ಸಂವಿಧಾನದ ಪ್ರಮುಖ ಅಂಶಗಳು ಸೇರಿದಂತೆ ಚೆನ್ನಮ್ಮ,ರಾಯಣ್ಣ ಟಿಪ್ಪು,ಜೀಸಸ್ ಪಾಠಗಳನ್ನು ಕೈ ಬಿಟ್ಟ ಸರ್ಕಾರ:Sfi ಖಂಡನೆ

 

ಕೋವಿಡ್ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ಒಂದನೇ ತರಗತಿಯಿಂದ 10ನೇ ತರಗತಿ ವರಗಿನ ಪಠ್ಯ ಕ್ರಮದಲ್ಲಿ ಶೇಕಡಾ 30 ರಷ್ಟು ಪಾಠಗಳನ್ನು ಕಡಿತ ಮಾಡಿದ್ದು ಅದರಲ್ಲಿ ಪ್ರಮುಖವಾದ ಸಂವಿಧಾನ ರಚನಾ ಕರಡು ಸಮಿತಿ ಮತ್ತು ಸಂವಿಧಾನದ ಪ್ರಮುಖ ಅಂಶಗಳು ಹಾಗು ಬ್ರಿಟಿಷ್ ರ ವಿರುದ್ಧ ಕೆಚ್ಚೆದೆಯ ಹೋರಾಟ ಮಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ್,ಹಲಗಲ್ಲಿಯ ವೀರಬೇಡರ ದಂಗೆ ಪ್ರವಾದಿ ಸೇರಿದಂತೆ ಪ್ರಮುಖ ನಾಯಕರ, ಸ್ವಾತಂತ್ರ್ಯ ಹೋರಾಟಗಾರರು ಹಾಗು ಸಂವಿಧಾನ ರಚನಾ ಕರಡು ಸಮಿತಿಯ ಪಾಠಗಳನ್ನು ಕೈ ಬಿಟ್ಟಿರವದನ್ನು ಭಾರತ ವಿದ್ಯಾರ್ಥಿ ಫೆಡರೇಷನ್‌ (Sfi) ರಾಜ್ಯ ಅಧ್ಯಕ್ಷ ಅಮರೇಶ ಕಡಗದ ಖಂಡಿಸಿದ್ದಾರೆ..

ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ತನ್ನ ಹಿಡನ್ ಅಜೆಂಡಾವನ್ನು ಜಾರಿಗೊಳಿಸಲು, ಕೋವಿಡ್ ಕಾರಣಕ್ಕಾಗಿ ಪಠ್ಯಕ್ರಮದಲ್ಲಿ ಇರುವು ಇತರೆ ಪಾಠಗಳನ್ನು ಕಡಿತ ಮಾಡದೆ ಪ್ರಜಾಪ್ರಭುತ್ವದ ಬುನಾದಿಯಾದ ಸಂವಿಧಾನ ಕರಡು, ಪೀಠಕೆ,ಸ್ವಾತಂತ್ರ್ಯ ಹೋರಾಟಗಾರರು ಇತಿಹಾಸ, ಚರಿತ್ರೆಗೆ ಸಂಬಂಧಿಸಿದ ಪಾಠಗಳನ್ನು ಕಡಿತ ಮಾಡಿವುದರ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ, ಅಲ್ಲದೆ ಸಂವಿಧಾನದ ಪೀಠಕೆಯನ್ನು ಇಂದಿನ ಪ್ರಸ್ತುತ ದಿನಗಳಲ್ಲಿ ನಾಡಗೀತೆ, ರಾಷ್ಟ್ರೀಯ ಗೀತೆಯನ್ನು ಹೇಗೆ ದಿನನಿತ್ಯ ಶಾಲೆಗಳಲ್ಲಿ ಹಾಡಲಾಗುತ್ತದೆ ಅದೇ ರೀತಿಯಲ್ಲಿ ಸಂವಿಧಾನದ ಪೀಠಕೆಯನ್ನು ದಿನನಿತ್ಯ ಓದಿಸಬೇಕಾಗಿದೆ ಈ ಸಂದರ್ಭದಲ್ಲಿ ಸಂವಿಧಾನಕ್ಕೆ ಅಪಮಾನ ಮಾಡುವಂತ ಕೆಲಸ ರಾಜ್ಯ ಸರ್ಕಾರ ಮಾಡಬಾರದು ಕೂಡಲೇ ಪರಿಷ್ಕೃತ ಪಠ್ಯಕ್ರಮದಲ್ಲಿನ ಪಾಠಗಳನ್ನು ಸರಿಪಡಿಸಬೇಕು ಇಲ್ಲದೆ ಇದ್ದರೆ ಸಾಹಿತಿಗಳ ವಿದ್ಯಾರ್ಥಿಗಳ ಪ್ರಗತಿಪರರು, ಸಂವಿಧಾನದ ರಕ್ಷಣೆಗಾಗಿ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗುತ್ತವೆ ಎಂದು  Sfi ಜಿಲ್ಲಾ ಅಧ್ಯಕ್ಷ ಸುಭಾನ್ ಸೈಯಾದ, ಶಿವುಕುಮಾರ ಬಾಲಜಿ,ಹನುಮೇಶ ತಿಳಿಸಿದ್ದಾರೆ.

Please follow and like us:
error