮುರಿಯಲು ಅನಿವಾರ್ಯವಾಗಿ 2019ರ ಲೋಕಸಭಾ ಚುಣಾವನೆಯಲ್ಲಿ ರಾಜ್ಯದ ಮಾದಿಗರು ಕಾಂಗ್ರೆಸ್ ವಿರುದ್ದ ಮತಚಲಾಯಿಸುವದು ನಿಚ್ಚಳವಾಗಿದೆ . ಈಗಾಗಲೇ ಕಲಬುರ್ಗಿ ಹಾಗೂ ಬಾಗಲಕೋಟೆಯಲ್ಲಿ ನಡೆದಂತಹ ರಾಜ್ಯ ಮಟ್ಟದ ಎರಡು ವಿಚಾರ ಸಂಕಿರಣಗಳಲ್ಲಿ ನಿರ್ಣಯಿಸಿದಂತೆ ರಾಜ್ಯದ ಮಾದಿಗರು ಕಂಕಣಬದ್ಧವಾಗಿ ಇರೋಣ . ಸಂವಿಧಾನ ಪರಿಚ್ಛೇದ 162 , 16 ( 4 ) ರನ್ವಯ ರಾಜ್ಯ ಸರ್ಕಾರಕ್ಕಿದಂತೆ ಸರಿಯಾಗಿ , ಸಮಾನವಾಗಿ ತಾರತಮ್ಯವಾಗದಂತೆ ನೋಡಿಕೊಳ್ಳುವ ಅಧಿಕಾರವು ರಾಜ್ಯ ಸರ್ಕಾರಕ್ಕೆ ಇದೆ . ಇಂಥಹ ವಿಚಕ್ಷಣಾಯುತ ಅಧಿಕಾರದಿಂದಲೇ ಬೇರೆ ರಾಜ್ಯಗಳು ಒಳಮೀಸಲಾತಿ ವರ್ಗೀಕರಣ ಜಾರಿ ಮಾಡಿವೆ ಆದ್ದರಿಂದ ಕರ್ನಾಟಕ ಘಣ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯದಲ್ಲಿರುವ ಶೇ . 5ರ ಮೀಸಲಾತಿಯಲ್ಲಿ ಜನಸಂಖ್ಯಾ ಆಧಾರಿತ – – ಕಟು ಮಾಡಲು ಯಾವ ನ್ಯಾಯಿಕ ಉಲ್ಲಂಘನೆಯಾಗದೇ ಆಧ್ಯ ಕರ್ತವ್ಯಯಾಗಿರುತ್ತದೆ . ಆದ್ದರಿಂದ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿನ 101 ಜಾತಿಗಳಲ್ಲಿ ಆರ್ಥಿಕ , ಸಾಮಾಜಿಕ ಹಿಂದುಳಿಯುವಿಕೆ ಹಿನ್ನಲೆಯಲ್ಲಿ ಜನಸಂಖ್ಯಾವಾರು ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಿ ಬಲಾಡ್ಯರ ಹಾಗೂ ಬಲಹೀನರಲ್ಲಿನ ತಾರತಮ್ಯ ನಿವಾರಣೆಗಾಗಿ ಒಳ ಮೀಸಲಾತಿ ವರ್ಗೀಕರಣ ಆಶಯವನ್ನು ಶಾಸನಬದ್ದವಾಗಿರುವ ಸದಾಶಿವ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು . ಲೋಕಸಭಾ ಚುನಾವಣಾ ಪೂರ್ವದಲ್ಲಿ ಸದಾಶಿವ ವರದಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುವಲ್ಲಿ ವಿಫಲವಾದಲ್ಲಿ ರಾಜ್ಯದ ಮಾದಿಗರು ಹಾಗೂ ಮಾದಿಗ ಸಂಬಂಧಿತ ಮತದಾರರು ಕಾಂಗ್ರೆಸ್ಸಿನಿಂದ ಹೊರಬಂದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಬೇಕೆಂದು ಕರ್ನಾಟಕ ರಾಜ್ಯದ ಮಾದಿಗ ಮಹಾಸಭಾವು ರಾಜ್ಯದ ಮಾದಿಗ ಸಮುದಾಯಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ಪತ್ರಿಕಾ ಗೋಷ್ಠಿಯಲ್ಲಿ . ರಾಜ್ಯ ಕಾರ್ಯದರ್ಶಿ ಸೋಮಂಚೂರಿ – ಭಾಗಲೋಟೆ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಬಿಸ್ನಾಳ , ರಾಜ್ಯ ಸಂಚಾಲಕ ಎಸ್ ಮೊರಳಿ ಮೇಲಿಮನೆ – ಮುತ್ತಣ್ಣ ಬೆಣ್ಣುರ ರಾಜ್ಯ ಸಂಚಾಲಕರು , ‘ ನಾಗಲಿಂಗ ಮಾಳೆಕೊಪ್ಪ ಅಧ್ಯಕ್ಷರು ರಾಜ್ಯ ಪ್ರಚಾರ ಸಮಿತಿ ಕೊಪ್ಪಳ ಉಪಸ್ಥಿತರಿದ್ದರು.

Please follow and like us:
error