ಸಣ್ಣ ನೀರಾವರಿ ಇಲಾಖೆ ಬಹುಕೋಟಿ ಅವ್ಯವಹಾರ ಸಚಿವರಿಗೆ ದೂರು,ಸಿಬಿಐ ತನಿಖೆಗೆ ಒತ್ತಾಯ

Kannadanet NEWS Kustagi :ಕೊಪ್ಪಳ ಸಣ್ಣ ನೀರಾವರಿ ವಿಬಾಗದಲ್ಲಿ ನಡೆದ ಟೆಂಡರ್ ಕಾಮಗಾರಿಗಳಲ್ಲಿ ಬಹುಕೋಟಿ ಅವ್ಯವಹಾರದ ಕರ್ಮ ಕಾಂಡದ ಬಗ್ಗೆ ಕಾನೂನು ಹಾಗೂ ಸಂಸದೀಯ ಶಾಸನ ರಚನೆ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವ ಜೆ ಸಿ ಮಾದುಸ್ವಾಮಿಯವರಿಗೆ ಹೋರಾಟಗಾರ ವಜೀರ್ ಗೋನಾಳ್ ಮನವಿ ಸಲ್ಲಿಸಿದರು. ಕುಷ್ಟಗಿ ತಾಲ್ಲೂಕಿನ ಕಡೇಕೋಷ್ಪ ಗ್ರಾಮದ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಅಡಿಗಲ್ಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು ತೆರಳುವ ವೇಳೆ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ಸಂಪೂರ್ಣ ಮಾಹಿತಿಯ ಹೊತ್ತಿಗೆಯನ್ನು ನೀಡಿ ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಸಿಬಿಐ ತನಿಖೆ ನಡೆಸಬೇಕು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಸಚಿವರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Please follow and like us:
error