ಸಂವಿಧಾನದ ತಂಟೆಗೆ ಬಂದ್ರೆ ದೇಶದಲ್ಲಿ ರಕ್ತ ಕ್ರಾಂತಿ ಆಗುತ್ತೆ- ಮಾಜಿ ಸಿಎಂ ಸಿದ್ದರಾಮಯ್ಯ

ದಾವಣಗೆರೆ-ತಳ ಸಮುದಾಯಗಳ ಪ್ರತಿನಿಧಿಗಳು ಮಹಾನ್ ಸಾಧನೆ ಮಾಡಿದ್ದಾರೆ. ಇದಕ್ಕೆ ಅಂಬೇಡ್ಕರ್ ಹೇಳಿದ್ದು. ಬರೀ ಮತದಾನದ ಹಕ್ಕು ಸಿಕ್ಕರೇ ಸಾಲದು. ಜೊತೆಗೆ ಆರ್ಥಿಕ, 
ರಾಜಕೀಯ ಸ್ವಾತಂತ್ರ್ಯ ಬೇಕು ಎಂದು ಸಮಾನತೆ ಹಕ್ಕು ಸಂವಿಧಾನ ನೀಡಿದೆ. ಅದನ್ನ ಬದಲಿಸುವ ಹುನ್ನಾರ ನಡೆದಿದೆ.ಸಂವಿಧಾನದ ತಂಟೆಗೆ ಬಂದ್ರೆ ದೇಶದಲ್ಲಿ ರಕ್ತ ಕ್ರಾಂತಿ ಆಗುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ. ದಾವಣಗೆರೆ ಜಿಲ್ಲೆಯ ಹರಿಹರದ ನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಹಾಗೂ ವಾಲ್ಮೀಕಿ ಜಯಂತಿ ಯಲ್ಲಿ ಹೇಳಿಕೆ.

ಈಗ ಅನ್ನ ಭಾಗ್ಯ ನಿಲ್ಲಿಸುವ ಹುನ್ನಾರ ನಡೆಯುತ್ತಿದೆ. ನಾನು ಆಡಳಿತ ಪಕ್ಷಕ್ಕೆ ತಾಕೀತು ಮಾಡಿದ್ದೇನೆ.ನಾನು ಇನ್ನೊಮ್ಮೆ ಸಿಎಂ ಅದ್ರೆ ಪ್ರತಿಯೊಬ್ಬರಿಗೆ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದೇ. ನನ್ನ ಯೋಜನೆಗಳ ಬಗ್ಗೆ ಕೆಲವರು ಅಪಪ್ರಚಾರ ಮಾಡಿದ್ರು. ಸಿದ್ದರಾಮಯ್ಯ ಅಹಿಂದಗೆ ಅನ್ಯಾಯ ಮಾಡಿದರು ಎಂದು ಅಪಪ್ರಚಾರ ಮಾಡಿದರು. ಇಂದಿರಾ ಕ್ಯಾಂಟೀನ್ ನಲ್ಲಿ  ಅಹಿಂದಗಳು ಮಾತ್ರ ಊಟ ಮಾಡುತ್ತಾರಾ?. ಅಕ್ಕಿ ಎಲ್ಲ ಜಾತಿ ಜನ ತಗೋತಾರೆ. ಆದ್ರೆ ಸುಳ್ಳು ಹೇಳುವವರ ಮಾತು ಕೇಳಿ ಮತದಾನ ಮಾಡಿದ್ರಾ ಎಂದು ಸಿದ್ದು ಬೇಸರ. ಪ್ರಧಾನಿ ನರೇಂದ್ರ ಮೋದಿ ಎದೆ ಬಹಳ ದೊಡ್ಡದಿದೆ.   ಆದ್ರೆ ಆ ಎದೆಯಲ್ಲಿ ಬಡವರಿಗೆ ಮಿಡಿಯುವ  ಹೃದಯದ ಅಗತ್ಯವಿದೆ.

ಪ್ರಜಾಪ್ರಭುತ್ವ ದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಇದೇ ಕಾರಣ ಸದನಕ್ಕೆ ಮಾಧ್ಯಮಕ್ಕೆ ನಿರ್ಬಂಧ ಹೇರಿದ್ದಾರೆ. ನಾವು ಮಾತಾಡಿದ್ದು ಜನ ಕೇಳ ಬಾರದು ಅಂತ. ಈಗ ಬಿಜೆಪಿ ಬಣ್ಣ ಬಯಲಾಗಿದೆ. ಇನ್ನಾದ್ರು ಮಾಧ್ಯಮಗಳು ಬಿಜೆಪಿ ಬಗ್ಗೆ ಹುಷಾರಾಗಿ ಇರಿ ಎಂದ ಸಿದ್ದರಾಮಯ್ಯ.

Please follow and like us:
error