fbpx

ಸಂಸದರ  ಆರೋಗ್ಯ ಚೇತರಿಕೆಗಾಗಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ

Kannadanet NEWS  ಕೊಪ್ಪಳ ನಗರದ ಹಟಗಾರ ಪೇಟೆಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಲೋಕಸಭೆ ಸದಸ್ಯ ಸಂಗಣ್ಣ ಕರಡಿವರಿಗೆ ಕೋವಿಡ-19 ಮಾಹಾಮಾರಿಯಿಂದ ಶೀಘ್ರವೇ ಆರೋಗ್ಯ ಸುಧಾರಿಸಲಿ ಎಂದು ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶ್ರೀ ಆಂಜನೇಯ ಚಾರಿಟೆಬಲ್ ಟ್ರಸ್ಟ್ ನಿಂದ ವಿಶೇಷ ಪ್ರಾರ್ಥನಾ ಪೂಜೆಯನ್ನು ಸಲ್ಲಿಸಲಾಯಿತು.


ಸಂಸದರು ಬೇಗ ಗುಣಮುಖರಾಗಿ ಕ್ಷೇತ್ರದ ಜನತೆಯ ಅಭಿವೃದ್ಧಿಯ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ದೇವಸ್ಥಾನ ನಿರ್ಮಾಣ ಸಂದರ್ಭದಲ್ಲಿ ಸಾಕಷ್ಟು ಅಡಚಣೆಗಳು ಬಂದಾಗ  ಸಂಸದರು ಹಾಗೂ ಅಲ್ಲಿರುವ ಭಕ್ತಾದಿಗಳು ಅಭಿಪ್ರಾಯ ಪಡೆದು ಅದೇ ಜಾಗದಲ್ಲಿಯೇ ತಕ್ಷಣ ಸಮಸ್ಯೆಯನ್ನು ಬಗೆಹರಿಸಿ ಹಾಗೂ ನಿರ್ಮಾಣಕ್ಕೆ ಎಲ್ಲ ರೀತಿಯಿಂದ ಸಹಕಾರ ಮಾಡಿ ಭೂಮಿ ಪೂಜೆ ಮಾಡಿದ್ದರು. 

ಈ ಸಂದರ್ಭದಲ್ಲಿ  ಮಹೇಶ ಅಂಗಡಿ, ಶ್ರೀ ಆಂಜನೇಯ ಚಾರಿಟೆಬಲ್ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು

Please follow and like us:
error
error: Content is protected !!