ಸಂವಿಧಾನದ ಉಳಿವು , ಮಹಿಳಾ ಸ್ವಾತಂತ್ರ್ಯ ಬೇಕಿದೆ

ಕೊಪ್ಪಳ , ಸೆ . 05 : ಹಿರಿಯ ಲೇಖಕಿ , ಸಾಮಾಜಿಕ ಚಿಂತಕಿ , ಪ್ರಗತಿಪರ ಪತ್ರಕರ್ತೆ ಗೌರಿ ಲಂಕೇಶರವರು ಹತ್ಯೆಯಾಗಿ ಮೂರು ವರ್ಷದ ನೋವಿನ ನೆನಪಿಗೆ ” ನಾವೆದ್ದು ನಿಲ್ಲದಿದ್ದರೆ ” ಸಮಾನ ಮನಸ್ಕರ ತಂಡ ನಗರದಲ್ಲಿ ಸಾಂಕೇತಿಕ ಹೋರಾಟ ನಡೆಸಿತು . ನಗರದ ಸಾಹಿತ್ಯ ಭವನದ ಹತ್ತಿರ ವಿವಿಧ ಸಾಮಾಜಿಕ ಕಾರ್ಯಕರ್ತರು ” ನಾವೆದ್ದು ನಿಲ್ಲದಿದ್ದರೆ ” ತಂಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಂವಿಧಾನ ರಕ್ಷಣೆ , ಮಹಿಳಾ ಸ್ವಾತಂತ್ರ್ಯ ಮಹಿಳಾ ಹಕ್ಕುಗಳ ರಕ್ಷಣೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ರಾಜ್ಯಮಟ್ಟದಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಿದೆ . ಜನರಿಗೆ ಸುಳ್ಳು ಹೇಳಿ ಬಂದವರು ಇಂದು ನಮ್ಮನ್ನು ವಿಶೇಷವಾಗಿ ಮಹಿಳೆಯರನ್ನು ಶೋಷಣೆ ಮಾಡುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು . ವಿಸ್ತಾರ್ ಸಂಸ್ಥೆ ಮತ್ತು ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಜಂಟಿಯಾಗಿ ಸಮಾನ ಮನಸ್ಕರನ್ನು ಸೇರಿಸಿಕೊಂಡು ಸಾಂಕೇತಿಕ ಹೋರಾಟವನ್ನು ಹಮ್ಮಿಕೊಂಡಿದ್ದು ಇದನ್ನು ಬರುವ ದಿನಗಳಲ್ಲಿ ಕ್ಷಿಪ್ರಗತಿಯಲ್ಲಿ ಕೊಂಡೊಯ್ಯಲಾಗುವದು ಎಂದರು . ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಎಸ್ , ವಿಕಾಸ್ ಕಿಶೋರ್ ಅವರಿಗೆ ಮನವಿ ಸಲ್ಲಿಸಿದರು . ಅವರ ಮೂಲಕ ರಾಜ್ಯಪಾಲರಿಗೆ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಿದೆ . ವಿಸ್ತಾರ್ ಸಂಸ್ಥೆಯ ಆಶಾ ಎ . ಮತ್ತು ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಜ್ಯೋತಿ ಗೊಂಡಬಾಳ , ಸಂಚಲನ ಸಮಿತಿ ಕಾರ್ಯದರ್ಶಿ ವಿಜಯಲಕ್ಷ್ಮೀ ಗುಳೇದ್ , ಹಿರಿಯ ಪತ್ರಕರ್ತ ವಿಠಪ್ಪ ಗೋರಂಟ್ಲಿ , ಪತ್ರಕರ್ತರಾದ ಮಂಜುನಾಥ ಜಿ . ಗೊಂಡಬಾಳ , ಹೆಚ್ . ವಿ . ರಾಜಾಬಕ್ಷಿ . ಸಿರಾಜ್ ಬಿಸರಳ್ಳಿ , ಪ್ರಭು ಗಾಳಿ , ಆನಂದ ಭಂಡಾರಿ , ಆದಿಲ್ ಪಟೇಲ್ , ಈಶಣ್ಣ ಕೊರ್ಲಹಳ್ಳಿ , ಸಾವಿತ್ರಿ ಮುಜುಂದಾರ್ , ಸಲೀಮಾ ಜಾನ್ . ಶಿವಲೀಲಾ ಹಿರೇಮಠ , ಮಹಾಲಕ್ಷ್ಮಿ , ಆಮೀನ್ . ಸುಂಕಪ್ಪ , ಆರ್ಚ , ಸಾವಿತ್ರಿ ಇತರರು ಇದ್ದರು .

Please follow and like us:
error