ಸಚಿವ ಸ್ಥಾನ ಹಂಚಿಕೆ ಹೈಕಮಾಂಡ್ ತೀರ್ಮಾನ-  ಕಾರಜೋಳ

ಬಾಗಲಕೋಟೆ :  ವಲಸೆ ಬಂದಿರುವ ಶಾಸಕರೆಲ್ಲರಿಗೆ ಸಚಿವ ಸ್ಥಾನ ಹಂಚಿಕೆ ವಿಚಾರ ಹೈಕಮಾಂಡ್ ತೀರ್ಮಾನ ಎಂದು ಜಾರಿಕೊಂಡ ಗೋವಿಂದ ಕಾರಜೋಳ. ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ಡಿಸಿಎಂ‌ ಗೋವಿಂದ್ ಕಾರಜೋಳ ಹೇಳಿಕೆ.

ರಮೇಶ್ ಜಾರಕಿಹೊಳಿ,ಬಿ ಶ್ರೀರಾಮುಲುಗೆ ಡಿಸಿಎಂ ಸ್ಥಾನ  ನೀಡುವದು ಹೈಕಮಾಂಡ್ ನಿರ್ಣಯ ಕ್ಕೆ ಬಿಟ್ಟಿದ್ದುವಕ್ಯಾಬಿನೆಟ್ ಸಭೆಗೆ ಬಿ ಶ್ರೀರಾಮುಲು ಗೈರಾಗಲು ಕಾರಣ ಅವರು ಅನುಮತಿ ಪಡೆದು ಹೋಗಿದ್ದರು. ಅದರ ಬಗ್ಗೆ ಅಪಾರ್ಥ ಕಲ್ಪಿಸಬೇಕಿಲ್ಲ‌‌

ರಾಮುಲು ಮುನಿಸಿಕೊಂಡಿಲ್ಲ.. ನಾನು ಚುನಾವಣಾ ಪೂರ್ವದಲ್ಲಿ ಅನೇಕ ಬಾರಿ ಹೇಳಿದ್ದೇನೆ. ಯಡಿಯೂರಪ್ಪ ಮೂರುವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದೇನೆ. ಕಾಂಗ್ರೆಸ್ ಜೆ ಡಿಎಸ್ ನವರು ಏನೆ ಕುತಂತ್ರ ಮಾಡಿದರೂ ಅವರಿಗೆ ಜಯ ಸಿಗೋದಿಲ್ಲ ಎಂದು ಹೇಳಿದ್ದೆ. ಡಿಸೆಂಬರ್ ೯ ರ ನಂತರ ಕಾಂಗ್ರೆಸ್, ಜೆ ಡಿಎಸ್ ಕಚೇರಿಗೆ ದೀಪ ಹಚ್ಚೋರು ಇರೋದಿಲ್ಲ ಅಂದಿದ್ದೆ. ನನ್ನ ಮಾತು ನಿಜ ಆಗಿದೆ ಕಾಂಗ್ರೆಸ್ ಅಧ್ಯಕ್ಷರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. ಇನ್ನು ಸ್ವಲ್ಪ ದಿನ ಕಾಯಿರಿ ಎರಡು ಪಕ್ಷಗಳು ಇನ್ನು ಅಧೋಗತಿಗೆ ತಲುಪುತ್ತವೆ‌‌..ಇನ್ನು ಸ್ವಲ್ಪ ದಿನದಲ್ಲಿ ಜೆ ಡಿಎಸ್ ಹಾಗೂ ಕಾಂಗ್ರೆಸ್ ನ ಅನೇಕರು ರಾಜೀನಾಮೆ ಕೊಡುತ್ತಾರೆ..

ರೇಪ್ ಇನ್ ಇಂಡಿಯಾ ಎಂವ ರಾಹುಲ್ ಗಾಂಧಿ ಹೇಳಿಕೆ ಪ್ರತಿಕ್ರಿಯೆ ರಾಹುಲ್ ಗಾಂಧಿಗೆ ಜ್ಞಾನದ ಕೊರತೆ ಇದೆ. ಅವರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕೆಂಬ ಪರಿಜ್ಞಾನವಿಲ್ಲದೆ ಮಾತನಾಡುತ್ತಾರೆ. ತಾವೊಬ್ಬ ರಾಷ್ಟ್ರೀಯ ಅಧ್ಯಕ್ಷರಾಗಿದ್ದಂತವರು. ಲೋಕಸಭಾ ಸದಸ್ಯರು  ಯಾವುದೇ ವಿಷಯದ ಬಗ್ಗೆ ಮಾತನಾಡುವ ವೇಳೆ ನಾಲಿಗೆ ಮೇಲೆ ಹಿಡಿತವಿರಬೇಕು.ಈ ಸಲಹೆಯನ್ನು ರಾಹುಲ್ ಗಾಂಧಿಗೆ ನೀಡುತ್ತೇನೆ ಎಂದು ಹೇಳಿದ ಕಾರಜೋಳ

Please follow and like us:
error